ETV Bharat / bharat

ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮತಿ: ನಿರ್ಧಾರ ಮುಂದೂಡಿದ ರಾಷ್ಟ್ರೀಯ ವನ್ಯಜೀವಿ ಮಂಡಳಿ - ರಾಷ್ಟ್ರೀಯ ವನ್ಯಜೀವಿ ಮಂಡಳಿ

ಕಳಸಾ ಬಂಡೂರಿ ನಾಲಾ ಯೋಜನೆಗಾಗಿ ಅರಣ್ಯ ಭೂಮಿಯನ್ನು ಬಳಕೆ ಮಾಡುವುದಕ್ಕಾಗಿ ತನ್ನ ತೀರ್ಮಾನ ತಿಳಿಸುವ ವಿಚಾರವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಮುಂದೂಡಿದೆ. ಎನ್‌ಬಿಡಬ್ಲ್ಯುಎಲ್‌ನ ಸ್ಥಾಯಿ ಸಮಿತಿಯಿಂದ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ತಿಳಿಸಲಾಗಿದೆ.

Etv Bharat
Etv Bharat
author img

By PTI

Published : Feb 10, 2024, 7:36 AM IST

ನವದೆಹಲಿ: ಕರ್ನಾಟಕ ಸರ್ಕಾರದ ಕಳಸಾ ಬಂಡೂರಿ ನಾಲಾ ನೀರಿನ ತಿರುವು ಯೋಜನೆಯ ಒಂದು ಭಾಗದ ನಿರ್ಮಾಣಕ್ಕಾಗಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಅರಣ್ಯ ಭೂಮಿಯನ್ನು ಬಳಕೆ ಮಾಡುವ ಕುರಿತು ನಿರ್ಧಾರವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಮುಂದೂಡಿದೆ.

ಎನ್‌ಬಿಡಬ್ಲ್ಯುಎಲ್‌ನ ಸ್ಥಾಯಿ ಸಮಿತಿಯಿಂದ ಜನವರಿ 30 ರಂದು ನಡೆದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ಸಭೆಯ ನಡಾವಳಿಗಳ ಪ್ರಕಾರ, ರಾಜ್ಯ ಸರ್ಕಾರವು ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶಗಳ ನಡುವಿನ ಹುಲಿ ಕಾರಿಡಾರ್‌ನಿಂದ 10.68 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಡೈವರ್ಶನ್ ವೇರ್, ಜಾಕ್ ವೆಲ್ ಕಮ್-ಪಂಪ್ ಹೌಸ್ ಮತ್ತು ಸಬ್ ಸ್ಟೇಷನ್ ನಿರ್ಮಾಣಕ್ಕಾಗಿ ಅರಣ್ಯ ಭೂಮಿ ಅಗತ್ಯತೆ ಇದೆ ಎಂದು ಕೋರಲಾಗಿದೆೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಪೈಪ್‌ಲೈನ್ ಮತ್ತು ವಿದ್ಯುತ್ ಲೈನ್​ ಅವಳಡಿಸುವ ಅಗತ್ಯವಿದ್ದು ಅನುಮೋದನೆ ನೀಡುವಂತೆ ಕರ್ನಾಟಕದ ಮುಖ್ಯ ವನ್ಯಜೀವಿ ವಾರ್ಡನ್, ರಾಜ್ಯ ವನ್ಯಜೀವಿ ಮಂಡಳಿ ಮತ್ತು ರಾಜ್ಯ ಸರ್ಕಾರವು ಮಂಡಳಿ ಮುಂದೆ ಈ ಪ್ರಸ್ತಾವನೆಯನ್ನು ಇರಿಸಿದೆ. ಈ ಸಂಬಂಧ ಶಿಫಾರಸು ಕೂಡಾ ಮಾಡಲಾಗಿದೆ ಎಂದು ಸ್ಥಾಯಿ ಸಮಿತಿಗೆ ತಿಳಿಸಲಾಯಿತು.

ಈ ವಿಷಯವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಡಿ ಬರುವುದರಿಂದ ಸಭೆಯ ನಡಾವಳಿಗಳ ಪ್ರಕಾರ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಅಥವಾ ನಿರ್ಧಾರ ತೆಗೆದುಕೊಂಡಿಲ್ಲ. 1972 ರ ವನ್ಯಜೀವಿ (ರಕ್ಷಣೆ) ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಎನ್‌ಟಿಸಿಎಯಿಂದ ಪ್ರಸ್ತಾವನೆಗೆ ಪ್ರತಿಕ್ರಿಯೆಗಳನ್ನು ಕೇಳಬೇಕೆಂದು ಸ್ಥಾಯಿ ಸಮಿತಿಯು ನಿರ್ಧರಿಸಿದೆ. ಅದರಂತೆ, ಮುಂದಿನ ಸಭೆಗೆ ಪ್ರಸ್ತಾವನೆಯನ್ನು ಮುಂದೂಡಲಾಗಿದೆ ಎಂದು ಎಂಒಎಂ ತಿಳಿಸಿದೆ.

ಕರ್ನಾಟಕ ಸರ್ಕಾರದ ಕಳಸಾ - ಬಂಡೂರಿ ಯೋಜನೆಯು ಧಾರವಾಡ, ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಮಹದಾಯಿ ನದಿ ನೀರನ್ನು ರಾಜ್ಯದ ಮಲಪ್ರಭಾ ನದಿಗೆ ತಿರುಗಿಸಲು ಪ್ರಸ್ತಾಪಿಸಿದೆ. ಮಹದಾಯಿ ನದಿಯು ಕರ್ನಾಟಕ ಮತ್ತು ಗೋವಾ ಮೂಲಕ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಗೋವಾದಲ್ಲಿ ಮಾಂಡೋವಿ ಎಂದು ಕರೆಯಲ್ಪಡುವ ಇದು ಪಶ್ಚಿಮ ರಾಜ್ಯದ ಎರಡು ಪ್ರಮುಖ ನದಿಗಳಲ್ಲಿ ಮಹಾದಾಯಿ ಕೂಡಾ ಒಂದಾಗಿದೆ. ಮಹದಾಯಿ ನೀರಿನ ತಿರುವು ಕರ್ನಾಟಕ ಮತ್ತು ಗೋವಾ ನಡುವಿನ ವಿವಾದದ ಕೇಂದ್ರ ಬಿಂದುವಾಗಿದೆ.

ಇದನ್ನೂ ಓದಿ: ಯುಪಿಎ ಸರ್ಕಾರದ ವೇಳೆ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.