ETV Bharat / bharat

ಕೇರಳದಲ್ಲಿ ಮೊದಲ ಖಾತೆ ತೆರೆದ ಬಿಜೆಪಿ: ನಟ ಸುರೇಶ್​ ಗೋಪಿಗೆ ಭರ್ಜರಿ ಗೆಲುವು - Suresh Gopi Victory

author img

By ETV Bharat Karnataka Team

Published : Jun 4, 2024, 1:58 PM IST

ತ್ರಿಶೂರ್​ ಲೋಕಸಭಾ ಕ್ಷೇತ್ರದಲ್ಲಿ ನಟ, ಬಿಜೆಪಿ ಅಭ್ಯರ್ಥಿ ಸುರೇಶ್​ ಗೋಪಿ ಗೆಲುವು ಸಾಧಿಸಿದ್ದು, ಕೇರಳದಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ.

Actor Suresh Gopi
ನಟ ಸುರೇಶ್​ ಗೋಪಿ (ETV Bharat)

ತ್ರಿಶೂರ್​ (ಕೇರಳ): ತ್ರಿಶೂರ್​ ಲೋಕಸಭಾ ಕ್ಷೇತ್ರದಲ್ಲಿ ನಟ- ರಾಜಕಾರಣಿ ಬಿಜೆಪಿ ಅಭ್ಯರ್ಥಿ ಸುರೇಶ್​ ಗೋಪಿ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಶಕಗಳ ಕಾಯುವಿಕೆಯ ಬಳಿಕ ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಲೋಕಸಭಾ ಖಾತೆ ತೆರೆದಿದೆ. ತ್ರಿಶೂರ್​ನಲ್ಲಿ ಸಿಪಿಐನಿಂದ ಮಾಜಿ ಸಚಿವ ವಿ.ಎಸ್​. ಸುನೀಲ್​ ಕುಮಾರ್ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಕೆ. ಮುರಳೀಧರನ್​ ಕಣದಲ್ಲಿದ್ದರು. ಮೊದಲ ಸುತ್ತಿನಿಂದಲೇ ಸ್ಪಷ್ಟ ಮುನ್ನಡೆ ಸಾಧಿಸಿದ್ದ ಸುರೇಶ್​ ಗೋಪಿ, ಇಬ್ಬರು ನಾಯಕರನ್ನು ಹಿಂದಿಕ್ಕಿ ಜಯ ಗಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್​ನಿಂದ ಸ್ಪರ್ಧಿಸಿದ್ದ ಸುರೇಶ್​ ಗೋಪಿ ಕಾಂಗ್ರೆಸ್​ ಅಭ್ಯರ್ಥಿ ಟಿ.ಎನ್​. ಪ್ರತಾಪನ್​ ಎದುರು ಸೋಲನಭವಿಸಿದ್ದರು. ಮೋದಿ ಪರ ಅಲೆಯ ಗಾಳಿ ಕೇರಳದಲ್ಲೂ ಬೀಸಿದ್ದು, ತ್ರಿಶೂರ್​ನಲ್ಲಿ ಸುರೇಶ್​ ಗೋಪಿ ಗೆಲುವು ಸಾಧಿಸಿದರೆ, ತಿರುವನಂತಪುರದಲ್ಲಿ ಕಾಂಗ್ರೆಸ್​ನ ಶಶಿ ತರೂರ್ ಹಾಗೂ ಬಿಜೆಪಿಯ​ ರಾಜೀವ್​ ಚಂದ್ರಶೇಖರ್​ ಅವರ ನಡುವೆ ಹಾವುಏಣಿ ಆಟ ನಡೆಯುತ್ತಿದೆ.

ಇದನ್ನೂ ಓದಿ: ಬೀಗರ ಕ್ಷೇತ್ರದಲ್ಲಿ ಶೆಟ್ಟರ್ ಜಯಭೇರಿ: ಮೃಣಾಲ್​​ಗೆ ಮಣೆಹಾಕದ ಮತದಾರ ಪ್ರಭು! - Loksabha election results 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.