ETV Bharat / bharat

ಪತ್ನಿಯೊಂದಿಗೆ ದೀಪಾವಳಿ ಆಚರಿಸಿದ ಸ್ಪೇನ್‌ ಪ್ರಧಾನಮಂತ್ರಿ, ಭಾರತದ ಸಿಹಿತಿಂಡಿಗೆ ಮನಸೋತ ಪೆಡ್ರೊ ಸ್ಯಾಂಚೆಜ್​​​​ - PEDRO SANCHEZ CELEBRATES DIWALI

Pedro Sanchez celebrates Diwali: ಭಾರತದ ಪ್ರವಾಸದಲ್ಲಿರುವ ಸ್ಪೇನ್‌ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ಅವರು ತಮ್ಮ ಪತ್ನಿಯೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

SPANISH PRESIDENT PEDRO SANCHEZ  CELEBRATE THE DIPAWALI FESTIVAL  DELICIOUS INDIAN SWEETS  PRIME MINISTER NARENDRA MODI
ಪತ್ನಿಯೊಂದಿಗೆ ದೀಪಾವಳಿ ಆಚರಿಸಿದ ಸ್ಪೇನ್‌ ಪ್ರಧಾನಮಂತ್ರಿ (ANI)
author img

By ANI

Published : Oct 29, 2024, 8:15 AM IST

ವಡೋದರ, ಗುಜರಾತ್​ - Pedro Sanchez celebrates Diwali: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸ್ಪೇನ್‌ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್​ನ ವಡೋದರದಲ್ಲಿ ಸಿ-295 ಏರ್​ಕ್ರಾಫ್ಟ್​ ತಯಾರಿಸುವ ಟಾಟಾ ಏರ್​ಬಸ್​​ ಕಾರ್ಖಾನೆಯನ್ನು ಉದ್ಘಾಟಿಸಿರುವುದು ಗೊತ್ತಿರುವ ಸಂಗತಿ. ಇದಾದ ಬಳಿಕ ಸ್ಪೇನ್‌ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ಅವರು ತಮ್ಮ ಪತ್ನಿಯೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.

ಸೋಮವಾರ ರಾತ್ರಿ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಸ್ಪ್ಯಾನಿಷ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್​ ಅವರು ತಮ್ಮ ಪತ್ನಿ ಬೆಗೊನಾ ಗೊಮೆಜ್ ಅವರೊಂದಿಗೆ ಭಾಗಿಯಾಗಿ ಸಂಭ್ರಮಿಸಿದರು. ಹಬ್ಬದ ಸಂದರ್ಭದಲ್ಲಿ ಸ್ಪ್ಯಾನಿಷ್ ಅಧ್ಯಕ್ಷ ಮತ್ತು ಅವರ ಪತ್ನಿ ದೀಪಗಳನ್ನು ಬೆಳಗಿಸಿದರು. ಬಳಿಕ ಹಬ್ಬವನ್ನು ಆಚರಿಸಲು ಕೆಲವು ಪೆನ್ಸಿಲ್ ಕ್ರ್ಯಾಕರ್‌ಗಳನ್ನು ಹಿಡಿದು ಖುಷಿಪಟ್ಟರು. ಅವರು ಲಡೂಸ್ ಸೇರಿದಂತೆ ರುಚಿಕರವಾದ ಭಾರತೀಯ ಸಿಹಿತಿಂಡಿಗಳನ್ನು ಸೇವಿಸಿದರು.

SPANISH PRESIDENT PEDRO SANCHEZ  CELEBRATE THE DIPAWALI FESTIVAL  DELICIOUS INDIAN SWEETS  PRIME MINISTER NARENDRA MODI
ಪತ್ನಿಯೊಂದಿಗೆ ದೀಪಾವಳಿ ಆಚರಿಸಿದ ಸ್ಪೇನ್‌ ಪ್ರಧಾನಮಂತ್ರಿ (ANI)

ಸೋಮವಾರ ಮುಂಜಾನೆ ಭಾರತಕ್ಕೆ ಆಗಮಿಸಿದ ಸ್ಯಾಂಚೆಜ್​ ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ಅವರು ಇಂದು ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಾಳೆ ಸ್ಪೇನ್‌ಗೆ ತೆರಳಲಿದ್ದಾರೆ. ಇದಕ್ಕೂ ಮುನ್ನ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಸ್ಯಾಂಚೆಜ್​ ಅವರು ಗುಜರಾತ್‌ನ ವಡೋದರದಲ್ಲಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕ್ಯಾಂಪಸ್‌ನಲ್ಲಿ ಸಿ-295 ವಿಮಾನಗಳನ್ನು ತಯಾರಿಸಲು ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು.

ಮೇಕ್​​ ಇನ್​ - ಇಂಡಿಯಾ: ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್ ಭಾರತ-ಸ್ಪೇನ್ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ಉಪಕ್ರಮವನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. C-295 ವಿಮಾನ ಕಾರ್ಖಾನೆಯು ಹೊಸ ಭಾರತದ ಹೊಸ ಕೆಲಸದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ವಡೋದರದಲ್ಲಿ ತಯಾರಿಸಲಾದ ಮೆಟ್ರೋ ಕೋಚ್‌ಗಳನ್ನು ಇತರ ದೇಶಗಳಿಗೆ ಹೇಗೆ ರಫ್ತು ಮಾಡಲಾಗುತ್ತಿದೆ. ಅದೇ ರೀತಿ ಜಾಗತಿಕವಾಗಿ ವಿಮಾನಗಳನ್ನು ರಫ್ತು ಮಾಡುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಎಂದು ಮೋದಿ ಹೇಳಿದರು.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್: C-295 ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 56 ವಿಮಾನಗಳನ್ನು ಯೋಜಿಸಲಾಗಿದೆ. 16 ಅನ್ನು ನೇರವಾಗಿ ಸ್ಪೇನ್‌ನಿಂದ ಏರ್‌ಬಸ್‌ ತಲುಪಿಸಲಾಗುತ್ತದೆ. ಉಳಿದ 40 ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಈ 40 ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಸೌಲಭ್ಯವು ಭಾರತದಲ್ಲಿ ಮಿಲಿಟರಿ ವಿಮಾನಗಳಿಗಾಗಿ ಮೊದಲ ಖಾಸಗಿ ವಲಯದ ಫೈನಲ್​ ಅಸೆಂಬ್ಲಿ ಲೈನ್ (FAL) ಆಗಿರುತ್ತದೆ.

ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಸ್ಯಾಂಚೆಜ್​ ಅವರು ವಡೋದರಾದಲ್ಲಿ ತಮ್ಮ ರೋಡ್‌ಶೋನಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಿದರು. ವಡೋದರದ ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ಉಭಯ ನಾಯಕರು ವ್ಯಾಪಾರ, ರಕ್ಷಣೆ ಮತ್ತು ತಂತ್ರಜ್ಞಾನ ಸಹಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಬರೋಡಾದ ಮಾಜಿ ಆಡಳಿತಗಾರ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ಅವರ 19ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಅರಮನೆಯಲ್ಲಿ ಅವರು ಊಟವನ್ನು ಸವಿದರು.

ಓದಿ: ಆತ್ಮನಿರ್ಭರ ಭಾರತಕ್ಕೆ ಹೊಸ ಭಾಷ್ಯ! ದೇಶದ ಮೊದಲ ಖಾಸಗಿ ಏರ್​ಕ್ರಾಫ್ಟ್​​ ತಯಾರಿಕಾ ಕಾರ್ಖಾನೆ ವಡೋದರದಲ್ಲಿ ಉದ್ಘಾಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.