ಪುಣೆ (ಮಹರಾಷ್ಟ್ರ): ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ನ್ನು ಅಪರಾಧಿಗಳೆಂದು ಪುಣೆಯ ಸೆಷನ್ ಕೋರ್ಟ್ ತೀರ್ಪು ನೀಡಿದೆ. ಜೊತೆಗೆ ಈ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಐದು ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಪುಣೆ ಸೆಷನ್ಸ್ ನ್ಯಾಯಾಲಯವು, ಆರೋಪಿಗಳಾದ ವೀರೇಂದ್ರ ತಾವ್ಡೆ, ಸಂಜೀವ್ ಪುನೋಲ್ಕರ್, ವಿಕ್ರಮ್ ಭಾವೆ ಅವರನ್ನು ಖುಲಾಸೆಗೊಳಿಸಿದೆ. ಆದ್ರೆ, ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ಗೆ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ನರೇಂದ್ರ ದಾಭೋಲ್ಕರ್ ಪುತ್ರನ ಪ್ರತಿಕ್ರಿಯೆ: ನರೇಂದ್ರ ದಾಭೋಲ್ಕರ್ ಅವರ ಪುತ್ರ ಡಾ.ಹಮೀದ್ ದಾಭೋಲ್ಕರ್ ಈ ಕುರಿತು ಪ್ರತಿಕ್ರಿಯಿಸಿ, ''ಬುದ್ಧಿಜೀವಿಗಳಿಗೆ ಬೆದರಿಕೆ ಇನ್ನೂ ಮುಗಿದಿಲ್ಲ. ಚಿಂತಕರನ್ನು ನಿರ್ಮೂಲನೆ ಮಾಡುವ ಮೂಲಕ ಆಲೋಚನೆಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಮುಖ್ಯ ಸಂಚಾಲಕನನ್ನು ಬಂಧಿಸಬೇಕು. ಮೂವರು ಆರೋಪಿಗಳ ಬಿಡುಗಡೆ ವಿರುದ್ಧ ನಾವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುತ್ತೇವೆ'' ಎಂದು ತಿಳಿಸಿದರು.
ಮುಕ್ತಾ ದಾಭೋಲ್ಕರ್ ಹೇಳಿಕೆ: ನರೇಂದ್ರ ದಾಭೋಲ್ಕರ್ ಅವರ ಪುತ್ರಿ ಮುಕ್ತಾ ದಾಭೋಲ್ಕರ್ ಕೂಡ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ. ''ಗೌರಿ ಲಂಕೇಶ್ ಹತ್ಯೆಯ ನಂತರ ಸಚಿನ್ ಅಂದುರೆ, ಶರದ್ ಕಲ್ಸರ್ಕರ್ ಅವರನ್ನು ಬಂಧಿಸಲಾಗಿತ್ತು. ತನಿಖೆ ಒಂದು ಹಂತದಲ್ಲಿ ನಿಂತಿತ್ತು. ಶೂಟರ್‌ಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಇದು 11 ವರ್ಷಗಳ ಯುದ್ಧ. ಮೂಢನಂಬಿಕೆ ನಿರ್ಮೂಲನೆ ಸಮಿತಿ ಮತ್ತು ಮಾಧ್ಯಮಗಳು ಈ ಪ್ರಕರಣವನ್ನು ಎತ್ತಿಹಿಡಿದಿವೆ. ತನಿಖಾ ಸಂಸ್ಥೆಗಳು ಈ ಪ್ರಕರಣದ ಸೂತ್ರದಾರನ ಪತ್ತೆ ಮಾಡಬೇಕು. ಇದು ವ್ಯಾಪಕ ಭಯೋತ್ಪಾದನೆಯ ಪಿತೂರಿಯ ಭಾಗವಾಗಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ'' ಎಂದು ಹೇಳಿದರು.
ಇದನ್ನೂ ಓದಿ: ಶಿವಕಾಶಿ ಬಳಿಯ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 9 ಜನರು ಸಾವು, ಸಿಎಂ ಸ್ಟಾಲಿನ್ ಸಂತಾಪ - Firecracker Explosion