ETV Bharat / bharat

ಮೋದಿ ಫೋಟೋ ನೋಡುತ್ತಿದ್ದಂತೆ ಕೆರಳಿದ ಯುವಕ; ನಾಲ್ವರಿಗೆ ಮಾಂಸ ಕಿತ್ತುಬರುವಂತೆ ಕಚ್ಚಿದ! - PM MODI PHOTO - PM MODI PHOTO

ಅಸ್ಸೋಂನ ದರ್ರಾಂಗ್ ಜಿಲ್ಲೆಯ ಸಿಪಾಜರ್​ನಲ್ಲಿ ಯುವಕನೊಬ್ಬ ಪ್ರಧಾನಿ ಮೋದಿ ಫೋಟೋ ನೋಡಿ ಕೋಪಗೊಂಡು ನಾಲ್ವರನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.

Prime Minister Modi and Jintu Bania
ಪ್ರಧಾನಿ ಮೋದಿ ಹಾಗೂ ಜಿಂಟು ಬನಿಯಾ (ETV Bharat)
author img

By ETV Bharat Karnataka Team

Published : May 30, 2024, 4:03 PM IST

ದರ್ರಾಂಗ್ (ಅಸ್ಸೋಂ) : ಯುವಕನೊಬ್ಬ ಪ್ರಧಾನಿ ಮೋದಿ ಫೋಟೋ ನೋಡಿ ಕೋಪಗೊಂಡು ನಾಲ್ವರನ್ನು ಕಚ್ಚಿ ದುಷ್ಕೃತ್ಯ ಎಸಗಿರುವ ಘಟನೆ ದರ್ರಾಂಗ್ ಜಿಲ್ಲೆಯ ಸಿಪಾಜರ್​ನಲ್ಲಿ ನಡೆದಿದೆ. ದಾಳಿಯು ಎಷ್ಟು ತೀವ್ರವಾಗಿತ್ತು ಎಂದರೆ, ಯುವಕ ಅವರನ್ನು ಕಚ್ಚಿ ದೇಹದಿಂದ ಮಾಂಸವನ್ನು ಹೊರಗೆಳೆದಿದ್ದಾನೆ. ಆ ಯುವಕ ಮೋದಿ ಫೋಟೋ ನೋಡಿ ತನ್ನ ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಂಡಿದ್ದಾನೆ. ಇದು ರಾಜ್ಯದಲ್ಲಿ ಆತಂಕ ಮೂಡಿಸಿದೆ.

ಏನಿದು ಘಟನೆ? : ಮೇ 29 ರಂದು ಮಧ್ಯಾಹ್ನ ಜಿಂಟು ಬನಿಯಾ ಎಂಬ ಯುವಕ ಸಿಪಾಜರ್‌ನ ಸಿಪಾಜರ್ ಅಕಾಡೆಮಿ ಫೀಲ್ಡ್ ಕಾಂಪ್ಲೆಕ್ಸ್‌ನಲ್ಲಿರುವ ಆಧಾರ್ ದಾಖಲಾತಿ ಕೇಂದ್ರಕ್ಕೆ ಇದ್ದಕ್ಕಿದ್ದಂತೆ ಪ್ರವೇಶಿಸಿದ್ದ. ಅಲ್ಲಿ ಆಧಾರ್ ಕಾರ್ಡ್​ ಬಗ್ಗೆ ವಿಚಾರಿಸಿದ ನಂತರ, ಯುವಕ ಮೊದಲು ಅಲ್ಲಿ ಪ್ರದರ್ಶಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋದ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದ.

ಕ್ರಮೇಣ ಆತನ ವರ್ತನೆ ಅಪಾಯಕಾರಿ ತಿರುವು ಪಡೆದಿದೆ. ನಂತರ ಯುವಕ ತನ್ನ ಕೋಪವನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆ ಕೇಂದ್ರದಲ್ಲಿದ್ದವರು ಯುವಕರನ್ನು ಸಮಾಧಾನಪಡಿಸಲು ಯತ್ನಿಸಿದರೂ ವಿಫಲರಾಗಿದ್ದಾರೆ. ಇದ್ದಕ್ಕಿದ್ದಂತೆ ಯುವಕ ಆಧಾರ್ ಕೇಂದ್ರದ ಉದ್ಯೋಗಿಯ ಎದೆಗೆ ಕಚ್ಚಿದ್ದಾನೆ.

ಕೂಡಲೇ ಇತರ ಮೂವರು ಆಧಾರ್ ಕೇಂದ್ರದ ಸಿಬ್ಬಂದಿ ಯುವಕನನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಕೋಪಗೊಂಡ ಯುವಕ ಅವರನ್ನೂ ಸಹ ಕಚ್ಚಿ ದೇಹದ ಮಾಂಸವನ್ನು ಕಿತ್ತಿದ್ದಾನೆ. ಆಗ ಆಧಾರ್ ಕೇಂದ್ರದಲ್ಲಿ ಗದ್ದಲ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಪಜಾರ್‌ನ ಭುಕ್ತಬರಿ ಬನಿಯಾಪರ ನಿವಾಸಿ ಜಿಂಟು ಬನಿಯಾನನ್ನು ಬಂಧಿಸಿದ್ದಾರೆ.

ಏತನ್ಮಧ್ಯೆ, ದಾಳಿಯಲ್ಲಿ ಗಾಯಗೊಂಡವರನ್ನು ಸಿಪಾಜರ್‌ನಲ್ಲಿರುವ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಹೆಚ್‌ಸಿ) ರವಾನಿಸಲಾಗಿದೆ. ಸಿಪಾಜರ್ ಅಕಾಡೆಮಿ ಫೀಲ್ಡ್ ಕ್ಯಾಂಪಸ್‌ನ ಆಧಾರ್ ಕೇಂದ್ರದಲ್ಲಿ ನಡೆದಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಘಟನೆ ಸಿಪಾಜರ್‌ನಾದ್ಯಂತ ಸಂಚಲನ ಮೂಡಿಸಿದೆ. ಆದರೆ ಘಟನೆಗೆ ಕಾರಣವೇನು ಮತ್ತು ಯುವಕ ಪ್ರಧಾನಿ ಮೋದಿ ಅವರ ಫೋಟೋ ನೋಡಿದ ನಂತರ ಏಕೆ ಹುಚ್ಚುಚ್ಚಾಗಿ ವರ್ತಿಸಿದ ಎಂಬುದು ಪೊಲೀಸ್ ತನಿಖೆಯಿಂದ ಮಾತ್ರ ಬೆಳಕಿಗೆ ಬರಬೇಕಿದೆ.

ಇದನ್ನೂ ಓದಿ : ಉಪ್ಪಿನ ಕಾಯಿ ಕೇಳುವ ನೆಪದಲ್ಲಿ ಮಹಿಳೆಯ ಕೆನ್ನೆ ಕಚ್ಚಿ ಗಾಯಗೊಳಿಸಿದ್ದ ಆರೋಪಿ ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.