ETV Bharat / bharat

ಖೋ-ಖೋ ಆಟಗಾರ್ತಿ ಮೇಲೆ ರಾಷ್ಟ್ರೀಯ ಆಟಗಾರ ಕೋಚ್​ನಿಂದ ದೌರ್ಜನ್ಯ; ಪ್ರಕರಣ ದಾಖಲು - KHO KHO PLAYER COACH MOLESTED

ಘಟನೆಯಿಂದ ನೊಂದ ಬಾಲಕಿ ಈ ಕುರಿತು ಪೋಷಕರಿಗೆ ತಿಳಿಸಿದ್ದಾಳೆ. ಈ ವಿಷಯ ಅರಿತ ಬಾಲಕಿ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

national-kho-kho-player-coach-molested-13-year-player-in-maharashtra
ಕೋಚ್​ನಿಂದ ಆಟಗಾರ್ತಿ ಮೇಲೆ ದೌರ್ಜನ್ಯ (ಈಟಿವಿ ಭಾರತ್​​)
author img

By ETV Bharat Karnataka Team

Published : Oct 16, 2024, 1:01 PM IST

ಔರಂಗಬಾದ್​: 13 ವರ್ಷದ ಅಪ್ರಾಪ್ತ ವಯಸ್ಸಿನ ಖೋ- ಖೋ ಆಟಗಾರ್ತಿ ಮೇಲೆ ರಾಷ್ಟ್ರಮಟ್ಟದ ಆಟಗಾರನಾಗಿರುವ ಕೋಚ್​​ ಲೈಂಗಿಕ ದೌರ್ಜನ್ಯ ನಡೆಸಿರುವಂತಹ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ತರಬೇತುದಾರ, ಹೋಟೆಲ್​ ಮಾಲೀಕ, ಮ್ಯಾನೇಜರ್​ ಮೇಲೆ ವೇದಾಂತ್​ನಗರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಪರ್ಧೆಗಾಗಿ ಮುಂಬೈಗೆ ಹೋಗಬೇಕು ಎಂದು ರೈಲ್ವೆ ನಿಲ್ದಾಣಕ್ಕೆ ಬರುವಂತೆ ಕೋಚ್​​ ಅಪ್ರಾಪ್ತ ಅಥ್ಲೀಟ್​ ಪಟುವನ್ನು ಕರೆದಿದ್ದರು. ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಕಾರ್​ ಬರುವುದಕ್ಕೆ ತಡವಾಗುತ್ತದೆ ಎಂದು ಹೇಳಿ ಹೋಟೆಲ್​ಗೆ ಕರೆದೊಯ್ದಿದ್ದರು. ಈ ವೇಳೆ ತರಬೇತುದಾರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಘಟನೆ ಬಳಿಕ ಗ್ರಾಮ ಸೇರಿದ ನಂತರವೂ ಬಾಲಕಿಗೆ ತನ್ನೊಂದಿಗೆ ಸಹಕರಿಸುವಂತೆ ಕೋಚ್​ ಬೇಡಿಕೆ ಇಟ್ಟಿದ್ದರು. ಇದರಿಂದ ನೊಂದ ಬಾಲಕಿ ಘಟನೆ ಕುರಿತು ಪೋಷಕರಿಗೆ ತಿಳಿಸಿದ್ದಾಳೆ. ಈ ವಿಷಯ ಅರಿತ ಬಾಲಕಿಯ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಖೋ- ಖೋ ಆಟಗಾರ್ತಿ ಮೇಲೆ ದೌರ್ಜನ್ಯ: ಪೈಥಾನ್​ ತಾಲೂಕಿನಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದು, ಖೋ- ಖೋ ಆಟಗಾರ್ತಿಯಾಗಬೇಕು ಎಂಬ ಕನಸನ್ನು ಹೊಂದಿದ್ದಳು. ಇದಕ್ಕಾಗಿ ದೊಡ್ಡ ದೊಡ್ಡ ಟೂರ್ನಮೆಂಟ್​ನಲ್ಲಿ ಆಕೆ ಆಟವಾಡಬೇಕಿತ್ತು. ಈ ವೇಳೆ ಆಕೆಯ ಕುಟುಂಬ ಬಾಲಕಿಗೆ ರಾಷ್ಟ್ರೀಯ ಆಟಗಾರರಾಗಿದ್ದ ಕೋಚ್​ ಜಗನ್ನಾಥ್​ ಶಿವಾಜಿ ಗೊರ್ಡೆ ಸಿದ್ಧತೆಗೆ ಸಹಾಯ ಮಾಡುತ್ತಾರೆ ಎಂದು ನಂಬಿದ್ದರು. ಸೆಪ್ಟೆಂಬರ್​ 25ರಂದು ಟೂರ್ನಮೆಂಟ್​​ಗೆ ಮುಂಬೈಗೆ ಹೋಗಾಗಬೇಕಾಗುತ್ತದೆ ಎಂದು ಕೋಚ್​ ಕೂಡ ಕುಟುಂಬಸ್ಥರಿಗೆ ನಂಬಿಸಿದ್ದರು. ಬಾಲಕಿಗೆ ಔರಂಗಾಬಾದ್​ ರೈಲ್ವೆ ನಿಲ್ದಾಣಕ್ಕೆ ಬರುವಂತೆ ಹೇಳಿದ್ದರು. ಬಳಿಕ ಮುಂಬೈಗೆ ರಾತ್ರಿ ಟ್ರೈನ್​ ಇದ್ದು, ಅಲ್ಲಿಯವರೆಗೆ ನಾವು ಹೋಟೆಲ್​ನಲ್ಲಿ ವಿರಾಮ ಪಡೆಯೋಣ ಎಂದು ಬಾಲಕಿ ಮನವೊಲಿಸಿದ್ದರು. ಹೋಟೆಲ್​ನಲ್ಲಿ ಕೋಣೆ ಬುಕ್​ ಮಾಡಿದ್ದ ಕೋಚ್​ ಆಕೆ ಮೇಲೆ ಬಲವಂತವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.

ನಿಲ್ಲದ ದೌರ್ಜನ್ಯ: ಘಟನೆಯಿಂದ ಭೀತಿಗೊಳಗಾಗಿದ್ದ ಬಾಲಕಿ, ಈ ಕುರಿತು ಯಾರಿಗೂ ಯಾವುದೇ ಮಾಹಿತಿಯನ್ನು ತಿಳಿಸಿರಲಿಲ್ಲ. ತನ್ನ ಗ್ರಾಮಕ್ಕೆ ಮರಳಿದ ಬಳಿಕ ಆಕೆಗೆ ಕರೆ ಮಾಡಿದ ಕೋಚ್​​ ತನ್ನೊಂದಿಗೆ ಸಹಕಾರ ನೀಡುವಂತೆ ಒತ್ತಾಯಿಸಿದ್ದ. ಇದರಿಂದ ಬೆದರಿದ ಬಾಲಕಿ ತಕ್ಷಣಕ್ಕೆ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಘಟನೆ ಸಂಬಂಧ ಪೊಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮುಂಬೈನ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.