ETV Bharat / bharat

ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್​​ - ಕಣದಲ್ಲಿರುವ ಪ್ರಮುಖರಿವರು! - Lok Sabha election results 2024 - LOK SABHA ELECTION RESULTS 2024

ಇನ್ನೇನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ದೇಶದ ಕೆಲ ಪ್ರಮುಖರ ಮಾಹಿತಿ ಇಲ್ಲಿದೆ.

ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್​​ -  ಕಣದಲ್ಲಿರುವ ಪ್ರಮುಖರಿವರು
ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್​​ - ಕಣದಲ್ಲಿರುವ ಪ್ರಮುಖರಿವರು (ETV Bharat)
author img

By ETV Bharat Karnataka Team

Published : Jun 4, 2024, 7:13 AM IST

Updated : Jun 4, 2024, 7:19 AM IST

ನವದೆಹಲಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಭರಾಟೆ ಆರಂಭವಾಗುತ್ತದೆ. ಎಲ್ಲರ ಕಣ್ಣುಗಳು ಇದೀಗ ಪ್ರಮುಖ ಅಭ್ಯರ್ಥಿಗಳ ಮೇಲಿದೆ.

ವಾರಾಣಸಿಯಲ್ಲಿ ನರೇಂದ್ರ ಮೋದಿ VS ಅಜಯ್ ರೈ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ವಾರಾಣಸಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. 2014 ರಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ ವಿಜಯ ದುಂದುಬಿ ಆರಂಭಿಸಿದ್ದರು. 2019 ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ 2014 ಮತ್ತು 2019 ರಲ್ಲಿ ಕ್ಷೇತ್ರದಿಂದ ತನ್ನ ಅಭ್ಯರ್ಥಿ ಅಜಯ್ ರೈ ಅವರನ್ನು ಕಣಕ್ಕಿಳಿಸಿತ್ತು. ಎರಡೂ ಸಲವೂ ಅವರು ಮೋದಿ ವಿರುದ್ಧ ಪರಾಜಯ ಹೊಂದಿದ್ದಾರೆ. ಮತ್ತೆ ಈ ಬಾರಿ ಮೋದಿ ವಿರುದ್ಧವೇ ಕಣಕ್ಕಿಳಿದಿದ್ದಾರೆ.

ಇನ್ನು ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ VS ದಿನೇಶ್ ಪ್ರತಾಪ್ ಸಿಂಗ್ : ಅವರ ನಡುವೆ ಹಣಾಹಣಿ ಇದೆ. ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ರಾಯ್ ಬರೇಲಿಯಿಂದ ರಾಹುಲ್​ ಗಾಂಧಿ ಸ್ಪರ್ಧಿಸಿದ್ದಾರೆ. ಅಮೇಥಿಯಿಂದ ಮೂರು ಬಾರಿ ಸಂಸದರಾಗಿದ್ದರು. ಆದರೆ 2019 ರಲ್ಲಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಹೀಗಾಗಿ ಈ ಸಲ ಅವರು ರಾಯ್​ಬರೇಲಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ವಯನಾಡ್‌ನಲ್ಲಿ ರಾಹುಲ್ ಗಾಂಧಿ VS ಅನ್ನಿ ರಾಜಾ ಪೈಪೋಟಿ: ಕೇರಳದ ವಯನಾಡಿನಿಂದ ಎರಡನೇ ಬಾರಿಗೆ ಸ್ಪರ್ಧಿಸಿರುವ ರಾಹುಲ್​ ಗಾಂಧಿ, ಸಿಪಿಐ ನಾಯಕಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅನ್ನಿ ರಾಜಾ ಅವರ ವಿರುದ್ಧ ಸೆಣಸುತ್ತಿದ್ದಾರೆ.

ವಿಶೇಷವಾಗಿ ಕಾಂಗ್ರೆಸ್ ಮತ್ತು ಸಿಪಿಐ ಎರಡೂ ಭಾರತ ಮೈತ್ರಿಕೂಟದ ಸದಸ್ಯರಾಗಿರುವ ಕಾರಣ ಸ್ಪರ್ಧೆಯು ಸಾರ್ವಜನಿಕ ಹಿತಾಸಕ್ತಿಯನ್ನು ಕೆರಳಿಸಿದೆ. 2019 ರಲ್ಲಿ ರಾಹುಲ್​ ಗಾಂಧಿಯವರು ಸಿಪಿಐನ ಪಿ ಪಿ ಸುನೀರ್ ಅವರನ್ನು 4.31 ಲಕ್ಷ ಮತಗಳಿಂದ ಸೋಲಿಸಿದ್ದರು.

ಅಮೇಥಿ ಸ್ಮೃತಿ ಇರಾನಿ VS ಕಿಶೋರಿ ಲಾಲ್ ಶರ್ಮಾ: ಅಮೇಥಿ ಒಂದು ಕಾಲದಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿತ್ತು. ಬಿಜೆಪಿಯ ಸ್ಮೃತಿ ಇರಾನಿ ಅವರು 2019 ರಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದರು. ಕಾಂಗ್ರೆಸ್ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. 25 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸದಸ್ಯರು ಅಮೇಥಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿಲ್ಲ.

ತಿರುವನಂತಪುರ - ಶಶಿ ತರೂರ್ VS ರಾಜೀವ್ ಚಂದ್ರಶೇಖರ್: ತಿರುವನಂತಪುರಂನಲ್ಲಿ ಈ ಬಾರಿ ಹಾಲಿ ಸಂಸದ ಮತ್ತು ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ನಡುವೆ ಹಣಾಹಣಿ ನಡೆಯುತ್ತಿದೆ. ತರೂರ್​ ತಿರುವನಂತಪುರಂನಿಂದ ಸತತ ನಾಲ್ಕನೇ ಅವಧಿಗೆ ಮರು ಆಯ್ಕೆ ಬಯಸಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ವಿರುದ್ಧ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ.

ಬಹರಾಂಪುರದಲ್ಲಿ ಅಧೀರ್ ರಂಜನ್ ಚೌಧರಿ VS ಯೂಸುಫ್ ಪಠಾಣ್: ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಸೆಣಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.

ನವದೆಹಲಿ- ಬಾನ್ಸುರಿ ಸ್ವರಾಜ್ VS ಸೋಮನಾಥ್ ಭಾರತಿ: ಬಿಜೆಪಿ ಎರಡು ಬಾರಿ ಸಂಸದೆ ಮತ್ತು ಕೇಂದ್ರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್​ ನೀಡಿಲ್ಲ. ಅವರ ಬದಲಿಗೆ ದಿವಂಗತ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸ್ಪರ್ಧಿಸಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಮಾಳವೀಯ ನಗರ ಕ್ಷೇತ್ರದ ಶಾಸಕ ಸೋಮನಾಥ್ ಭಾರ್ತಿ ಅವರನ್ನು ಕಣಕ್ಕಿಳಿಸಿದೆ.

ರಾಜನಂದಗಾಂವ್‌- ಭೂಪೇಶ್ ಬಾಘೇಲ್ VS ಸಂತೋಷ್ ಪಾಂಡೆ: ಕಾಂಗ್ರೆಸ್ ತನ್ನ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಛತ್ತೀಸ್‌ಗಢದ ರಾಜನಂದಗಾಂವ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದು ಮೂರು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿ ಭದ್ರಕೋಟೆಯಾಗಿದೆ. ಇವರ ವಿರುದ್ಧ ಬಿಜೆಪಿಯ ಸಂತೋಷ್​ ಪಾಂಡೆ ಕಣದಲ್ಲಿದ್ದಾರೆ.

ಇದನ್ನು ಓದಿ:ಇಂದು ಲೋಕಸಭಾ ಚುನಾವಣೆಯ 'ಮಹಾ ತೀರ್ಪು': ಇಡೀ ವಿಶ್ವದ ಚಿತ್ತ ಭಾರತದತ್ತ! - Lok Sabha Election Results 2024

Last Updated : Jun 4, 2024, 7:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.