ವೈಶಾಲಿ (ಬಿಹಾರ): ಬಿಹಾರದ ವೈಶಾಲಿಯಲ್ಲಿ ಕನ್ವರ್ ಯಾತ್ರೆ ವೇಳೆ ದೊಡ್ಡ ದುರಂತವೊಂದು ಸಂಭವಿಸಿದೆ. ಡಿಜೆ ವಾಹನಕ್ಕೆ ಹೈ ಟೆನ್ಷನ್ ತಂತಿ ತಗುಲಿ 10 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಕನ್ವಾರಿಯಾಗಳ ಸ್ಥಿತಿ ಚಿಂತಾಜನಕವಾಗಿದೆ.
ವೈಶಾಲಿಯ ಹಾಜಿಪುರ ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸುಲ್ತಾನ್‌ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ಹತ್ತಕ್ಕೂ ಹೆಚ್ಚು ಯುವಕರು ಬೊಲ್ಬಾಮ್‌ಗೆ ಹೋಗುತ್ತಿದ್ದರು. ಡಿಜೆ ಟ್ರಾಲಿಯೊಂದಿಗೆ ಸರನ್‌ನ ಪಹೇಲ್ಜಾ ಘಾಟ್‌ಗೆ ಹೋಗುತ್ತಿದ್ದರು. ಸೋನ್‌ಪುರ ಬಾಬಾ ಹರಿಹರನಾಥದಲ್ಲಿ ಗಂಗಾಜಲದಿಂದ ಜಲಾಭಿಷೇಕದ ಯೋಜನೆ ಇತ್ತು. ಈ ವೇಳೆ ದುರಂತ ಅಪಘಾತ ಸಂಭವಿಸಿದೆ.
''ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಆದರೆ, 8 ಜನರ ಸಾವಿನ ಬಗ್ಗೆ ಸರ್ಕಾರಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಒಟ್ಟು 10 ಮಂದಿ ಸಾವನ್ನಪ್ಪಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ.
ಕನ್ವಾರಿಯಾದ ಜನರು ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್‌ಪುರ ಗ್ರಾಮಕ್ಕೆ ಡಿಜೆ ಹಚ್ಚಿಕೊಂಡು ಮೆರವಣಿಗೆ ಹೊರಟಿದ್ದ ವೇಳೆ ರಸ್ತೆಯ ಮೇಲೆ 11 ಸಾವಿರ ವೋಲ್ಟ್ ತಂತಿ ತಗುಲಿದೆ. ಆ ತಂತಿಗೆ ಡಿಜೆ ತಾಗಿದೆ. ಪರಿಣಾಮ ಸ್ಥಳದಲ್ಲೇ ಎಂಟು ಜನರು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸದರ್ ಎಸ್‌ಡಿಪಿಒ ಓಂಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ದೇಗುಲದ ಗೋಡೆ ದಿಢೀರ್ ಕುಸಿದು 9 ಮಕ್ಕಳು ಸಾವು - Temple Wall Collapse