ETV Bharat / bharat

ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್: ಐದು ಮಂದಿ ಸಜೀವ ದಹನ

ಬಸ್​ ಮೇಲೆ ಹೈಟೆನ್ಷನ್ ವಿದ್ಯುತ್​ ತಂತಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು 5 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

major-accident-in-ghazipur-fire-broke-out-in-the-bus-after-touching-the-hyphenation-line-many-people-reported-burnt
ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್
author img

By ETV Bharat Karnataka Team

Published : Mar 11, 2024, 6:01 PM IST

ಗಾಜಿಪುರ(ಉತ್ತರ ಪ್ರದೇಶ): ಮದುವೆಗೆ ತೆರಳುತ್ತಿದ್ದ ಬಸ್‌ ಮೇಲೆ 11,000 ವೋಲ್ಟ್‌ನ ಹೈಟೆನ್ಷನ್ ಕರೆಂಟ್ ವೈರ್ ಬಿದ್ದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಗಾಜಿಪುರದಲ್ಲಿ ನಡೆದಿದೆ. ಇಲ್ಲಿನ ಮರ್ದಾಹ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಬಸ್​​​​ನಲ್ಲಿದ್ದ 20 ರಿಂದ 25 ಮಂದಿ ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜಿಲ್ಲಾಡಳಿತವು ಇದುವರೆಗೆ ಐದು ಮಂದಿ ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿದೆ.

ಘಟನಾ ಸ್ಥಳದಲ್ಲಿ ಬಸ್​ಗೆ ಗೊತ್ತಿಕೊಂಡಿರುವ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್​ ವರಿಷ್ಠಾಧಿಕಾರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಆಗಮಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಮೌ ಜಿಲ್ಲೆಯ ಕಜಾದ ಪ್ರಯಾಣಿಕರು ಮದುವೆಗಾಗಿ ಮರ್ದಾಹ್​ಗೆ ಹೋಗುತ್ತಿದ್ದರು. ಆಗ ಈ ಅವಘಡ ಸಂಭವಿಸಿದೆ. ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ಧನಸಹಾಯ ನೀಡಿ ಉಚಿತ ಚಿಕಿತ್ಸೆಗೆ ನೀಡಲು ಸೂಚಿಸಿದ್ದಾರೆ.

ಇದನ್ನೂ ಓದಿ: ಮದುವೆ ಮೆರವಣಿಗೆಗೆ ತೆರಳುತ್ತಿದ್ದ ವೇಳೆ ಕಾಲುವೆಗೆ ಬಿದ್ದ ಕಾರು; ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.