ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲೆಯ ಮಳೆಯಾಗಿದೆ. 2019ರ ನಂತರ ಒಂದೇ ದಿನ 300 ಮಿ.ಮೀ ಮಳೆ ಸುರಿದಿದೆ. ಈ ಪರಿಸ್ಥಿತಿ ಇನ್ನೂ ಮುಂದುವರೆಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ.
ಸಬ್ ಅರ್ಬನ್ ರೈಲ್ವೇ ಸ್ಟೇಷನ್ಲ್ಲಿ 268 ಮಿ.ಮೀ ಮಳೆಯಾಗಿದೆ. ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದೂ ಕೂಡ ಶಾಲಾ, ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ.
⛈️🚨The India Meteorological Department (IMD) has issued a Red Alert for Mumbai.
— माझी Mumbai, आपली BMC (@mybmc) July 8, 2024
🏫In view of this, all schools and colleges in Mumbai have been declared a holiday for tomorrow Tuesday, 9th July 2024, in consideration of the safety of students.
The Brihanmumbai Municipal…
ರೈಲು ಹಳಿಗಳ ಮೇಲೆ ನೀರು ನಿಂತಿದೆ. ನಗರದ ಅನೇಕ ಪ್ರದೇಶಗಳಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ಸತತ ಆರು ಗಂಟೆಗಳ ಕಾಲ 300 ಮಿ.ಮೀ ದಾಖಲೆ ಮಳೆಯಾಗಿದೆ. ತಗ್ಗು ಪ್ರದೇಶಗಳು, ರಸ್ತೆಗಳು ಸಂಪೂರ್ಣ ಜಲಮಯವಾಗಿದೆ.
ಮುಂಬೈ ವಿಶ್ವವಿದ್ಯಾಲಯ ಮಂಗಳವಾರ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.
ಮುಂಬೈ ನಗರ ಹೊರತುಪಡಿಸಿ ರಾಯಗಢದಲ್ಲೂ ಜೋರು ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಅಲ್ಲಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಇದನ್ನೂ ಓದಿ: ಮಹಾ ಮಳೆಗೆ ಮುಳುಗಿದ ಮುಂಬೈ: ಶಾಲೆಗಳು ಬಂದ್, ರೈಲು, ವಾಹನ ಸಂಚಾರಕ್ಕೆ ಅಡಚಣೆ