ETV Bharat / bharat

ಮುಸ್ಲಿಮರು ಶಾಹಿ ಈದ್ಗಾ, ಜ್ಞಾನವಾಪಿಯನ್ನು ಹಿಂದುಗಳಿಗೆ ಹಸ್ತಾಂತರಿಸಲಿ: ಪುರಾತತ್ವಶಾಸ್ತ್ರಜ್ಞ ಮೊಹಮದ್​

ಪುರಾತತ್ವಶಾಸ್ತ್ರಜ್ಞ ಕೆಕೆ ಮೊಹಮದ್​ ಅವರು ರಾಮಮಂದಿರ ನಿರ್ಮಾಣವನ್ನು ಹೊಗಳಿದ್ದಾರೆ. ಜೊತೆಗೆ ಶಾಹಿ ಈದ್ಗಾ, ಜ್ಞಾನವಾಪಿ ಸ್ಥಳ ಹಿಂದುಗಳಿಗೆ ಧಕ್ಕಬೇಕು ಎಂದೂ ಹೇಳಿದ್ದಾರೆ.

ಪುರಾತತ್ವಶಾಸ್ತ್ರಜ್ಞ ಮೊಹಮದ್​
ಪುರಾತತ್ವಶಾಸ್ತ್ರಜ್ಞ ಮೊಹಮದ್​
author img

By ETV Bharat Karnataka Team

Published : Jan 21, 2024, 7:06 PM IST

ತಿರುವನಂತಪುರ (ಕೇರಳ) : ಅಯೋಧ್ಯೆ ಭೂಮಿಯು ರಾಮನ ಜನ್ಮ ಸ್ಥಳ ಎಂದು ಉತ್ಖನನದಲ್ಲಿ ಸಾರಿ ಹೇಳಿದ್ದ ನಿವೃತ್ತ ಪುರಾತತ್ವಶಾಸ್ತ್ರಜ್ಞ ಕೆಕೆ ಮೊಹಮ್ಮದ್ ಅವರು, ಮಥುರಾದಲ್ಲಿನ ಶಾಹಿ ಈದ್ಗಾ, ವಾರಾಣಸಿಯ ಜ್ಞಾನವಾಪಿ ಸ್ಥಳವನ್ನು ಮುಸ್ಲಿಮರು ಹಿಂದುಗಳಿಗೆ ಬಿಟ್ಟುಕೊಡಬೇಕು. ಇದೊಂದೇ ಎಲ್ಲ ಸಮಸ್ಯೆಗಳಿಗೆ ಇರುವ ಪರಿಹಾರ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಅಯೋಧ್ಯೆ ರಾಮಜನ್ಮಭೂಮಿ ಎಂಬುದರಲ್ಲಿ ಸಂಶಯವೇ ಇಲ್ಲ. ಉತ್ಖನನದ ವೇಳೆ ಇದಕ್ಕೆ ಪೂರಕ ಸಾಕ್ಷಿಗಳು ದೊರಕಿವೆ. ಅದರಂತೆ ಶಾಹಿ ಈದ್ಗಾ ಮತ್ತು ಜ್ಞಾನವಾಪಿ ಮಸೀದಿಯ ಸ್ಥಳ ಹಿಂದುಗಳಿಗೆ ಸೇರಬೇಕು. ಅದು ಅವರ ದೈವಿಕ ನಂಬಿಕೆಯ ಜಾಗ ಎಂದಿದ್ದಾರೆ.

ಈ ಎರಡೂ ಸ್ಥಳಗಳನ್ನು ಹಿಂದೂಗಳಿಗೆ ವಾಪಸ್​ ನೀಡುವುದೇ ಈಗಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ. ಧಾರ್ಮಿಕ ನಾಯಕರು ಒಗ್ಗಟ್ಟಾಗಿ ಮಸೀದಿಗಳು ಇರುವ ಜಾಗವನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಬೇಕು. ಕಾಶಿ, ಮಥುರಾ ಮತ್ತು ಅಯೋಧ್ಯೆ ಹಿಂದೂಗಳಿಗೆ ಬಹಳ ಮುಖ್ಯವಾಗಿವೆ. ಏಕೆಂದರೆ ಅವು ಶಿವ, ಕೃಷ್ಣ ಮತ್ತು ಶ್ರೀರಾಮನ ಪವಿತ್ರ ಸ್ಥಳಗಳಾಗಿವೆ. ಇಲ್ಲಿರುವ ಮಸೀದಿಗಳು ಮುಸ್ಲಿಮರಿಗೆ ಯಾವುದೇ ಪೂಜ್ಯನೀಯ ಸ್ಥಳಗಳಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಸಂತಸ: ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿದ್ದು, ಓರ್ವ ವೃತ್ತಿಪರ ಪುರಾತತ್ವಶಾಸ್ತ್ರಜ್ಞನಾಗಿ ಖುಷಿ ಪಡುತ್ತೇನೆ. ಅಯೋಧ್ಯೆಯಲ್ಲಿ ಭಗವಾನ್ ರಾಮನ ದಿವ್ಯ ದೇಗುಲ ಕಟ್ಟಿರುವುದು ನನಗೆ ಸಂತೋಷ ತಂದಿದೆ. ನಾನು ಹಿಂದೂ ಅಥವಾ ಮುಸ್ಲಿಂ ಅಲ್ಲ. ವೃತ್ತಿಪರ ಪುರಾತತ್ವಶಾಸ್ತ್ರಜ್ಞ. ಹಲವಾರು ವರ್ಷಗಳ ಉತ್ಖನನ ಮತ್ತು ವೈಜ್ಞಾನಿಕ ಸಂಶೋಧನೆಗಳು ಸರಿಯಾದ ಫಲಿತಾಂಶ ನೀಡಿವೆ ಎಂಬುದಕ್ಕೆ ಮಂದಿರವೇ ಸಾಕ್ಷಿ ಎಂದಿದ್ದಾರೆ.

ಮಂದಿರ ಬಗ್ಗೆ ಏನಂತಾರೆ?: ಪುರಾತತ್ವಶಾಸ್ತ್ರಜ್ಞರಾದ ಕೆಕೆ ಮೊಹಮ್ಮದ್ ಅವರು ಪ್ರೊಫೆಸರ್ ಬಿಬಿ ಲಾಲ್ ನೇತೃತ್ವದ ತಂಡದಲ್ಲಿದ್ದರು. ಬಾಬ್ರಿ ಮಸೀದಿಯ ಉತ್ಖನನದ ವೇಳೆ ಹಲವಾರು ಶಾಸನಗಳು, ಕಂಬಗಳು, ಕಟ್ಟಡದ ಗೋಡೆಗಳ ಮೇಲೆ ವಿರೂಪಗೊಳಿಸಲಾದ ಹಲವಾರು ಹಿಂದೂ ದೇವತೆಗಳು ಚಿತ್ರಣಗಳು, ಪ್ರಾಣಿಗಳು, ಯೋಧರು, ಶಿಲ್ಪಕಲೆಗಳು, ಪ್ರತಿಮೆಗಳನ್ನು ಪತ್ತೆ ಮಾಡಲಾಗಿತ್ತು.

ಮೊಹಮ್ಮದ್ ಅವರು ಉತ್ಖನನ ಕಾರ್ಯವನ್ನು ಪ್ರಾರಂಭಿಸಿದಾಗ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ನಂತರ ಎಎಸ್​ಐ ಪುರಾತತ್ವ ಕಾಲೇಜಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪೂರೈಸಿದರು. ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಪತ್ನಿ ಜೈಶ್ರೀ ರಾಮನಾಥನ್ ಅವರು ಉತ್ಖನನ ಭಾಗವಾಗಿದ್ದರು ಎಂದು ಮೊಹಮ್ಮದ್ ನೆನಪಿಸಿಕೊಂಡಿದ್ದಾರೆ.

1992 ರಲ್ಲಿ ಮಸೀದಿ ಕೆಡವಿದ ನಂತರ, ಅಲ್ಲಿ ರಾಮಮಂದರಿ ಇತ್ತು ಎಂಬುದಕ್ಕೆ ಹಲವು ಮಹತ್ವದ ಪುರಾವೆಗಳು ದೊರೆತಿವೆ. ಆದರೆ, ಪುರಾತತ್ವಶಾಸ್ತ್ರಜ್ಞನಾಗಿ ಐತಿಹಾಸಿಕ ಮತ್ತು ಪುರಾತತ್ವ ಶಾಸ್ತ್ರದ ಪ್ರಾಮುಖ್ಯತೆಯನ್ನು ಹೊಂದಿರುವ ಯಾವುದೇ ಕಟ್ಟಡ ಕೆಡುವುದನ್ನು ಎಂದಿಗೂ ಬೆಂಬಲಿಸಲ್ಲ. ಬಾಬರಿ ಮಸೀದಿ ಧ್ವಂಸ ಮಾಡಿದಾಗ ನಾನು ಬೆಚ್ಚಿಬಿದ್ದಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ: ಹರಿಯಾಣದಲ್ಲಿ ಶಾಲೆಗಳಿಗೆ ಅರ್ಧದಿನ ರಜೆ, 7 ಜಿಲ್ಲೆಗಳಲ್ಲಿ ಹೈಅಲರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.