ETV Bharat / bharat

ವಕ್ಫ್ ತಿದ್ದುಪಡಿ ಮಸೂದೆಯ ಜೆಪಿಸಿ ಕಾಲಾವಧಿ ವಿಸ್ತರಿಸಿ: ಸ್ಪೀಕರ್ ಓಂ ಬಿರ್ಲಾಗೆ ಸದಸ್ಯರ ಪತ್ರ

ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ಕಾಲಾವಧಿಯನ್ನು ವಿಸ್ತರಿಸಬೇಕೆಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಲಾಗಿದೆ.

ಸ್ಪೀಕರ್ ಓಂ ಬಿರ್ಲಾ ಭೇಟಿಯಾದ ಜೆಪಿಸಿ ಸದಸ್ಯರು
ಸ್ಪೀಕರ್ ಓಂ ಬಿರ್ಲಾ ಭೇಟಿಯಾದ ಜೆಪಿಸಿ ಸದಸ್ಯರು (IANS)
author img

By ETV Bharat Karnataka Team

Published : Nov 25, 2024, 1:09 PM IST

ನವದೆಹಲಿ: ಸಮಗ್ರ ಸಮಾಲೋಚನೆ ಮತ್ತು ಚರ್ಚೆ ನಡೆಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಸಮಿತಿಯ ಸದಸ್ಯರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದ್ದಾರೆ.

"ವಕ್ಫ್ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧಿಕಾರಾವಧಿಯನ್ನು ಸಮಂಜಸ ಸಮಯದವರೆಗೆ ವಿಸ್ತರಿಸುವಂತೆ ವಿನಂತಿಸಿ ನಾವು ನಿಮಗೆ ಪತ್ರ ಬರೆಯುತ್ತಿದ್ದೇವೆ" ಎಂದು ಸದಸ್ಯರು ಸ್ಪೀಕರ್​ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸಮಿತಿಯು ಈವರೆಗೆ ಸಾಧಿಸಿದ ಪ್ರಗತಿಯನ್ನು ಪತ್ರದಲ್ಲಿ ಎತ್ತಿ ತೋರಿಸಲಾಗಿದ್ದು, ಆಗಸ್ಟ್ 22, 2024 ರಂದು ನಡೆದ ಮೊದಲ ಸಭೆಯಿಂದ, ಜೆಪಿಸಿ ಈವರೆಗೆ ಕೇವಲ 25 ಸಭೆಗಳನ್ನು ನಡೆಸಿದೆ ಎಂದು ಉಲ್ಲೇಖಿಸಲಾಗಿದೆ.

"ಜೆಪಿಸಿ ಈವರೆಗೆ ಕೇವಲ 25 ಸಭೆಗಳನ್ನು ನಡೆಸಿದೆ. ಇದರಲ್ಲಿ ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪುರಾವೆಗಳು / ಪ್ರಸ್ತುತಿಗಳು ಸೇರಿವೆ. ಆದರೆ ಬಿಹಾರ, ನವದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಇನ್ನೂ ಸಮಿತಿಯ ಮುಂದೆ ಹಾಜರಾಗಿಲ್ಲ. ಇದಲ್ಲದೆ, ವಿವಿಧ ಪ್ರಾತಿನಿಧಿಕ ಪಾಲುದಾರ ಸಂಸ್ಥೆಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಾಧ್ಯವಾಗುವಂತೆ ಸಮಿತಿಯ ಕಾಲಾವಧಿಯನ್ನು ಇನ್ನಷ್ಟು ವಿಸ್ತರಿಸುವಂತೆ ಕೋರುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವಕ್ಫ್ ತಿದ್ದುಪಡಿ ಮಸೂದೆಯು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಗಮನಾರ್ಹವಾಗಿ ಬದಲಾಯಿಸಲಿದೆ ಮತ್ತು ಈ ಬದಲಾವಣೆಗಳು ಭಾರತದ ಬಹುದೊಡ್ಡ ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿವೆ ಎಂದು ಅದು ಹೇಳಿದೆ.

"ಈ ಬದಲಾವಣೆಗಳು ಭಾರತದ ಜನಸಂಖ್ಯೆಯ ದೊಡ್ಡ ಭಾಗದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ವರದಿಯನ್ನು ಅಂತಿಮಗೊಳಿಸಲು ಕೇವಲ ಮೂರು ತಿಂಗಳ ಸಮಯ ನೀಡಿರುವುದು ಅಸಮರ್ಪಕ ಮಾತ್ರವಲ್ಲ, ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದು. ಹೀಗಾಗಿ ಸರಿಯಾದ ಸಮಾಲೋಚನೆ ಮತ್ತು ಚರ್ಚೆಗಳನ್ನು ನಡೆಸಲು ಸಾಧ್ಯವಾಗುವಂತೆ ಸಮಿತಿಯ ಅಧಿಕಾರಾವಧಿಯನ್ನು ಸಮಂಜಸ ಸಮಯದವರೆಗೆ ವಿಸ್ತರಿಸಬೇಕು" ಎಂದು ಜೆಪಿಸಿ ಸದಸ್ಯರು ಕೋರಿದ್ದಾರೆ.

ಆಗಸ್ಟ್ 8, 2024 ರಂದು ಲೋಕಸಭೆಯಲ್ಲಿ ಪರಿಚಯಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬಿಸಿ ಚರ್ಚೆಯ ನಂತರ ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿಗೆ ಕಳುಹಿಸಲಾಯಿತು. ಜೆಪಿಸಿ ವಿವಿಧ ಮಧ್ಯಸ್ಥಗಾರರೊಂದಿಗೆ ಚರ್ಚೆಗಳನ್ನು ನಡೆಸುತ್ತಿದೆ. ವಕ್ಫ್ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಮಸೂದೆಯ ಕೆಲ ಕಾನೂನುಗಳಿಗೆ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ : ಜನರಿಂದ ತಿರಸ್ಕೃತರಾದವರಿಂದ ಸಂಸತ್ ನಿಯಂತ್ರಣಕ್ಕೆ ಯತ್ನ: ಪ್ರಧಾನಿ ಮೋದಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.