ETV Bharat / bharat

ಮಣಿಪುರದ ಜನಾಂಗೀಯ ಕಲಹ ಪರಿಹಾರಕ್ಕೆ ನಾಳೆ ಮಹತ್ವದ ಸಭೆ ಕರೆದ ಗೃಹ ಸಚಿವಾಲಯ

ಮಣಿಪುರದಲ್ಲಿನ ಜನಾಂಗೀಯ ಕಲಹ ಪರಿಹಾರಕ್ಕಾಗಿ ನಾಳೆ ಗೃಹ ಸಚಿವಾಲಯ ಮಹತ್ವದ ಸಭೆ ಕರೆದಿದೆ.

author img

By ETV Bharat Karnataka Team

Published : 2 hours ago

ಮಣಿಪುರದ ಜನಾಂಗೀಯ ಕಲಹ ಪರಿಹಾರಕ್ಕೆ ಸೋಮವಾರ ಸಭೆ
ಮಣಿಪುರದ ಜನಾಂಗೀಯ ಕಲಹ ಪರಿಹಾರಕ್ಕೆ ಸೋಮವಾರ ಸಭೆ (IANS)

ಇಂಫಾಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ಗೃಹ ಸಚಿವಾಲಯ (ಎಂಎಚ್ಎ)ವು ಮಂಗಳವಾರ ನವದೆಹಲಿಯಲ್ಲಿ ಮೈಟಿ, ನಾಗಾ ಮತ್ತು ಕುಕಿ-ಝೋ ಸಮುದಾಯಗಳ ಶಾಸಕರ ಮಹತ್ವದ ಸಭೆ ಕರೆದಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಮಣಿಪುರದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಜನಾಂಗೀಯ ಕಲಹಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತು ಶಾಂತಿ ಪುನಃಸ್ಥಾಪಿಸಲು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಮಂಗಳವಾರ ಸಭೆ ನಡೆಯುವ ವಿಚಾರವನ್ನು ಅಧಿಕಾರಿಗಳು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲವಾದರೂ ಮೈಟಿ, ನಾಗಾ ಮತ್ತು ಕುಕಿ-ಜೋ ಸಮುದಾಯಗಳ ಸಚಿವರು ಮತ್ತು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಯಲಿದೆ ಎಂದು ದೃಢಪಡಿಸಿದ್ದಾರೆ.

ಮೈಟಿ ಮತ್ತು ನಾಗಾ ಸಮುದಾಯಗಳ ಕೆಲ ಸಚಿವರು ಮತ್ತು ಶಾಸಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಆದರೆ ಕುಕಿ-ಜೋ ಸಮುದಾಯಗಳಿಗೆ ಸೇರಿದ ಸಚಿವರು ಮತ್ತು ಶಾಸಕರು ಈ ಪ್ರಮುಖ ಸಭೆಯಲ್ಲಿ ಭಾಗವಹಿಸಲು ಇನ್ನೂ ನಿರ್ಧರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದ ಬಗ್ಗೆ ಚರ್ಚಿಸಲು ಮಂಗಳವಾರ ನವದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಗೃಹ ಸಚಿವಾಲಯ ತಿಳಿಸಿರುವುದಾಗಿ ಕುಕಿ ಸಮುದಾಯಕ್ಕೆ ಸೇರಿದ ಕ್ಯಾಬಿನೆಟ್ ಸಚಿವ ಲೆಟ್ಪಾವೊ ಹಾವೊಕಿಪ್ ದೃಢಪಡಿಸಿದರು. "ನಾವು (ಕುಕಿ-ಜೋ ಶಾಸಕರು) ಮಂಗಳವಾರದ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ." ಎಂದು ಹಾವೊಕಿಪ್ ದೂರವಾಣಿಯಲ್ಲಿ ಐಎಎನ್ಎಸ್​ಗೆ ತಿಳಿಸಿದರು.

ಮಾತುಕತೆಯಲ್ಲಿ ಭಾಗವಹಿಸಲಿರುವ ಎಲ್ಲಾ ನಾಗಾ, ಕುಕಿ-ಜೋ ಮತ್ತು ಮೀಟಿ ಶಾಸಕರು, ಸಚಿವರಿಗೆ ಎಂಎಚ್ಎ ವೈಯಕ್ತಿಕವಾಗಿ ಪತ್ರ ಬರೆದು ಮತ್ತು ದೂರವಾಣಿ ಕರೆಗಳ ಮೂಲಕ ಆಹ್ವಾನಿಸಿದೆ ಎಂದು ಇಂಫಾಲ್​ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಏತನ್ಮಧ್ಯೆ, ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ ಏಳು ಬಿಜೆಪಿ ಶಾಸಕರು ಸೇರಿದಂತೆ ಹತ್ತು ಶಾಸಕರು ಮಣಿಪುರದ ಬುಡಕಟ್ಟು ಜನರಿಗೆ ಪ್ರತ್ಯೇಕ ಆಡಳಿತ ಅಥವಾ ಕೇಂದ್ರಾಡಳಿತ ಪ್ರದೇಶ ರಚನೆಗೆ ಒತ್ತಾಯಿಸುತ್ತಿದ್ದಾರೆ.

10 ಶಾಸಕರಲ್ಲಿ ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ 12 ಸದಸ್ಯರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಲೆಟ್ಪಾವೊ ಹಾವೊಕಿಪ್ ಮತ್ತು ನೆಮ್ಚಾ ಕಿಪ್ಗೆನ್ ಸೇರಿದ್ದಾರೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಹಲವಾರು ಸಂದರ್ಭಗಳಲ್ಲಿ ಪ್ರತ್ಯೇಕ ಆಡಳಿತ ಅಥವಾ ಕೇಂದ್ರಾಡಳಿತ ಪ್ರದೇಶದ ಬೇಡಿಕೆಯನ್ನು ತಿರಸ್ಕರಿಸಿವೆ.

17 ತಿಂಗಳ ಹಿಂದೆ ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದ ನಂತರ ಮೈಟಿ ಮತ್ತು ಕುಕಿ-ಜೋ ಸಮುದಾಯಗಳ ನಡುವಿನ ಜನಾಂಗೀಯ ಕಲಹದ ಬಗ್ಗೆ ಚರ್ಚಿಸಲು ಎಂಎಚ್ಎ ಸಭೆ ಕರೆದಿರುವುದು ಇದೇ ಮೊದಲು.

ಇದನ್ನೂ ಓದಿ: ಶಬರಿಮಲೆ ಸ್ಪಾಟ್​ ಬುಕಿಂಗ್​ ರದ್ದು ಖಂಡಿಸಿ ಪ್ರತಿಭಟನೆ: ರಾಜಕೀಯ ತಿರುವು ಪಡೆದ ವಿವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.