ETV Bharat / bharat

ಪರವಾನಗಿ ಇಲ್ಲದ ಶ್ವಾನಗಳೊಂದಿಗೆ ವಾಕಿಂಗ್ ಮಾಡುವ ಅಭ್ಯಾಸ ನಿಮ್ಮಲ್ಲಿದ್ದರೆ ಈಗಿನಿಂದಲೇ ಬದಲಾಯಿಸಿಕೊಳ್ಳಿ: ಇಲ್ಲದಿದ್ದರೆ ದಂಡ ಕಟ್ಟಿಟ್ಟ ಬುತ್ತಿ - UNLICENSED PET OWNERS

ಪರವಾನಗಿ ಹೊಂದದ ಶ್ವಾನಗಳ ಮಾಲೀಕರಿಂದ ಲಖನೌ ಮಹಾನಗರ ಪಾಲಿಕೆಯು ದಂಡ ವಸೂಲಿ ಮಾಡುವ ಮೂಲಕ ಎಚ್ಚರಿಕೆ ನೀಡುತ್ತಿದೆ.

Pet Dog License Checking
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Oct 15, 2024, 9:47 AM IST

ಲಖನೌ (ಉತ್ತರ ಪ್ರದೇಶ): ಶ್ವಾನ ಪ್ರಿಯರು ಇನ್ನು ಮುಂದೆ ತಮ್ಮ ಮನೆಗಳಲ್ಲಿ ಮುದ್ದಿನ ಶ್ವಾನಗಳನ್ನು ಸಾಕಲು ಪರವಾನಗಿ ಪಡೆಯುವುದು ಕಡ್ಡಾಯ. ಹೀಗೊಂದು ಸೂಚನೆಯನ್ನು ಉತ್ತರ ಪ್ರದೇಶದ ರಾಜಧಾನಿಯಲ್ಲಿ ಹೊರಡಿಸಲಾಗಿದ್ದು, ಪಾಲಿಸದೇ ಇದ್ದಲ್ಲಿ ಅಥವಾ ಪರಿಶೀಲನೆ ವೇಳೆ ನಾಯಿಗಳ ಪರವಾನಗಿ ಇರದೇ ಇರುವುದು ಕಂಡು ಬಂದಲ್ಲಿ ಸ್ಥಳದಲ್ಲೇ ದಂಡ ಹಾಕುವುದಾಗಿ ಲಖನೌ ಮಹಾನಗರ ಪಾಲಿಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಪರವಾನಗಿ ಇಲ್ಲದ ನಿಮ್ಮ ಸಾಕು ನಾಯಿಗಳೊಂದಿಗೆ ಬೆಳಗಿನ ವಾಕಿಂಗ್ ಮಾಡುವ ಅಭ್ಯಾಸ ನಿಮ್ಮಲ್ಲಿದ್ದರೆ ಅದನ್ನು ಈಗಿನಿಂದಲೇ ಬದಲಾಯಿಸಿಕೊಳ್ಳಿ. ಇಲ್ಲವಾದಲ್ಲಿ ಪರವಾನಗಿ ಇಲ್ಲದ ಶ್ವಾನಗಳ ಮಾಲೀಕರಿಂದ 2,500 ರಿಂದ 5,000 ರೂ.ವರೆಗೆ (ತಳಿ ಆಧಾರಿತ) ದಂಡ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಕೆಲವರಿಗೆ ದಂಡ ಸಹ ಹಾಕಲಾಗಿದೆ.

ಲಖನೌದಲ್ಲಿ ಹೀಗೊಂದು ಅಭಿಯಾನವನ್ನು ಇಂದು ಬೆಳ್ಳಂಬೆಳಿಗ್ಗೆ ಆರಂಭಿಸಲಾಗಿದ್ದು, ಶ್ವಾನ ಪ್ರಿಯರನ್ನು ಚಿಂತೆಗೀಡು ಮಾಡಿದೆ. ಬೆಳಗಿನ ಜಾವ ಸಾಕು ನಾಯಿಗಳೊಂದಿಗೆ ವಾಯುವಿಹಾರಕ್ಕೆ ಬಂದ ಜನರನ್ನು ಆಯಾ ಪ್ರದೇಶದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪರವಾನಗಿ ಇಲ್ಲದ ಶ್ವಾನಗಳ ಮಾಲೀಕರಿಗೆ ಎಚ್ಚರಿಕೆಯ ಸಹ ನೀಡಲಾಗಿದೆ.

ಪರವಾನಗಿ ಪಡೆದವರು: ಲಖನೌದಲ್ಲಿ ಸುಮಾರು 10 ಸಾವಿರ ಸಾಕು ನಾಯಿಗಳಿವೆ. ಮೂರು ಸಾವಿರ ಮಂದಿ ಮಾತ್ರ ಪರವಾನಗಿ ಪಡೆದಿದ್ದಾರೆ. ಮಹಾನಗರ ಪಾಲಿಕೆಯು ಈ ಹಿಂದೆಯೂ ಪ್ರಚಾರಾಂದೋಲನ ನಡೆಸುವ ಮೂಲಕ ಪರವಾನಗಿ ಮಾಡುವ ಬಗ್ಗೆ ಜಾಗೃತಿ ಮೂಡಿಸಿತ್ತು. ಆದರೂ ಜನರು ಪರವಾನಗಿ ಪಡೆಯಲು ಆಸಕ್ತಿ ತೋರುತ್ತಿಲ್ಲ. ಈಗ ನಗರಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರತಿ ವಲಯದಲ್ಲೂ ಸಾಕು ನಾಯಿ ಮಾಲೀಕರಿಂದ ಪರವಾನಗಿ ಪಡೆಯಲಾಗುತ್ತಿದೆ. ಅದನ್ನು ಪೂರೈಸದವರಿಗೆ ತಕ್ಷಣ ದಂಡ ವಿಧಿಸಲಾಗುತ್ತಿದೆ ಎಂದು ನಗರ ಪಶು ಸಂಗೋಪನಾ ಅಧಿಕಾರಿ ಅಭಿನವ ವರ್ಮಾ ಎಚ್ಚರಿಕೆ ನೀಡಿದ್ದಾರೆ.

ಪರವಾನಗಿಗೆ ಶುಲ್ಕ: ಪರವಾನಗಿ ಹೊಂದದಿದ್ದರೆ ಎರಡೂವರೆ ಸಾವಿರದಿಂದ ಐದು ಸಾವಿರ ದಂಡ ವಸೂಲಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಅವರ ಹೊಸ ಪರವಾನಗಿ ಅಥವಾ ನವೀಕರಣವನ್ನು ಕೂಡ ತಕ್ಷಣವೇ ಮಾಡಲಾಗುತ್ತದೆ. ವಿದೇಶಿ ತಳಿಯ ನಾಯಿಗೆ 1000 ರೂ., ಸ್ಥಳೀಯ ನಾಯಿಗೆ 200 ರೂ. ಪರವಾನಗಿ ಶುಲ್ಕ ವಿಧಿಸಲಾಗಿದೆ. ನಗರದ ಅನೇಕ ಸ್ಥಳಗಳಲ್ಲಿ ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಪರವಾನಗಿಗಳನ್ನು ಪಡೆಯಬಹುದು ಎಂದು ನಗರ ಪ್ರಾಣಿ ಕಲ್ಯಾಣಾಧಿಕಾರಿ ತಿಳಿಸಿದರು.

ನೆನಪಿನಲ್ಲಿಟ್ಟುಕೊಳ್ಳಿ: ಪರವಾನಗಿಗಾಗಿ, ನಾಯಿಗೆ ಆ್ಯಂಟಿ ರೇಬಿಸ್ ಇಂಜೆಕ್ಷನ್ ನೀಡುವುದು ಅವಶ್ಯಕ. ಮಾಲೀಕರು ಈ ಪ್ರಮಾಣಪತ್ರವನ್ನು ಹೊಂದಿರಬೇಕು. ಈ ಪ್ರಮಾಣಪತ್ರವನ್ನು ಹೊರತುಪಡಿಸಿ, ಅವರು ತಮ್ಮದೇ ಆದ ಆಧಾರ್ ಕಾರ್ಡ್ ಅನ್ನು ಸಹ ಹೊಂದಿರಬೇಕು. ಚಿಕ್ಕ ನಾಯಿಯನ್ನು ದತ್ತು ಪಡೆದಿದ್ದರೆ, ಮೂರರಿಂದ ನಾಲ್ಕು ತಿಂಗಳ ನಂತರ ಅದರ ಪರವಾನಗಿಯನ್ನು ಪಡೆಯುವುದು ಅವಶ್ಯಕ. ಪರವಾನಗಿಯನ್ನು ಒಂದು ವರ್ಷಕ್ಕೆ ಮಾತ್ರ ನೀಡಲಾಗುತ್ತದೆ. ಮುಂದಿನ ವರ್ಷ ಅದನ್ನು ನವೀಕರಿಸುವುದು ಅವಶ್ಯಕ ಎಂದಿದ್ದಾರೆ.

ಪರವಾನಗಿ ಏಕೆ ಅಗತ್ಯ: ರಾಜಧಾನಿಯಲ್ಲಿ ಸಾಕು ನಾಯಿಗಳ ದಾಳಿಯ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ. ಕೆಲವೆಡೆ ಜನರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹಾಗಾಗಿ ನಾಯಿಗಳನ್ನು ಸಾಕಲು ನಿಯಮಗಳನ್ನು ಕಟ್ಟುನಿಟ್ಟಾಗಿ ಮಾಡಲಾಗಿದ್ದು, ಅಂತಹ ಘಟನೆಗಳು ಸಂಭವಿಸಿದಾಗ ತ್ವರಿತ ಕ್ರಮ ಕೈಗೊಳ್ಳಬಹುದು ಅನ್ನೋದು ಪಾಲಿಕೆಯ ಉದ್ದೇಶ.

ಇದನ್ನೂ ಓದಿ: ಶ್ವಾನ ಪ್ರದರ್ಶನದಲ್ಲಿ ಸುಧಾಮೂರ್ತಿಯ 'ಗೋಪಿ': ಪ್ರಾಣಿ ಪ್ರೀತಿ ಬಗ್ಗೆ ರಾಜ್ಯಸಭೆ ಸದಸ್ಯೆ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.