ETV Bharat / bharat

ಮರಾಠಾ ಮೀಸಲಾತಿ: ಅ.12ರಂದು ದಸರಾ ರ್‍ಯಾಲಿಯಲ್ಲಿ ಬಲಪ್ರದರ್ಶನಕ್ಕೆ ಜಾರಂಗೆ ಪಾಟೀಲ್ ಕರೆ - Maratha Quota - MARATHA QUOTA

ಮರಾಠಾ ಮೀಸಲಾತಿಗಾಗಿ ಒತ್ತಾಯಿಸಲು ದಸರಾ ರ್‍ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮನೋಜ್ ಜಾರಂಗೆ ಪಾಟೀಲ್ ಕರೆ ನೀಡಿದ್ದಾರೆ.

ಮನೋಜ್ ಜಾರಂಗೆ ಪಾಟೀಲ್
ಮನೋಜ್ ಜಾರಂಗೆ ಪಾಟೀಲ್ (IANS)
author img

By PTI

Published : Sep 30, 2024, 1:05 PM IST

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಾರಾಯಣಗಡದಲ್ಲಿ ನಡೆಯಲಿರುವ ದಸರಾ ರ್‍ಯಾಲಿಯಲ್ಲಿ ಮರಾಠಾ ಮೀಸಲಾತಿಗಾಗಿ ಒತ್ತಾಯಿಸಲು ಬಡವರು ಮತ್ತು ನಿರ್ಗತಿಕರು ಸೇರಿದಂತೆ ಸಮಸ್ತ ಮರಾಠಾ ಜನತೆ ಒಗ್ಗೂಡಬೇಕು ಎಂದು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಸೋಮವಾರ ಮನವಿ ಮಾಡಿದ್ದಾರೆ. ಈ ವರ್ಷ ಅಕ್ಟೋಬರ್ 12ರಂದು ದಸರಾ ಆಚರಿಸಲಾಗುವುದು.

ಮರಾಠಾ ಸಮುದಾಯದ ಜನ ಮತ್ತು ರೈತರು ಭಾಗವಹಿಸುವ ರ್‍ಯಾಲಿಯಲ್ಲಿ ತಾವು ಮಾತನಾಡಲಿರುವುದಾಗಿ ಹೇಳಿದ ಜಾರಂಗೆ, ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯದ ಮಾತು ಇರುವುದಿಲ್ಲ ಎಂದರು. ಮರಾಠಾ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ ನಂತರ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಛತ್ರಪತಿ ಸಂಭಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜಾರಂಗೆ ಪಾಟೀಲ್ ಸೆಪ್ಟೆಂಬರ್ 17 ರಂದು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆದರೆ ಮರಾಠಾ ಸಮುದಾಯದ ಮನವಿಯನ್ನು ಪರಿಗಣಿಸಿ ಅವರು ಸೆಪ್ಟಂಬರ್ 25ರಂದು ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಂಡರು.

ಈ ವರ್ಷದ ಫೆಬ್ರವರಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯು ಮರಾಠರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ವರ್ಗದ ಅಡಿಯಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಆದಾಗ್ಯೂ, ಒಬಿಸಿ ಕೋಟಾ ಅಡಿಯಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ತಮ್ಮ ಬೇಡಿಕೆಗೆ ಜಾರಂಗೆ ಅಂಟಿಕೊಂಡಿದ್ದಾರೆ.

"ನಾರಾಯಣಗಡದಲ್ಲಿ ದಸರಾ ರ್‍ಯಾಲಿ ನಡೆಯಲಿದ್ದು, ಅಲ್ಲಿ ನಾನು ಭಕ್ತನಾಗಿ ಹೋಗಿ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ. ನಾರಾಯಣಗಡಕ್ಕೆ ಬರುವ ನನ್ನ ಸಮುದಾಯದ ಜನರ ಆಶೀರ್ವಾದ ಪಡೆಯುತ್ತೇನೆ. ಬೀಡ್ ಮತ್ತು ಮರಾಠಾವಾಡದ ಜನತೆ ಮತ್ತು ಕೆಲಸದ ನಿಮಿತ್ತ ಹೊರಗೆ ಇರುವವರು ದಸರಾದಂದು ನಾರಾಯಣಗಡಕ್ಕೆ ಬರಬೇಕು" ಎಂದು ಜಾರಂಗೆ ಹೇಳಿದರು.

"ಇದು ನಮ್ಮ ಒಗ್ಗಟ್ಟನ್ನು ತೋರಿಸುವ ಸಮಯ. ಹೀಗಾಗಿ ರಾಜ್ಯದ ಎಲ್ಲ ಭಾಗಗಳಿಂದ ಜನರು ನಾರಾಯಣಗಡಕ್ಕೆ ಬರಬೇಕು" ಎಂದು ಮನವಿ ಮಾಡಿದರು.

"ಇದು ನಮ್ಮ ಒಗ್ಗಟ್ಟನ್ನು ತೋರಿಸಲು ಒಂದು ಅವಕಾಶ. ರ್‍ಯಾಲಿಯಲ್ಲಿ ಜಾತಿ ಮತ್ತು ರಾಜಕೀಯದ ಮಾತುಗಳಿಗೆ ಯಾವುದೇ ಅವಕಾಶವಿರುವುದಿಲ್ಲ. ನಮ್ಮ ಒಗ್ಗಟ್ಟನ್ನು ತೋರಿಸಲು ಸರಿಯಾದ ಸಮಯ ಬಂದಿದೆ. ಬಡವರು ಮತ್ತು ನಿರ್ಗತಿಕರು ತಮ್ಮ ಒಗ್ಗಟ್ಟನ್ನು ತೋರಿಸಲು ಇದು ಸರಿಯಾದ ಸಮಯ. ಆದ್ದರಿಂದ, ಮರಾಠಾ ಸಮುದಾಯದ ಜನ, ರೈತರು ನಾರಾಯಣಗಡಕ್ಕೆ ಬರಲಿದ್ದಾರೆ" ಎಂದು ಅವರು ಹೇಳಿದರು.

ಇದನ್ನೂ ಓದಿ: 'ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ': ಖರ್ಗೆ ಹೇಳಿಕೆ - J K campaigning

ETV Bharat Logo

Copyright © 2024 Ushodaya Enterprises Pvt. Ltd., All Rights Reserved.