ETV Bharat / bharat

ಜ್ಯೋತಿಷಿಯ ಮಾತು ಕೇಳಿ ಪತ್ನಿ ಸೇರಿ ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ವ್ಯಕ್ತಿ! - MAN SHOT HIS WIFE AND CHILDREN

ಎರಡು ದಶಕಗಳ ಹಿಂದೆ ತನ್ನ ಕಿರಿಯ ಸಹೋದರನ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿ, ಮೂವರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

murder-in-varanasi-in-varanasi-young-man-shot-his-wife-two-sons-and-daughter
ಜ್ಯೋತಿಷಿಯ ಮಾತು ಕೇಳಿ ಪತ್ನಿ ಸೇರಿ ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ವ್ಯಕ್ತಿ! (ETV Bharat)
author img

By ETV Bharat Karnataka Team

Published : Nov 5, 2024, 4:29 PM IST

ವಾರಾಣಸಿ(ಉತ್ತರ ಪ್ರದೇಶದ): ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಭೇಲುಪುರ್​ನ ಭದೈನಿ ಪವರ್ ಹೌಸ್ ಬಳಿ ನಡೆದಿದೆ. ಆರೋಪಿ ರಾಜೇಂದ್ರ ಇಂದು(ಮಂಗಳವಾರ) ಮಧ್ಯಾಹ್ನ ತನ್ನ ಪತ್ನಿ ನೀತು (45) ಮತ್ತು ಮೂವರು ಮಕ್ಕಳಾದ ನವೇಂದ್ರ ಗುಪ್ತಾ (25), ಸುಬೇಂದ್ರ ಗುಪ್ತಾ (15) ಮತ್ತು ಮಗಳು ಗೌರಂಗಿ ಗುಪ್ತಾ (16) ಅವರನ್ನು ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ನೆರೆಹೊರೆಯವರ ಪ್ರಕಾರ, ಆರೋಪಿಯು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ನಿತ್ಯ ಜಗಳವಾಡುತ್ತಿದ್ದ. ಪಿತ್ರಾರ್ಜಿತ ಆಸ್ತಿ ಇದ್ದ ಕಾರಣ ಇವರಿಗೆ ಆರ್ಥಿಕ ಸಮಸ್ಯೆ ಕೂಡಾ ಇರಲಿಲ್ಲ. ಇದರ ಜೊತೆಗೆ ಆರೋಪಿ ಸುಮಾರು 5 ರಿಂದ 7 ಮನೆಗಳ ಮಾಲೀಕನಾಗಿದ್ದ. ತಿಂಗಳಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಬರುತ್ತಿತ್ತು. ಆರೋಪಿಗೆ ನೀತು ಎರಡನೇ ಪತ್ನಿಯಾಗಿದ್ದು, ಸದ್ಯ ಮತ್ತೊಂದು ಮದುವೆಯಾಗುವ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಇದಲ್ಲದೇ, ರಾಜೇಂದ್ರ ಗುಪ್ತಾ ಇತ್ತೀಚಿಗೆ ಜ್ಯೋತಿಷಿಯೊಬ್ಬನ ಪ್ರಭಾವಕ್ಕೊಳಗಾಗಿದ್ದ. ಪತ್ನಿ ನಿನ್ನ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾಳೆ ಎಂದು ಜ್ಯೋತಿಷಿ ಆರೋಪಿಗೆ ಹೇಳಿದ್ದ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

22 ವರ್ಷಗಳ ಹಿಂದೆ ಆರೋಪಿ ರಾಜೇಂದ್ರ ತನ್ನ ಕಿರಿಯ ಸಹೋದರ ಕೃಷ್ಣ ಗುಪ್ತಾ ಮತ್ತು ಆತನ ಪತ್ನಿಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿ 2004ರಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಎಂಬ ಅಂಶವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ನಿಲ್ಲದ ಬೆದರಿಕೆ: ಬಿಷ್ಣೋಯಿ ಸಹೋದರನ ಹೆಸರಲ್ಲಿ ₹5 ಕೋಟಿ ಹಣಕ್ಕೆ ಬೇಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.