ETV Bharat / bharat

ಯುವತಿ ಅಪಹರಿಸಿ ಮದುವೆಯಾದ ಕೇಸ್: 27 ವರ್ಷಗಳ ಬಳಿಕ ಆರೋಪಿ ಸೆರೆ; ಬಂಧಿಸಲು ಹೋದ ಪೊಲೀಸರಿಗೆ ಅಚ್ಚರಿ - KIDNAP

27 ವರ್ಷಗಳ ಹಿಂದಿನ ಅಪಹರಣ ಪ್ರಕರಣದಲ್ಲಿ ಆರೋಪಿಯನ್ನು ಗುಜರಾತ್​​ನ ಮೆಹ್ಸಾನಾ ಪೊಲೀಸರು ಬಂಧಿಸಿದ್ದಾರೆ.

kidnapping
ಯುವತಿಯನ್ನು ಅಪಹರಿಸಿ ಮದುವೆಯಾದ ಪ್ರಕರಣ (ETV Bharat)
author img

By ETV Bharat Karnataka Team

Published : Oct 11, 2024, 9:47 PM IST

ಮೆಹ್ಸಾನಾ(ಗುಜರಾತ್​): ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಅಂದಾಜು 3 ದಶಕಗಳ ಹಿಂದೆ ತನ್ನ ಗೆಳತಿಯನ್ನು ಅಪಹರಿಸಿದ್ದಕ್ಕಾಗಿ 48 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ, ಆರೋಪಿ ತನ್ನ ಗೆಳತಿಯನ್ನು ಅಪಹರಿಸಿ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದ. ದಂಪತಿಗೆ ನಾಲ್ವರು ಹೆಣ್ಣು ಮಕ್ಕಳೂ ಇದ್ದಾರೆ. ಆದರೆ, ಇದೀಗ ಬಂಧಿಸಿರುವುದು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜಸ್ಥಾನದ ಅಜ್ಮೀರ್‌ನ ಆರೋಪಿ 1997ರಲ್ಲಿ ತನ್ನ ಗೆಳತಿಯನ್ನು ಆಕೆಯ ಮನೆಯಿಂದ ಅಪಹರಿಸಿ ಮದುವೆಯಾಗಿದ್ದ. ಯುವತಿಯ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಕುರಿತು ಮೆಹ್ಸಾನಾ ಪೊಲೀಸ್ ಅಧಿಕಾರಿ​ ನರೇಂದ್ರ ಸಿಂಗ್ ಸೋಧಾ ಮಾತನಾಡಿ, "ನಾವು ಆರೋಪಿಯ ಮನೆ ತಲುಪಿದಾಗ ಆತ ತಾನು ಅಪಹರಿಸಿದ ಮಹಿಳೆಯೊಂದಿಗೆ ಸುಖಜೀವನ ನಡೆಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದಾಗ, ನಾವಿಬ್ಬರೂ ಸಂತೋಷದಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಹೇಳಿದನು. ಅಷ್ಟೇ ಅಲ್ಲದೇ, ತಮ್ಮ ನಾಲ್ವರು ಹೆಣ್ಣುಮಕ್ಕಳನ್ನು ನಮಗೆ ತೋರಿಸಿದನು. ಹೀಗಿದ್ದರೂ ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದ್ದರಿಂದ ಬಂಧಿಸದೆ ನಮಗೆ ಬೇರೆ ದಾರಿ ಇರಲಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ: ಸಿಂಧನೂರಲ್ಲಿ ಕಿಡ್ನಾಪ್​ ಆಗಿದ್ದ ನಾಲ್ವರು ಮಕ್ಕಳ ರಕ್ಷಣೆ: ಅಂತಾರಾಜ್ಯ ಅಪಹರಣಕಾರರ​ ಬಂಧನ - Children Kidnap Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.