ಕನ್ಯಾಕುಮಾರಿ (ತಮಿಳುನಾಡು): ಗೂಗಲ್ನ ಅತ್ಯುತ್ತಮ ಸಾಫ್ಟ್ವೇರ್ ಎಂದರೆ ಅದು ಗೂಗಲ್ ಮ್ಯಾಪ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೂಗಲ್ ಮ್ಯಾಪ್ನಿಂದ ಹೊಸ ಸ್ಥಳಗಳ ನಡುವೆ ದೂರ ಎಷ್ಟಿದೆ ಎಂಬುದನ್ನು ಕಂಡು ಹಿಡಿಯಬಹುದಾಗಿದೆ. ಆ ಮೂಲಕ ನಿಗದಿತ ಸ್ಥಳವನ್ನು ಸುಲಭವಾಗಿ ತಲುಪಬಹುದಾಗಿದೆ. ಅಲ್ಲದೇ, ಗೂಗಲ್ ಮ್ಯಾಪ್ ಸಹಾಯದಿಂದ ದೂರದ ಪ್ರಯಾಣ ಮಾಡುವವರ ಸಂಖ್ಯೆ ಈಗೀಗಂತೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಇದು ಅನೇಕ ಜನರಿಗೆ ಧೈರ್ಯದಿಂದ ಏಕಾಂಗಿಯಾಗಿ ಪ್ರಯಾಣಿಸಲು ಸಹಾಯ ಮಾಡುತ್ತದೆ. ಈ ವೇಳೆ ನಾಗರಕೋಯಿಲ್‌ನ ಯುವಕನೊಬ್ಬ ತನ್ನ ಎಕ್ಸ್ ಪೇಜ್‌ನಲ್ಲಿ ತನ್ನ ತಂದೆಯ ಬ್ಯಾಗ್ ಮತ್ತು ಫೋನ್ ಅನ್ನು ರೈಲಿನಲ್ಲಿ ಕದ್ದಿರುವ ಬಗ್ಗೆ ಗೂಗಲ್ ಮ್ಯಾಪ್ ಬಳಸಿ ಪತ್ತೆ ಹಚ್ಚಿರುವ ಪೋಸ್ಟ್ ಮಾಡಿದ್ದು, ಇದೀಗ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಏನಿದು ಘಟನೆ: ಅದರಲ್ಲಿ ಅವರು, "ನನ್ನ ತಂದೆ ನಾಗರ್‌ಕೋಯಿಲ್‌ನಿಂದ ತಿರುಚ್ಚಿಗೆ ಸ್ಲೀಪರ್ ಕ್ಲಾಸ್‌ನಲ್ಲಿ ನಾಗರ್‌ಕೋಯಿಲ್ - ಕಾಚಿಗೂಡ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರು 1:43 ಕ್ಕೆ ನಾಗರ್‌ಕೋಯಿಲ್‌ನಿಂದ ರೈಲು ಹತ್ತಿದರು. ರೈಲು ಖಾಲಿಯಾಗಿತ್ತು. ನಂತರ ನನ್ನ ತಂದೆಯೊಂದಿಗೆ ಹತ್ತಿದ ಇನ್ನೊಬ್ಬರು ಬ್ಯಾಗ್ ಮತ್ತು ಮೊಬೈಲ್ ಫೋನ್ ಕಳ್ಳತನ ಮಾಡಿದ್ದಾರೆ. ಕದ್ದು ವಸ್ತುಗಳ ಸಮೇತ ಖದೀಮರು ತಿರುನೆಲ್ವೇಲಿ ಜಂಕ್ಷನ್‌ನಲ್ಲಿ ರೈಲಿನಿಂದ ಇಳಿದಿದ್ದಾರೆ. ಇದನ್ನು ಮನಗಂಡ ನನ್ನ ತಂದೆ ರೈಲಿನಲ್ಲಿ ಹುಡುಕಾಡಿ, ನಸುಕಿನ 3:51 ಕ್ಕೆ ತನ್ನ ಸ್ನೇಹಿತನ ಫೋನ್‌ನ ಸಹಾಯದಿಂದ ಫೋನ್ ಕಳುವಾಗಿರುವ ವಿಷಯವನ್ನು ನನಗೆ ತಿಳಿಸಿದರು. ಅದೃಷ್ಟವಶಾತ್, ಅವರ ಫೋನ್‌ನಲ್ಲಿ ಲೊಕೇಶನ್ ಹಂಚಿಕೆ ಆನ್ ಆಗಿತ್ತು. ಅದನ್ನು ನನ್ನೊಂದಿಗೆ ಹಂಚಿಕೊಂಡರು.
ಅದರ ಪ್ರಕಾರ ನಾನು ಮೊಬೈಲ್ ಇರುವ ಸ್ಥಳವನ್ನು ಟ್ರ್ಯಾಕ್ ಮಾಡಿದೆ. ಅದನ್ನು ಪರಿಶೀಲಿಸಿದಾಗ ಮೊಬೈಲ್ ತಿರುನಲ್ವೇಲಿ, ಮೇಳಪಾಳ್ಯಂ ಬಳಿ ರೈಲಿನಲ್ಲಿತ್ತು. ಆ ಮೂಲಕ ಕಳ್ಳ ಬೇರೊಂದು ರೈಲಿನಲ್ಲಿ ನಾಗರಕೋಯಿಲ್ಗೆ ವಾಪಸ್ ಆಗುತ್ತಿರುವುದು ಗೊತ್ತಾಯಿತು. ಅದನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ನಾನು ನನ್ನ ಆಪ್ತ ಸ್ನೇಹಿತ ಬಾಬಿನ್, ಸ್ಥಳೀಯ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದೆ. ಮತ್ತು ನಾವಿಬ್ಬರೂ ಕಳ್ಳನನ್ನು ಹಿಡಿಯಲು ನಾಗರಕೋಯಿಲ್ ರೈಲು ನಿಲ್ದಾಣಕ್ಕೆ ಹೋದೆವು.
ಒಬ್ಬ ರೈಲ್ವೆ ಪೊಲೀಸ್ ಸಿಬ್ಬಂದಿ ನಮ್ಮೊಂದಿಗೆ ಬಂದರು. ಕನ್ಯಾಕುಮಾರಿ ಎಕ್ಸ್‌ಪ್ರೆಸ್‌ನಲ್ಲಿ ಕಳ್ಳ ಬಂದಿದ್ದಾನೆ. ರೈಲಿನಲ್ಲಿ ಕಿಕ್ಕಿರಿದು ಜನರು ತುಂಬಿದ್ದರು. ಮತ್ತು ನನ್ನ ಬಳಿ ಇದ್ದ ಏಕೈಕ ಚಿಹ್ನೆ ಎಂದರೆ ಅದು ನನ್ನ ತಂದೆಯ ಫೋನ್ ಮತ್ತು ಅವರ ಕಪ್ಪು ಚೀಲ. ರೈಲ್ವೆ ನಿಲ್ದಾಣದಲ್ಲಿ ಕಳ್ಳನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ, ಅವರ ಚಲನವಲನದ ಮೇಲೆ ಗಮನ ಇಟ್ಟೆವು. ಅವರು ಮುಖ್ಯ ಗೇಟ್ ಮೂಲಕ ನಿರ್ಗಮಿಸುವುದನ್ನು ಪತ್ತೆ ಹಚ್ಚಿದೆವು ಮತ್ತು ಅಣ್ಣಾ ಬಸ್ ನಿಲ್ದಾಣ ಮತ್ತು ವಡಸೇರಿ ಕ್ರಿಸ್ಟೋಫರ್ ಬಸ್ ನಿಲ್ದಾಣದಿಂದ ನಾಗರಕೋಯಿಲ್ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಸ್ಥಳೀಯ ಬಸ್ ಅನ್ನು ಈ ಖದೀಮ ಏರಿದ್ದನು.
ನಾವಿಬ್ಬರೂ ದ್ವಿಚಕ್ರ ವಾಹನದಲ್ಲಿ ಅವನನ್ನು ಹಿಂಬಾಲಿಸಿದೆವು. 2 ರಿಂದ 3 ನಿಮಿಷಗಳ ನಂತರ, ನಾನು ಅವನನ್ನು 2 ಮೀಟರ್ ದೂರದಲ್ಲಿ ಗೂಗಲ್ ಮ್ಯಾಪ್ ಸಹಾಯದಿಂದ ಹುಡಿಕಿದೆವು. ಸಿಐಟಿಯು ಸದಸ್ಯರಾದ ನನ್ನ ತಂದೆಯ ಬ್ಯಾಗ್‌ನಲ್ಲಿ CITU ಲೋಗೋ ಇರುವುದನ್ನು ನಾನು ಕಂಡುಕೊಂಡೆ. ನಾನು ಮತ್ತು ನನ್ನ ಸ್ನೇಹಿತ ಬಸ್ ನಿಲ್ದಾಣದಲ್ಲಿ ಕಳ್ಳನನ್ನು ಹಿಡಿದು ಬಸ್ ನಿಲ್ದಾಣದಲ್ಲಿದ್ದ ಇತರರ ಸಹಾಯದಿಂದ ವಸ್ತುಗಳನ್ನು ಮರುಪಡೆದುಕೊಂಡೆವು ಎಂದು ಸಂತ್ರಸ್ತನ ಪುತ್ರ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪೊಲೀಸ್ ಇಲಾಖೆ ಸಿಬ್ಬಂದಿ ಬಂದು ತಪಾಸಣೆ ನಡೆಸಿದ ವೇಳೆ, ಆ ವ್ಯಕ್ತಿ ಇತರ ಅನೇಕ ಜನರ ವಸ್ತುಗಳನ್ನು ಕದ್ದಿರುವುದು ಕಂಡುಬಂದಿದೆ. ಪೊಲೀಸರು ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಂತ್ರಸ್ತನ ಪುತ್ರ ಪೋಸ್ಟ್ವೊಂದನ್ನು ಮಾಡಿದ್ದಾರೆ. ಇದೀಗ ಈ ಪೋಸ್ಟ್ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚನೆ ಆರೋಪ; ಅರ್ಜುನ ಪ್ರಶಸ್ತಿ ವಿಜೇತ, ರಾಷ್ಟ್ರೀಯ ಹಾಕಿ ಆಟಗಾರನ ವಿರುದ್ಧ ಎಫ್ಐಆರ್