ETV Bharat / bharat

ಮರಾಠವಾಡಾದಲ್ಲಿ ತೀವ್ರ ಬರಗಾಲ: ಮೋಸಂಬಿ, ದಾಳಿಂಬೆ ಬೆಳೆ ನಾಶಪಡಿಸಿದ ರೈತ - Marathwada facing drought - MARATHWADA FACING DROUGHT

ಮಹಾರಾಷ್ಟ್ರದ ಮರಾಠವಾಡಾದಲ್ಲಿ ಬರಗಾಲದ ಛಾಯೇ ಆವರಿಸಿದ್ದು, ನೀರಿನ ಅಭಾವದಿಂದ ರೈತರು ತಮ್ಮ ಬೆಳಗಳನ್ನು ನಾಶಪಡಿಸುತ್ತಿದ್ದಾರೆ.

mh-world-water-day-2024-in-march-25-percent-water-storage-in-marathwada-fear-of-severe-drought
ಮರಾಠಾವಾಡಾದಲ್ಲಿ ತೀವ್ರ ಬರಗಾಲ: ಮೋಸಂಬಿ, ದಾಳಿಂಬೆ ಬೆಳೆ ನಾಶಪಡಿಸಿದ ರೈತ!
author img

By ETV Bharat Karnataka Team

Published : Mar 22, 2024, 5:46 PM IST

ಛತ್ರಪತಿ ಸಂಭಾಜಿನಗರ(ಮಹಾರಾಷ್ಟ್ರ): ದೇಶಾದ್ಯಂತ ಬೇಸಿಗೆಕಾಲ ಪ್ರಾರಂಭವಾಗಿದ್ದು, ಬಿಸಿಲಿನ ತಾಪ ತೀವ್ರವಾಗಿ ಹೆಚ್ಚಳವಾಗಿದೆ. ಮತ್ತೊಂದೆಡೆ, ನೀರಿನ ಕೊರತೆಯಿಂದ ಮರಾಠವಾಡಾ ಜಲಕ್ಷಾಮ ಎದುರಿಸುತ್ತಿದೆ. ಈ ವರ್ಷ ನೀರಾವರಿ ಇಲಾಖೆಗೆ ಸೇರಿದ 104 ಜಲಮೂಲಗಳಲ್ಲಿ ನೀರು ಬತ್ತಿಹೋಗಿದೆ. ಈಗ ಕೇವಲ ಶೇ.25 ರಷ್ಟು ಜಲಮೂಲಗಳಲ್ಲಿ ಮಾತ್ರ ನೀರು ಉಳಿದಿರುವುದರಿಂದ, ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.57ರಷ್ಟು ನೀರು ಲಭ್ಯವಿತ್ತು. ಆದರೆ, ಈ ವರ್ಷ ಬಹುತೇಕ ಅಣ್ಣೆಕಟ್ಟೆಗಳು ಒಣಗಿರುವುದರಿಂದ ಮರಾಠವಾಡಾದಲ್ಲಿ ಬರಗಾಲದ ಛಾಯೇ ಆವರಿಸಿದೆ. ಹೀಗಾಗಿ ರೈತರು ಹಲವು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ತೋಟಗಾರಿಕೆಗಳನ್ನು ಬೇರೆ ದಾರಿಯಿಲ್ಲದೇ ನಾಶಪಡಿಸುತ್ತಿದ್ದಾರೆ.

ಈ ಬಾರಿ ಮರಾಠಾವಾಡಾದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. 267 ವಿವಿಧ ನೀರಿನ ಯೋಜನೆಗಳಲ್ಲಿ ಪ್ರಸ್ತುತ ಶೇ. 25 ಕ್ಕಿಂತ ಕಡಿಮೆ ನೀರಿನ ಸಂಗ್ರಹವಿದೆ. ಮರಾಠವಾಡಾದ ಅತಿದೊಡ್ಡ ಅಣೆಕಟ್ಟು ಮತ್ತು ಸಂಭಾಜಿನಗರ ಜಲನಾ ನಗರಕ್ಕೆ ಪ್ರಮುಖ ನೀರಿನ ಮೂಲವಾಗಿರುವ ಜಯಕ್ವಾಡಿ ಅಣೆಕಟ್ಟಿನಲ್ಲಿ ಕೇವಲ 24 ಪ್ರತಿಶತದಷ್ಟು ನೀರಿನ ಸಂಗ್ರಹ ಮಾತ್ರ ಉಳಿದಿದೆ. ಹೀಗಾಗಿ ಮುಂದಿನ ಮೂರು ತಿಂಗಳು ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ. ಮರಾಠವಾಡದಲ್ಲಿ 800ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ನೀರಾವರಿ ಯೋಜನೆಗಳಿವೆ. ಈ ಯೋಜನೆಗಳು 8 ಸಾವಿರದ 155 ಕ್ಯೂಬಿಕ್​ ನೀರಿನ ಸಾಮರ್ಥ್ಯ ಹೊಂದಿವೆ. ಆದರೆ ಈ ತಿಂಗಳಲ್ಲಿ 2 ಸಾವಿರದ 43 ಕ್ಯೂಬಿಕ್ ಜಲ ಸಂಗ್ರಹ ಮಾತ್ರ ಉಳಿದಿದೆ.

ಮರಾಠವಾಡ ಜಿಲ್ಲಾಡಳಿತ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಂಡಿವೆ. ಸಂಭಾಜಿನಗರ- ಜಲನಾ ಎರಡು ಜಿಲ್ಲೆಗಳಲ್ಲಿ ತೀವ್ರ ನೀರಿನ ಅಭಾವ ಉಂಟಾಗಲಿದೆ. ನೀರಿನ ಕೊರತೆ ಇರುವ ಕಡೆ 374 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಆರಂಭಿಸಲಾಗಿದೆ. ಜಿಲ್ಲಾಡಳಿತ ಕೆಲವೆಡೆ ಬಾವಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಕೆಲವೆಡೆ ಖಾಸಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ನೀರಿನ ಸಮಸ್ಯೆ ಕುರಿತು ವಿಧಾನ ಪರಿಷತ್ ಉಪಸಭಾಪತಿ ನೀಲಂ ಗೊರ್ಹೆ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ನೀರಿನ ಅಭಾವದಿಂದ ಬೆಳೆಗಳಿಗೆ ರೈತನಿಂದ ಕೊಡಲಿ ಏಟು: ನೀರಿನ ಕೊರತೆಯಿಂದ ಗ್ರಾಮೀಣ ಭಾಗದ ತೋಟಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅದರಲ್ಲೂ ಮೋಸಂಬಿ, ದಾಳಿಂಬೆ ಬೆಳೆಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇದ್ದು, ಇದರಿಂದ ಕಂಗೆಟ್ಟ ರೈತರು ಮಕ್ಕಳಂತೆ ಬೆಳೆಸಿದ ಮರಗಳನ್ನು ತಾವೇ ಕಡಿಯುತ್ತಿದ್ದಾರೆ. ಜಿಲ್ಲೆಯ ಲಾಡಸವಣಗಿ ಗ್ರಾಮದ ರೈತ ರಾಜೇಂದ್ರ ಪವಾರ್ ಅವರು ಮೋಸಂಬಿ ಮತ್ತು ದಾಳಿಂಬೆ ಬೆಳೆ ಬೆಳೆದಿದ್ದಾರೆ. ಆದರೆ ನೀರಿ ಕೊರತೆಯಿಂದ ಅವರು ತಮ್ಮ ಜಮೀನಿನಲ್ಲಿದ್ದ 700 ಮೋಸಂಬಿ ಮರ ಹಾಗೂ 500 ದಾಳಿಂಬೆ ಮರಗಳನ್ನು ಕಡಿದು ಹಾಕಿದ್ದಾರೆ. ಐದು ವರ್ಷಗಳಿಂದ ಸಾಕಷ್ಟು ಶ್ರಮ ಪಟ್ಟು ಮರಗಳನ್ನು ಬೆಳೆಸಸಿದ್ದೆವು, ಸದ್ಯ ನೀರಿನ ಅಭಾವದಿಂದ ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಎಂದು ರೈತ ರಾಜೇಂದ್ರ ಪವಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬರದಲ್ಲೂ ಜಲಕ್ರಾಂತಿ: 'ಆಧುನಿಕ ಭಗೀರಥ' ಶಿವಾಜಿ ಕಾಗಣಿಕರ್​ ಪರಿಶ್ರಮಕ್ಕೆ ಭರಪೂರ ನೀರು - Belagavi Water Revolution

ETV Bharat Logo

Copyright © 2024 Ushodaya Enterprises Pvt. Ltd., All Rights Reserved.