ETV Bharat / bharat

ಮಗಳ ಸಾವಿನಿಂದ ಕೋಪಗೊಂಡ ಪೋಷಕರಿಂದ ಮನೆಗೆ ಬೆಂಕಿ: ಅತ್ತೆ, ಮಾವ ಸುಟ್ಟು ಕರಕಲು - Prayagraj Crime News

ಮಗಳ ಸಾವಿನಿಂದ ಆಕ್ರೋಶಗೊಂಡ ಪೋಷಕರು ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರಯಾಗ್​​​​ರಾಜ್
ಪೋಷಕರಿಂದ ಮಗಳ ಅತ್ತೆ ಮನೆಗೆ ಬೆಂಕಿ
author img

By ETV Bharat Karnataka Team

Published : Mar 19, 2024, 11:25 AM IST

ಪ್ರಯಾಗ್​​​​ರಾಜ್(​ಉತ್ತರ ಪ್ರದೇಶ): ಮಗಳ ಸಾವಿನಿಂದ ಕೋಪಗೊಂಡ ಪೋಷಕರು ಆಕೆಯ ಅತ್ತೆ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಪ್ರಯಾಗ್​​​​ರಾಜ್​ನಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಮಗಳ ಅತ್ತೆ, ಮಾವ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ.

ಘಟನೆಯ ಸಂಪೂರ್ಣ ವಿವರ: ಪ್ರಯಾಗ್‌ರಾಜ್‌ನ ಮುತ್ತಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಂಶು ಕೇಶರ್ವಾನಿ ಎಂಬವರಿಗೆ ಧುಮನ್‌ಗಂಜ್ ಪ್ರದೇಶದ ನಿವಾಸಿ ಅಂಶಿಕಾ ಎಂಬ ಯುವತಿಯನ್ನು ಕಳೆದ ಫೆಬ್ರುವರಿಯಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಆದರೆ ಸೋಮವಾರ ರಾತ್ರಿ ಅಂಶಿಕಾ ಪೋಷಕರಿಗೆ ಅಂಶು ಕೇಶರ್ವಾನಿ ಪೋಷಕರು ಕರೆ ಮಾಡಿ, ನಿಮ್ಮ ಮಗಳು ಮಧ್ಯಾಹ್ನ 3 ಗಂಟೆಗೆ ಕೊಠಡಿ ಬಾಗಿಲು ಹಾಕಿಕೊಂಡಿದ್ದು, ಇನ್ನೂ ತೆಗೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಪೋಷಕರಿಗೆ ಮಗಳು ಆತ್ಮಹತ್ಯೆ ಮಾಡಿರುವಂತೆ ಮೃತದೇಹ ನೋಡಿದ್ದಾರೆ. ವರದಕ್ಷಿಣೆಗಾಗಿ ಮಗಳನ್ನು ಕೊಂದು ಹಾಕಿದ್ದಾರೆ ಎಂದು ಆರೋಪಿಸಿ ಪೋಷಕರು ಮನೆಯವರೊಂದಿಗೆ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಂಶಿಕಾ ಕುಟುಂಬ ಸದಸ್ಯರು ಆಕೆಯ ಅತ್ತೆಯ ಮನೆಗೆ ಬೆಂಕಿ ಹಚ್ಚಿ ಹೊರಗಿನಿಂದ ಬಾಗಿಲು ಹಾಕಿದ್ದಾರೆ.

ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಜ್ವಾಲೆಯಿಂದ ಐವರನ್ನು ಹೊರತಂದು ರಕ್ಷಿಸಿದ್ದಾರೆ. ಬಳಿಕ ಹರಸಾಹಸಪಟ್ಟು ಬೆಂಕಿ ನಂದಿಸಿ ಇಂದು ಬೆಳಗ್ಗೆ ಮನೆಯೊಳಗೆ ಪ್ರವೇಶಿಸಿದಾಗ ಮೃತ ಅಂಶಿಕಾ ಅತ್ತೆ ಮಾವನ ಮೃತದೇಹಗಳು ಸುಟ್ಟು ಕರಕಲಾದ ರೀತಿಯಲ್ಲಿ ಕಂಡುಬಂದಿವೆ. ಆರೋಪಿಗಳಾದ ಅಂಶಿಕಾ ಕುಟುಂಬದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗಡ್ಚಿರೋಲಿ ಎನ್​ಕೌಂಟರ್​: ನಾಲ್ವರು ನಕ್ಸಲರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.