ETV Bharat / bharat

6 ಸುಧಾರಿತ ಜಲಾಂತರ್ಗಾಮಿ ನಿರ್ಮಾಣಕ್ಕೆ ಎಂಡಿಎಲ್​ಗೆ ಅನುಮತಿ ನೀಡಿದ ಭಾರತೀಯ ನೌಕಾ ಸೇನೆ - mazagon dockyards clears navy trial

author img

By ETV Bharat Karnataka Team

Published : Aug 13, 2024, 2:31 PM IST

60 ಸಾವಿರ ಕೋಟಿ ಮೌಲ್ಯದ ಯೋಜನೆ ಇದಾಗಿದ್ದು, ಎಂಡಿಎಲ್​ ಜರ್ಮನಿಯ ಥೆಸ್ಸನ್​ಕೃಪ್​ ಮರಿನ್​ ಸಿಸ್ಟಮ್​ ಜೊತೆಯಾಗಿ ಈ ಯೋಜನೆಗೆ ಕಾರ್ಯ ನಿರ್ವಹಿಸಲಿದೆ.

mazagon-dockyards-clears-navy-trial-requirements-to-build-6-advanced-submarines-with-german-collaboration
sಸಾಂದರ್ಭಿಕ ಚಿತ್ರ (ಈಟಿವಿ ಭಾರತ್​)

ನವದೆಹಲಿ: ಆರು ಸುಧಾರಿತ ಸಬ್​ಮರಿನ್​ (ಜಲಾಂತರ್ಗಾಮಿ) ನಿರ್ಮಾಣಕ್ಕೆ ಸರ್ಕಾರಿ ಸೌಮ್ಯದ ಮಜಗಾನ್​ ಡಾಕ್​ಯಾರ್ಡ್ಸ್​​​ ಲಿಮಿಟೆಡ್​ (ಎಂಡಿಎಲ್​) ಭಾರತೀಯ ನೌಕ ಸೇನೆಯ ಅನುಮತಿ ನೀಡಿದೆ. 60 ಸಾವಿರ ಕೋಟಿ ಮೌಲ್ಯದ ಯೋಜನೆ ಇದಾಗಿದ್ದು, ಎಂಡಿಎಲ್​ ಜರ್ಮನಿಯ ಥೈಸ್ಸನ್​ಕೃಪ್​ ಮರಿನ್​ ಸಿಸ್ಟಮ್​ ಜೊತೆಯಾಗಿ 'ಪ್ರಾಜೆಕ್ಟ್​ 75 ಇಂಡಿಯಾ' ಅಡಿಯಲ್ಲಿ ಈ ಸಬ್​ಮರಿನ್ ನಿರ್ಮಾಣ ಮಾಡಲಿದೆ.

ಪಿ 75 ಇಂಡಿಯಾ ಸಬ್​ಮರಿನ್​ ಟೆಂಡರ್​​ ಮಜಗಾನ್​ ಡಾಕ್​ ಲಿಮಿಟೆಡ್ (ಎಂಡಿಎಲ್)​ ಮತ್ತು ಥೈಸ್ಸನ್ಕೃಪ್​ ಜಂಟಿಯಾಗಿ ಲಾರ್ಸೆನ್​ ಮತ್ತು ಟೊಬ್ರೊ ಮತ್ತು ನವಂತಿಯಾ ವಿರುದ್ಧ ಸ್ಪರ್ಧೆ ಮಾಡಿತ್ತು. ಪ್ರಯೋಗ ಅರ್ಹತೆ ಬಳಿಕ ಎಂಡಿಎಲ್​ಗೆ ​ಈ ಅವಕಾಶ ಪಡೆದಿದೆ ಎಂದು ಭಾರತೀಯ ನೌಕೆಯ ಕಾಮ್ರೇಡ್​ ರ್ಯಾಂಕ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಯಮಿತವಾಗಿ ಎದುರಾಗುವ ಸಣ್ಣ ಅಡೆತಡೆಗ ಬ್ಯಾಟರಿ ಚಾರ್ಚ್​​ನ ಅವಶ್ಯಕತೆ ಇಲ್ಲದೇ ಎರಡು ವಾರಗಳ ಕಾಲ ಸಬ್​ಮರಿನ್​ಗಳು ನೀರಿನಾಳದಲ್ಲಿಯೇ ಇರಲು ಸಾಧ್ಯವೇ ಎಂದು ಸಮುದ್ರದ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ಸಿಸ್ಟಮ್‌ಗಳೊಂದಿಗೆ ಪ್ರಯೋಗಗಳನ್ನು ನಡೆಸಿತು. ಎಂಡಿಎಲ್​ ಮತ್ತು ಲಾರ್ಸೆನ್​ ಮತ್ತು ಟೊಬ್ರೊ ಈ ಯೋಜನೆಯ ಸ್ಪರ್ಧಿಗಳಾಗಿದ್ದಾರೆ.

ಇದೇ ವರ್ಷದ ಜೂನ್​ನಲ್ಲಿ ಸ್ಪೇನ್​ ಕಾರ್ಟಜೆನಾದಲ್ಲಿ ನಡೆದ ತಯಾರಿ ಪ್ರಯೋಗದಲ್ಲಿ ಲಾರ್ಸೆನ್​ ಮತ್ತು ಟೊಬ್ರೊ ಸಬ್​ಮರಿನ್​ ಬೇಸ್​ನ ವ್ಯವಸ್ಥೆಯ ಪ್ರದರ್ಶನ ನಡೆಸಿದ್ದರು ಎಂದು ನೌಕಾಧಿಕಾರಿಗಳು ತಿಳಿಸಿದ್ದಾರೆ. ನೀರಿನಾಳದಲ್ಲಿ ಬಲವನ್ನು ಹೆಚ್ಚುಗೊಳಿಸುವಲ್ಲಿ ಮತ್ತು ಇದಕ್ಕಾಗಿ ಅನೇಕ ಕಾರ್ಯಗಳನ್ನು ನಡೆಸುವ ಗುರಿಯನ್ನು ಸರ್ಕಾರ ಹೊಂದಿದೆ.

ಭಾರತೀಯ ನೌಕಾ ಪಡೆಯ ದೀರ್ಘಾವಧಿಯ ಜಲಾಂತರ್ಗಾಮಿ ಸ್ವಾಧೀನ ಯೋಜನೆಯು 2014ರ ಬಳಿಕ 18 ಸಾಂಪ್ರದಾಯಿಕ ಮತ್ತು 6 ಪರಮಾಣು ದಾಳಿ ಜಲಾಂತರ್ಗಾಮಿ ನೌಕೆಗಳನ್ನು ಹೊಂದುವಂತೆ ಸುಧಾರಣೆ ನಡೆಸಲಾಗಿತ್ತು. ಪ್ರಾಜೆಕ್ಟ್​ 75ರ ಅಡಿಯಲ್ಲಿ 6 ಸ್ಕಿರೊಯಿನ್​ ದೋಣಿಗಳೊಂದಿಗೆ ಮೂರು ದೋಣಿಗಳನ್ನು ಹೊಂದಲು ಯೋಜನೆ ವಿಸ್ತರಿಸಲಾಗಿದೆ. ಇದೇ ವೇಳೆ ಪ್ರಾಜೆಕ್ಟ್​ 75 ಇಂಡಿಯಾ ಅಡಿಯಲ್ಲಿ 6 ಸಬ್​ ಮರಿನ್​ ನೌಕೆಗಳಿಗೆ ಬಂದರು ನಿರ್ಮಾಣದ ಕುರಿತು ಗಮನ ಹರಿಸಿದೆ.

ಮುಂದಿನ ಪೀಳಿಗೆಯ ಯೋಜನೆ 76ರಲ್ಲಿ ಸಂಪೂರ್ಣ ಭಾರತೀಯ ವಿನ್ಯಾಸದ ಜೊತೆಗೆ ಆರು ಸಂಪ್ರದಾಯಿಕ ಸಬ್​ಮರಿನ್​ ಅನ್ನು ನಿರ್ಮಾಣ ಮಾಡಲಾಗುವುದು. ಜೊತೆಗೆ ಇದನ್ನು ರಕ್ಷಣಾ ಸಚಿವಾಲಯದ 100 ದಿನದ ಅಜೆಂಡಾದಲ್ಲಿ ಇದನ್ನು ಸಕ್ರಿಯಗೊಳಿಸಲಾಗುವುದು. ಈ ಭವಿಷ್ಯದ ಯೋಜನೆಯನ್ನು ಡಿಆರ್​ಡಿಒ ಮತ್ತು ನೌಕಾಸೇನೆ ಒಟ್ಟಿಗೆ ತೆಗೆದುಕೊಂಡು ಹೋಗಲಿದೆ.

ಇದನ್ನೂ ಓದಿ: ಪ್ರಸಾರ ಮಸೂದೆ ಕರಡನ್ನು ಹಿಂಪಡೆದ ಸರ್ಕಾರ; ಅ. 15ರ ವರೆಗೆ ಸಲಹೆಗೆ ಸಮಯಾವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.