ETV Bharat / bharat

ಕೆಲಸ ಕೊಡಿಸುವ ನೆಪದಲ್ಲಿ ಮೈಸೂರಿನ ಯುವತಿಗೆ ಲೈಂಗಿಕ ದೌರ್ಜನ್ಯ, ಮಹಿಳೆ ಸೇರಿ ಇಬ್ಬರು ಸೆರೆ - Sexual Assault - SEXUAL ASSAULT

ತಮಿಳುನಾಡಿನ ಚೆನ್ನೈನಲ್ಲಿ ಮೈಸೂರು ಮೂಲದ 19 ವರ್ಷದ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Jul 21, 2024, 1:31 PM IST

ಚೆನ್ನೈ(ತಮಿಳುನಾಡು): ಉದ್ಯೋಗ ಕೊಡಿಸುವುದಾಗಿ ಹೇಳಿ ಮೈಸೂರು ಮೂಲದ 19 ವರ್ಷದ ಯುವತಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಆರೋಪಿ ಹಾಗೂ ಆತನ ಸಹಚರಳನ್ನು ಪೊಲೀಸರು ಬಂಧಿಸಿದ್ದಾರೆ.

ವೆಲ್ಲೂರು ಮೂಲದ ಸತೀಶ್ ಕುಮಾರ್ (32) ಬಂಧಿತ ಆರೋಪಿ. ಈತನ ಸಹಚರೆ ಎನ್ನಲಾದ ಮಡಿಪಾಕ್ಕಂ ಮೂಲದ ಶಕೀಲಾ (33) ಎಂಬಾಕೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೈಲಿಗೆ ಸ್ಥಳಾಂತರಿಸಿದ್ದಾರೆ. ಪ್ರಮುಖ ಆರೋಪಿ ಚೆನ್ನೈನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ವಿವರ: ಯುವತಿ ಇತ್ತೀಚೆಗೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ತನ್ನ ತಂದೆ-ತಾಯಿಯನ್ನು ಕೊಯಮತ್ತೂರಿನಲ್ಲಿ ಬಿಟ್ಟು, ಕೆಲಸ ಹುಡುಕಿಕೊಂಡು ಚೆನ್ನೈಗೆ ಬಂದಿದ್ದಳು. ಕೋವಿಲಂಬಾಕ್ಕಂನಲ್ಲಿರುವ ಸ್ನೇಹಿತರ ಮನೆಗೆ ತಂಗಲು ತೆರಳಿದ್ದಳು. ಬಳಿಕ ತಾನು ಮೈಸೂರಿಗೆ ಮರಳಿ ಹೋಗಬೇಕೆಂದು ನಿರ್ಧರಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು.

ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಯುವತಿಯನ್ನು ಪರಿಚಯ ಮಾಡಿಕೊಂಡು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೇ, ಕೆಲಸ ಸಿಗುವವರೆಗೂ ಅರುಂಬಕ್ಕಂನಲ್ಲಿರುವ ತನ್ನ ಸ್ನೇಹಿತೆಯ ಮನೆಯಲ್ಲಿ ಇರುವಂತೆ ಹೇಳಿದ್ದಾನೆ. ಇದನ್ನೇ ನಂಬಿದ ಯುವತಿ ಅರುಂಬಕ್ಕಂನ ಮನೆಯೊಂದಕ್ಕೆ ತಂಗಲು ಹೋಗಿದ್ದಳು. ಆದರೆ, ಅಲ್ಲಿಗೆ ತಲುಪಿದಾಗ ಮನೆ ಬಾಗಿಲು ಹಾಕಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ, ದುರುಳನ ಗೆಳತಿ ಸಹ ಅಲ್ಲಿಯೇ ಇದ್ದಳು ಎನ್ನಲಾಗಿದೆ.

ಬಳಿಕ ಸಂತ್ರಸ್ತೆ ತನ್ನ ಮೊಬೈಲ್​ ಫೋನ್ ಮೂಲಕ ಪೊಲೀಸ್ ತುರ್ತು ಸಂಖ್ಯೆಗೆ ಸಂಪರ್ಕಿಸಿ, ತನ್ನ ಮೇಲೆ ನಡೆದ ಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಅಂತೆಯೇ, ಕೊಯಂಬೆಡು ಮಹಿಳಾ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ಪೊಲೀಸರು ಮನೆಗೆ ಬಂದು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಅಲ್ಲದೇ, ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ಆತನ ಸ್ನೇಹಿತೆಯನ್ನೂ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿ ಅಪಹರಿಸಿ ಹೋಟೆಲ್​ನಲ್ಲಿ ಸಾಮೂಹಿಕ ಅತ್ಯಾಚಾರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.