ಶ್ರೀನಗರ/ಜಮ್ಮು: ಲೆಬನಾನ್ನಲ್ಲಿ ಹಿಜ್ಬುಲ್ಲಾ ಬಂಡುಕೋರರ ಗುಂಪಿನ ನಾಯಕ ಸೈಯದ್ ಹಸನ್ ನಸ್ರಲ್ಲಾ ಹತ್ಯೆ ಖಂಡಿಸಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಭಾನುವಾರದ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದನ್ನು ಬಿಜೆಪಿ ಟೀಕಿಸಿದೆ.
ಹಿಜ್ಬುಲ್ಲಾ ನಾಯಕನ ಹತ್ಯೆಯಾದರೆ, ಮೆಹಬೂಬಾ ಮುಫ್ತಿ ಅವರಿಗೆ ಏನು ಸಮಸ್ಯೆ?. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅವರೇಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದೆ. ಇವರ ಮತಬ್ಯಾಂಕ್ ರಾಜಕೀಯವನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದಿದೆ.
Cancelling my campaign tomorrow in solidarity with the martyrs of Lebanon & Gaza especially Hassan Nasarullah. We stand with the people of Palestine & Lebanon in this hour of immense grief & exemplary resistance.
— Mehbooba Mufti (@MehboobaMufti) September 28, 2024
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌ಪಿ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಮೆಹಬೂಬಾ ಮುಫ್ತಿ ಅವರಿಗೆ ಲೆಬನಾನ್ನಲ್ಲಿ ಹಿಜ್ಬುಲ್ಲಾ ನಾಯಕನ ಹತ್ಯೆಯಾದರೆ, ಸಮಸ್ಯೆಯಾಗುತ್ತದೆ. ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಅವಿರತ ದೌರ್ಜನ್ಯದ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಇವರಿಗೆ ಪ್ಯಾಲೆಸ್ಟೈನ್ ಮತ್ತು ಹಿಜ್ಬುಲ್ಲಾ ನಾಯಕರ ಹತ್ಯೆಗಳು ನೋವು ತಂದಿವೆ ಎಂದು ಟೀಕಿಸಿದ್ದಾರೆ.
ಉಗ್ರರ ಸಾವಿಗೆ ಕಣ್ಣೀರು ಸುರಿಸುವುದು, ಭಯೋತ್ಪಾದಕರನ್ನು ಹುತಾತ್ಮರೆಂದು ಕರೆಯುವುದು ಮುಫ್ತಿ ಅವರಿಗೆ ಅಭ್ಯಾಸವಾಗಿದೆ. ಉಗ್ರ ಬುರ್ಹಾನಿ ವಾನಿ ಸಾವಿಗೂ ಇವರು ಕಣ್ಣೀರು ಹಾಕಿದ್ದರು. ಇವರ ಮೊಸಳೆ ಕಣ್ಣೀರನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಮತಬ್ಯಾಂಕ್ ರಾಜಕೀಯದಲ್ಲಿ ಪಿಡಿಪಿ ಮುಖ್ಯಸ್ಥೆ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
#WATCH | Jammu: After PDP chief Mehbooba Mufti cancels campaign in solidarity with the martyrs of Lebanon & Gaza, especially Hassan Nasarullah, Former Deputy CM of J&K and BJP leader Kavinder Gupta says, " why does hassan nasarullah's death pain, mehbooba mufti? when hindus in… pic.twitter.com/3msgOhCqlb
— ANI (@ANI) September 29, 2024
ಉಗ್ರರ ಬಗ್ಗೆ ಮೆಹಬೂಬಾ ಮುಫ್ತಿ ಅವರು ಮಾತ್ರವಲ್ಲ, ಇಂಡಿಯಾ ಕೂಟದ ನಾಯಕರೂ ಮೃದು ಧೋರಣೆ ಹೊಂದಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕೂಡ ಹತ್ಯೆಯಾದ ಭಯೋತ್ಪಾದಕರಿಗಾಗಿ ಬಾಟ್ಲಾ ಹೌಸ್ನಲ್ಲಿ ಕಣ್ಣೀರು ಸುರಿಸಿದ್ದರು. ಇವರಿಗೆಲ್ಲಾ ದೇಶ ಮೊದಲು ಎಂಬ ನೀತಿಯಿಲ್ಲ. ಮತವೇ ಇವರಿಗೆ ಮುಖ್ಯ ಎಂದು ಆರೋಪಿಸಿದರು.
ಮೆಹಬೂಬಾ ಮುಫ್ತಿ ಹೇಳಿದ್ದೇನು?: "ಲೆಬನಾನ್ ಮತ್ತು ಗಾಜಾದಲ್ಲಿ ಇಸ್ರೇಲ್ ದಾಳಿಗೆ ಹುತಾತ್ಮರಾದವರಿಗಾಗಿ, ವಿಶೇಷವಾಗಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಸಾವಿಗೆ ಬೆಂಬಲವಾಗಿ ನಾಳೆ ನನ್ನ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿದ್ದೇನೆ. ಅಪಾರ ದುಃಖ ಮತ್ತು ಪ್ರತಿರೋಧದ ಈ ಸಮಯದಲ್ಲಿ ನಾವು ಪ್ಯಾಲೆಸ್ಟೈನ್ ಮತ್ತು ಲೆಬನಾನ್ ಜನರ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಮೆಹಬೂಬಾ ಮುಫ್ತಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಶನಿವಾರ ಪೋಸ್ಟ್ ಹಂಚಿಕೊಂಡಿದ್ದರು.
ಇದನ್ನೂ ಓದಿ: ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹತ್ಯೆ ಖಂಡಿಸಿ ಚುನಾವಣಾ ಪ್ರಚಾರ ನಿಲ್ಲಿಸಿದ ಮೆಹಬೂಬಾ ಮುಫ್ತಿ - Mehbooba Mufti