ETV Bharat / bharat

ಜನರಲ್​ ವಿಕೆ ಸಿಂಗ್​ ರಾಜಕೀಯ ನಿವೃತ್ತಿ: ಕೋರ್ಟ್​ನಿಂದ ರಾಜಕೀಯಕ್ಕೆ ಬಂದ ಜಡ್ಜ್​ - lokasabha election - LOKASABHA ELECTION

ಬಿಜೆಪಿ ಬಿಡುಗಡೆ ಮಾಡಿರುವ 5ನೇ ಪಟ್ಟಿಯಲ್ಲಿ ಘಟಾನುಘಟಿಗಳಿಗೆ ಸ್ಥಾನ ನೀಡಲಾಗಿದೆ. ಕೇರಳದ ವಯನಾಡಿನಲ್ಲಿ ರಾಹುಲ್​ ಗಾಂಧಿಗೆ ಪೈಪೋಟಿ ನೀಡಲು ರಾಜ್ಯಾಧ್ಯಕ್ಷ ಸುರೇಂದ್ರನ್​ ಅವರನ್ನೇ ಪಕ್ಷ ಕಣಕ್ಕಿಳಿಸಿದೆ.

ಕೇರಳದ ವಯನಾಡಿನಲ್ಲಿ ರಾಹುಲ್​​ ಗಾಂಧಿಗೆ ಟಫ್​ ಫೈಟ್​

author img

By ETV Bharat Karnataka Team

Published : Mar 25, 2024, 4:10 PM IST

Updated : Mar 25, 2024, 5:40 PM IST

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಹುರಿಯಾಗಳನ್ನು ಅಖೈರು ಮಾಡುತ್ತಿದ್ದು, ಘಟಾನುಘಟಿಗಳನ್ನು ಕಣಕ್ಕೆ ಇಳಿಸುತ್ತಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಸವಾಲನ್ನು ಸ್ವೀಕರಿಸಿರುವ ಅಭಿಜಿತ್ ಗಂಗೋಪಾಧ್ಯಾಯ ಅವರು ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇತ್ತ ಕೇಂದ್ರ ಸಚಿವರಾಗಿದ್ದ ಜನರಲ್ ವಿಕೆ ಸಿಂಗ್ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

ಕೋರ್ಟ್​ನಿಂದ ರಾಜಕೀಯಕ್ಕೆ: ಪ್ರಕರಣವೊಂದರಲ್ಲಿ ಪಕ್ಷಪಾತ ನಿರ್ಣಯ ನೀಡಲಾಗಿದೆ ಎಂದು ಆರೋಪಿಸಿ ಸಿಎಂ ಮಮತಾ ಬ್ಯಾನರ್ಜಿ ಅವರು ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಟೀಕಿಸಿದ್ದರು. ಬಳಿಕ ರಾಜಕೀಯ ಸವಾಲು ಎಸೆದಿದ್ದರು. ಇದನ್ನು ಸ್ವೀಕರಿಸಿದ ಅಭಿಜಿತ್ ಅವರು ಚುನಾವಣಾ ರಾಜಕಾರಣಕ್ಕೆ ಇಳಿಯುವುದಾಗಿ ಘೋಷಿಸಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ.

ಬಿಜೆಪಿ ಭಾನುವಾರ ಪ್ರಕಟಿಸಿದ 5ನೇ ಪಟ್ಟಿಯಲ್ಲಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಬಂಗಾಳದ ತಮ್ಲುಕ್‌ ಕ್ಷೇತ್ರದ ಟಿಕೆಟ್​ ನೀಡಿದೆ. ಇಲ್ಲಿ ತೃಣಮೂಲ ಕಾಂಗ್ರೆಸ್​ ಯುವ ನಾಯಕ ಮತ್ತು ತನ್ನ ಸಾಮಾಜಿಕ ಮಾಧ್ಯಮ ಸೆಲ್ ಮುಖ್ಯಸ್ಥ ದೇಬಂಗ್ಶು ಭಟ್ಟಾಚಾರ್ಯ ಅವರನ್ನು ಕಣಕ್ಕಿಳಿಸಿದೆ.

ಕಂಗನಾಗೆ ಮಂಡಿ ಟಿಕೆಟ್​: ಬಿಜೆಪಿ ಪರವಾಗಿ ಮಾತನಾಡುವ ಮೂಲಕ ಗುರುತಿಸಿಕೊಂಡಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರಿಗೆ ಹಿಮಾಚಲಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಟಿಕೆಟ್​ ನೀಡಲಾಗಿದೆ. ನಟಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರದಿದ್ದರೂ, ಅವರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಪುತ್ರನಿಗೆ ಶಾಕ್​, ತಾಯಿಗೆ ಟಿಕೆಟ್​: ಇನ್ನು ಪಕ್ಷ ಮತ್ತು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದ ಗಾಂಧಿ - ನೆಹರು ಕುಟುಂಬದ ಕುಡಿ ವರುಣ್​​ ಗಾಂಧಿಗೆ ಟಿಕೆಟ್​ ನಿರಾಕರಿಸಲಾಗಿದೆ. ಆದರೆ, ಅವರ ತಾಯಿ ಮನೇಕಾ ಗಾಂಧಿಗೆ ಸುಲ್ತಾನ್‌ಪುರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ವರುಣ್​ ಪ್ರತಿನಿಧಿಸುತ್ತಿದ್ದ ಫಿಲಿಭಿತ್​ ಟಿಕೆಟ್​ ಅನ್ನು ಜಿತಿನ್ ಪ್ರಸಾದ್​ ಅವರಿಗೆ ನೀಡಲಾಗಿದೆ. ರಾಮಾಯಣ ಧಾರಾವಾಹಿಯ ರಾಮನ ಪಾತ್ರಧಾರಿ, ನಟ ಅರುಣ್ ಗೋವಿಲ್ ಅವರಿಗೆ ಮೀರತ್‌ ಕ್ಷೇತ್ರದ ಟಿಕೆಟ್ ನೀಡಿದ್ದರೆ, ಕೇಂದ್ರ ಸಚಿವ ಅಶ್ವಿನಿ ಕುಮಾರ್​ ಚೌಬೆಗೆ ಟಿಕೆಟ್​ ನಿರಾಕರಿಸಲಾಗಿದೆ. ರಾಜಕೀಯ ನಿವೃತ್ತಿ ಘೋಷಿಸಿದ ಜನರಲ್ ವಿಕೆ ಸಿಂಗ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಕೇರಳದಲ್ಲಿ ರಾಹುಲ್​ಗೆ ಟಫ್​ ಫೈಟ್​: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ಕೇರಳದ ವಯನಾಡಿನಲ್ಲಿ ಕಟ್ಟಿಹಾಕಲು ತಂತ್ರ ರೂಪಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್​ ಅವರನ್ನು ವಯನಾಡು ಕ್ಷೇತ್ರದಲ್ಲಿ ರಾಹುಲ್​ ವಿರುದ್ಧ ಕಣಕ್ಕಿಳಿಸಿದೆ. ಈ ಮೂಲಕ ರಾಜ್ಯದ ಎರಡು ಸ್ಥಾನಗಳು ಈ ಬಾರಿಯ ಹೈಪ್ರೊಫೈಲ್​ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ. ಈಗಾಗಲೇ ತಿರುವನಂತಪುರಂನಲ್ಲಿ ಹಾಲಿ ಕಾಂಗ್ರೆಸ್​ ಸಂಸದ ಶಶಿ ತರೂರ್​ ಅವರನ್ನು ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ಎದುರಿಸಲಿದ್ದಾರೆ. ಇದೀಗ ವಯನಾಡಿನಲ್ಲಿ ರಾಹುಲ್​ ವರ್ಸಸ್ ಸುರೇಂದ್ರನ್​ ಸ್ಪರ್ಧೆ ರಾಜಕೀಯ ಬಿಸಿ ಹೆಚ್ಚಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡ ಬಳಿಕ ಉಪಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿ ಸಂಸದರಾಗಿದ್ದರು. ಈ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದು, 2009 ರಿಂದಲೂ ಇಲ್ಲಿ ಪಕ್ಷ ಗೆಲುವು ಸಾಧಿಸುತ್ತಾ ಬಂದಿದೆ.

ಕಳೆದ ಚುನಾವಣೆಯಲ್ಲಿ ಅಮೇಠಿಯಲ್ಲಿ ಸೋತ ಬಳಿಕ ರಾಹುಲ್​ ಗಾಂಧಿ ಅವರು ಕ್ಷೇತ್ರದಿಂದ ವಿಮುಖರಾಗಿದ್ದು, ಈ ಬಾರಿ ಅಲ್ಲಿಂದ ಸ್ಪರ್ಧೆ ಮಾಡುವ ಇಂಗಿತ ಹೊಂದಿಲ್ಲ ಎಂದು ಹೇಳಲಾಗಿದೆ. ಕೇರಳದ ವಯನಾಡಿನಿಂದ ಈಗಾಗಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕ್ಷೇತ್ರದಲ್ಲೂ ಕಾಂಗ್ರೆಸ್​ ನಾಯಕ ಕಟ್ಟಿಹಾಕಲು ಬಿಜೆಪಿ ವ್ಯೂಹ ರಚನೆ ಮಾಡಿದ್ದು, ಪ್ರಬಲ ಪೈಪೋಟಿ ನೀಡಲು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೆ.ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಸಂದೇಶ್‌ಖಾಲಿ ಹಿಂಸಾಚಾರ ಸಂತ್ರಸ್ತೆಗೆ ಟಿಕೆಟ್ ನೀಡಿದ ಬಿಜೆಪಿ - Basirhat Lok Sabha Constituency

Last Updated : Mar 25, 2024, 5:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.