ನವದೆಹಲಿ: ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸುವ ಪ್ರಯತ್ನದ ಭಾಗವಾಗಿ ದೆಹಲಿಯಲ್ಲಿ ಮೈಥೇಯಿ, ಕುಕಿ, ನಾಗಾ ಸಮುದಾಯಗಳ ಶಾಸಕರು ಮಂಗಳವಾರ ಸಭೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಂಘರ್ಷ ಶುರುವಾರ 17 ತಿಂಗಳ ಬಳಿಕ ಜನಪ್ರತಿನಿಧಿಗಳೂ ಮೊದಲ ಬಾರಿಗೆ ಸಭೆ ಸೇರಿದ್ದಾರೆ.
ರಾಜ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಕೊನೆಗೊಳಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ ಈ ಸಭೆ ಕರೆದಿದೆ.
ಸಭೆಗೆ ಮೈಥೇಯಿ ಸಮುದಾಯದ ಕಡೆಯಿಂದ ವಿಧಾನಸಭೆ ಸ್ಪೀಕರ್ ತೊಕ್ಚೋಮ್ ಸತ್ಯಬ್ರತ ಸಿಂಗ್, ಶಾಸಕ ತೊಂಗಮ್ ಬಿಸ್ವಜಿತ್ ಸಿಂಗ್, ಕುಕಿ ಸಮುದಾಯದಿಂದ ಸಚಿವರಾದ ಲೆಟ್ಪಾವೊ ಹಾಕಿಪ್ ಮತ್ತು ನೆಮ್ಚಾ ಕಿಪ್ಗೆನ್, ನಾಗಾ ಸಮುದಾಯದಿಂದ ಶಾಸಕರಾದ ರಾಮ್ ಮುಯಿವಾ, ಅವಾಂಗ್‌ಬೋ ನ್ಯೂಮೈ ಮತ್ತು ಎಲ್ ದಿಖೋ ಹಾಜರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಸಭೆಗೆ ಅವರು ಹಾಜರಾಗಿಲ್ಲ ಎಂಬುದು ವಿಶೇಷ.
ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವೆ ಮಾತುಕತೆಗಳು ಅಗತ್ಯವಿದೆ ಎಂದು ಅಮಿತ್ ಶಾ ಅವರು ಹೇಳಿದ ಸುಮಾರು ಒಂದು ತಿಂಗಳ ನಂತರ ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಎರಡೂ ಸಮುದಾಯಗಳ ಜೊತೆಗೆ ಚರ್ಚೆ ನಡೆಸುತ್ತಿದೆ.
ಇನ್ನೂ. ಸಭೆಯಲ್ಲಿ ಪಾಲ್ಗೊಳ್ಳುವ ನಾಗಾ, ಕುಕಿ ಮತ್ತು ಮೈಥೇಯಿ ಸಮುದಾಯಗಳ ಶಾಸಕರು ಮತ್ತು ಮಂತ್ರಿಗಳನ್ನು ಗೃಹ ಇಲಾಖೆ ಪತ್ರಗಳು ಮತ್ತು ದೂರವಾಣಿ ಕರೆಗಳ ಮೂಲಕ ಆಹ್ವಾನಿಸಿದೆ.
ಅಧಿವೇಶನಕ್ಕೆ ಗೈರು: ಸಂಷರ್ಘದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಗಿದ ವಿಧಾನಸಭೆ ಅಧಿವೇಶನದಲ್ಲಿ ಏಳು ಬಿಜೆಪಿ ಶಾಸಕರು, ಹತ್ತು ಕುಕಿ ಸಮುದಾಯದ ಶಾಸಕರು ಗೈರಾಗಿ ತಮ್ಮ ಅಸಮಾಧಾನ ತೋರ್ಪಡಿಸಿದ್ದರು. ಕುಕಿ ಸಮುದಾಯದ ಬೇಡಿಕೆಯಂತೆ, ಪ್ರತ್ಯೇಕ ಆಡಳಿತ ಅಥವಾ ಕೇಂದ್ರಾಡಳಿತ ಪ್ರದೇಶ ರಚನೆಗೆ ಒತ್ತಾಯಿಸಿದ್ದರು.
ಬಹುಸಂಖ್ಯಾತರಾದ ಮೈಥೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿದ್ದರ ವಿರುದ್ಧ ಕಳೆದ ವರ್ಷ ಮೇ 3 ರಂದು ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿತ್ತು. ಅಂದಿನಿಂದ ಆರಂಭವಾದ ಸಂಘರ್ಷದಲ್ಲಿ ಕುಕಿ ಮತ್ತು ಮೈಥೇಯಿ ಸಮುದಾಯಗಳಿಗೆ ಸೇರಿದ 220 ಕ್ಕೂ ಹೆಚ್ಚು ಜನರು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ; ಬಿಷ್ಣೋಯ್ ಹಿಟ್ಲಿಸ್ಟ್ನಲ್ಲಿ ಬಾಬಾ ಸಿದ್ದಿಕಿ ಪುತ್ರ: ಯಾರೇ ಸಿಕ್ಕರೂ ಹತ್ಯೆ ಮಾಡಲು ಬಂದಿತ್ತು ಆದೇಶ!