ETV Bharat / bharat

ಛತ್ತೀಸ್​ಗಢ: ಓರ್ವ ನಕ್ಸಲ್​ ಹತ್ಯೆ; ಐಇಡಿ ಸ್ಪೋಟದಿಂದ ಇಬ್ಬರು ಯೋಧರಿಗೆ ಗಾಯ - NAXAL KILLED IN ENCOUNTER

ನಕ್ಸಲ್ ಚಟುವಟಿಕೆ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಂಗ ಅರಣ್ಯದಲ್ಲಿ ಇಂದು ಬೆಳಗ್ಗೆ ಜಿಲ್ಲಾ ಮೀಸಲು ಗಾರ್ಡ್​​ (ಡಿಆರ್​ಜಿ) ತಂಡ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

naxal-killed-in-encounter-with-security-personnel-in-bijapur-two-jawans-injured-in-ied-blast
ಸಂಗ್ರಹ ಚಿತ್ರ (ANI)
author img

By ETV Bharat Karnataka Team

Published : Dec 11, 2024, 5:15 PM IST

ಬಿಜಾಪುರ್​​(ಛತ್ತೀಸ್​ಗಢ): ಇಲ್ಲಿನ ಮುಂಗ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಓರ್ವ ನಕ್ಸಲ್​ ಸಾವನ್ನಪ್ಪಿದ್ದು, ಇದೇ ಕಾರ್ಯಾಚರಣೆ ವೇಳೆ ಐಇಡಿ ಸ್ಪೋಟ ಸಂಭವಿಸಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

"ನಕ್ಸಲ್ ಚಟುವಟಿಕೆಗಳ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಂಗ ಅರಣ್ಯದಲ್ಲಿ ಇಂದು ಬೆಳಗ್ಗೆ ಜಿಲ್ಲಾ ಮೀಸಲು ಗಾರ್ಡ್​​ (ಡಿಆರ್​ಜಿ) ತಂಡ ಶೋಧ ಆರಂಭಿಸಿತು. ಈ ವೇಳೆ ನಕ್ಸಲರು ಭದ್ರತಾ ಪಡೆ ವಿರುದ್ಧ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಸಿಬ್ಬಂದಿ ಪ್ರತಿದಾಳಿ ಕೈಗೊಂಡರು. ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್​ ಹತನಾದ. 9ಎಂಎಂಎ ಪಿಸ್ತೂಲ್​, ಜೀವಂತ ಐಇಡಿ ಮತ್ತು ಆ6 ರಿಮೋಟ್​​ ಸ್ವಿಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಐಇಡಿ ಸ್ಪೋಟಿಸಲು ನಕ್ಸಲರು ಈ ರಿಮೋಟ್ ಸ್ವಿಚ್‌ಗಳನ್ನು ಬಳಸುತ್ತಿದ್ದರು. ಕಾರ್ಯಾಚರಣೆ ವೇಳೆ ನಕ್ಸಲರು ಐಇಡಿ ಸ್ಪೋಟಿಸಿದ ಕಾರಣ ಡಿಆರ್​ಜಿಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳವಾರ ಬಿಜಾಪುರದಲ್ಲಿ ಶಂಕಿತ ನಕ್ಸಲರು ಓರ್ವ ಬಿಜೆಪಿ ಕಾರ್ಯಕರ್ತನನ್ನು ಕೊಂದು ಹಾಕಿದ್ದರು. ಘಟನಾ ಸ್ಥಳದಲ್ಲಿ ಲಭ್ಯವಾದ ಕರಪತ್ರದಲ್ಲಿ, ಆತ ಪೊಲೀಸ್ ಮಾಹಿತಿದಾರ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಜಮ್ಮು - ಕಾಶ್ಮೀರ ಹೆದ್ದಾರಿಯಲ್ಲಿ ಐಇಡಿ ಪತ್ತೆ; ತಪ್ಪಿದ ಭಾರೀ ಅನಾಹುತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.