ಬಂಡಿಪೋರಾ, ಶ್ರೀನಗರ: ಭಾನುವಾರ ರಾತ್ರಿ ಜಿಲ್ಲೆಯ ಆರಗಾಂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ಆ ಸಮಯದಲ್ಲಿ ಸೇನೆ ಉಗ್ರನೊಬ್ಬನನ್ನು ಬೇಟೆ ಆಡಿದ್ದವು. ಸದ್ಯ ಆ ಉಗ್ರನ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಡಿಪೋರಾ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ ಹಲವಾರು ಉದ್ದೇಶಿತ ಹತ್ಯೆಗಳಲ್ಲಿ ಭಾಗಿಯಾಗಿರುವುದು ಮತ್ತು ಉಗ್ರರ ನೇಮಕಾತಿಯಲ್ಲಿ ಈತನ ಕೈವಾಡ ಇರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲ ಈ ಉಗ್ರನ ಹತ್ಯೆಯಿಂದ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ದೊರೆತಂತಾಗಿದೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ 3ನೇ ಸೆಕ್ಟರ್ ಕಮಾಂಡರ್ ವಿಪುಲ್ ತ್ಯಾಗಿ, ಭದ್ರತಾ ಪಡೆಗಳು ನಿರಂತರವಾಗಿ ಈ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಸುಳಿವುಗಳನ್ನು ಪಡೆಯುತ್ತಿವೆ. ಹತನಾಗಿರುವ ಉಮರ್ ಹಲವಾರು ಹತ್ಯೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸ್ಥಳೀಯ ಜನರು ಭಯೋತ್ಪಾದಕನನ್ನು ತಟಸ್ಥಗೊಳಿಸಲು ಭದ್ರತಾ ಪಡೆಗಳಿಗೆ ಸಹಾಯ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಸ್‌ಪಿ ಬಂಡಿಪೋರಾ ಲಕ್ಷಯ್ ಶರ್ಮಾ ಮತ್ತು ಕಮಾಂಡೆಂಟ್ 3 ನೇ ಬಿಎನ್ ಸಿಆರ್‌ಪಿಎಫ್ ಉಪಸ್ಥಿತರಿದ್ದರು.
ಸೋಮವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭಯೋತ್ಪಾದಕ ಕಮಾಂಡರ್ ಉಮರ್ ಅಕ್ಬರ್ ಲೋನ್ ಅಲಿಯಾಸ್ ಜಾಫರ್ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಈ ಪ್ರದೇಶದಲ್ಲಿ ಇನ್ನೂ 2 ರಿಂದ 3 ಉಗ್ರರು ಅಡಗಿರುವ ಸಾಧ್ಯತೆ ಇದೆ. ಆರಗಂ ಅರಣ್ಯದಲ್ಲಿ ಭಾನುವಾರವೂ ಗುಂಡಿನ ಸದ್ದು ಕೇಳಿಬಂದಿದ್ದು, ಉಗ್ರರ ಪತ್ತೆಗೆ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.
ಸೋಮವಾರ ಬೆಳಗ್ಗೆ ಶೋಧ ಕಾರ್ಯ ತೀವ್ರಗೊಂಡಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಡ್ರೋನ್ ದೃಶ್ಯಾವಳಿಯಲ್ಲಿ ಹತ್ಯೆಗೀಡಾದ ಭಯೋತ್ಪಾದಕ ಜಾಫರ್‌ನ ದೇಹವು ಕಾಡಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇನ್ನು ಜೂನ್ 9 ರಂದು ರಿಯಾಸಿಯಲ್ಲಿ ಯಾತ್ರಿಕರ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ.
ಗೃಹ ಸಚಿವಾಲಯದ ಆದೇಶದ ನಂತರ, ಈ ಪ್ರಕರಣದಲ್ಲಿ ಹೊಸ ಎಫ್‌ಐಆರ್ ದಾಖಲಿಸಲಾಗಿದೆ. ಜೂನ್ 16 ರಂದು ಗೃಹ ಸಚಿವರು ಜಮ್ಮು ಮತ್ತು ಕಾಶ್ಮೀರದ ಭದ್ರತಾ ವ್ಯವಸ್ಥೆಗಳ ಬಗ್ಗೆ ಸಭೆ ನಡೆಸಿದರು. ಇದರಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಿದ್ದರು.
ಓದಿ: ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಓರ್ವ ಉಗ್ರನ ಬೇಟೆ: ಮುಂದುವರಿದ ಶೋಧ ಕಾರ್ಯಾಚರಣೆ - Terrorist encounter