ETV Bharat / bharat

ಲೋಕಸಭೆ ಚುನಾವಣೆ - 2024: 10.5 ಲಕ್ಷ ಮತಗಟ್ಟೆಗಳಿಗೆ ಹೇಗಿದೆ ಗೊತ್ತಾ ಭದ್ರತಾ ವ್ಯವಸ್ಥೆ?

2024ರ ಲೋಕಸಭೆ ಚುನಾವಣೆಯ ಮತದಾನ ಏಳು ಹಂತಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ದೇಶಾದ್ಯಂತ 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸೂಚಿಸಲಾಗಿದೆ. ಜೊತೆಗೆ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಲೋಕಸಭೆ ಚುನಾವಣೆ
ಲೋಕಸಭೆ ಚುನಾವಣೆ
author img

By ETV Bharat Karnataka Team

Published : Mar 16, 2024, 7:59 PM IST

ಹೈದರಾಬಾದ್ : ಈ ಬಾರಿಯ 2024ರ ಲೋಕಸಭೆ ಚುನಾವಣೆ ದೇಶಾದ್ಯಂತ ರಂಗೇರಿದೆ. ಶನಿವಾರ ಚುನಾವಣೆ ಮತದಾನದ ದಿನಾಂಕವನ್ನು ಪ್ರಕಟಿಸಲಾಗಿದೆ. ಏಳು ಹಂತಗಳಲ್ಲಿ ನಡೆಯಲಿರುವ ಮತದಾನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಭದ್ರತಾ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.

ಸುಮಾರು ದೇಶದೆಲ್ಲೆಡೆ 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸುವುದರ ಜೊತೆಗೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಮತದಾನದ ವೇಳೆ ಸಂಪೂರ್ಣ ಕಣ್ಗಾವಲು ಇಡಲಾಗುತ್ತಿದೆ. ಮತಗಟ್ಟೆಗಳ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರೊಂದಿಗೆ ಅರೆಸೇನಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜೊತೆಗೆ 1.5 ಕೋಟಿ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ಬಳಕೆ ಆಗಲಿದ್ದಾರೆ ಹಾಗೂ 55 ಲಕ್ಷ ಇವಿಎಂಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 19 ರಿಂದ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ 1 ರಂದು ಮುಕ್ತಾಯವಾಗಲಿದೆ. ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. 2019 ರಲ್ಲಿ ಸುಮಾರು 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇದಕ್ಕೂ ಹಿಂದೆ 2014 ರಲ್ಲಿ 9 ಲಕ್ಷ ಮತಗಟ್ಟೆಗಳನ್ನು ಮಾಡಲಾಗಿತ್ತು. 2019 ರಲ್ಲಿ, ಒಟ್ಟು ಮತದಾರರು ಸುಮಾರು 90 ಕೋಟಿಯಷ್ಟಿದ್ದರೆ, ಅದರಲ್ಲಿ 1.5 ಮತದಾರರು ಸುಮಾರು 18-19 ವರ್ಷ ವಯಸ್ಸಿನವರು. 2014ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 81.4 ಕೋಟಿ ಇತ್ತು.

ಇಷ್ಟೇ ಅಲ್ಲ, 2019ರ ಚುನಾವಣೆಗೆ ವಿವಿಧ ರಾಜ್ಯಗಳ 20 ಲಕ್ಷಕ್ಕೂ ಹೆಚ್ಚು ಪೊಲೀಸರು ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅರೆಸೇನಾ ಪಡೆಯ 3 ಲಕ್ಷ ಯೋಧರನ್ನು ನಿಯೋಜಿಸಲಾಗಿತ್ತು. ಈ ಮೂಲಕ ಭಾರತದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಮೊಟ್ಟ ಮೊದಲ ಬಾರಿಗೆ ಲೋಕಸಭೆ ಚುನಾವಣೆಗಾಗಿ ನೇಮಕ ಮಾಡಲಾಗಿತ್ತು.

36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3000 ಕಂಪನಿಗಳ ಮೂರು ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಈ ಭದ್ರತಾ ಸಿಬ್ಬಂದಿಯನ್ನು ವಿವಿಧ ಹಂತಗಳಲ್ಲಿ ಕಳುಹಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೇ, ನ್ಯಾಯಸಮ್ಮತ ಚುನಾವಣೆ ನಡೆಸುವುದು ಮತ್ತು ಚುನಾವಣೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು ಇದರ ಉದ್ದೇಶವಾಗಿತ್ತು.

2019 ರ ಲೋಕಸಭಾ ಚುನಾವಣೆಯ ಮತದಾನವೂ 7 ಹಂತಗಳಲ್ಲಿ ನಡೆದಿದ್ದು, ಮೇ 23 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗಿತ್ತು. ಮೊದಲ ಹಂತದ ಮತದಾನ ಏಪ್ರಿಲ್ 11 ರಂದು ನಡೆದಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 18 ರಂದು, ಮೂರನೇ ಹಂತದ ಮತದಾನ ಏಪ್ರಿಲ್ 23 ರಂದು ಮತ್ತು ನಾಲ್ಕನೇ ಹಂತದ ಮತದಾನ ಮೇ 19 ರಂದು ನಡೆದಿತ್ತು. ಅದೇ ವರ್ಷ ಲೋಕಸಭೆ ಚುನಾವಣೆಯ ಜೊತೆಗೆ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿದ್ದವು.

ಇದನ್ನೂ ಓದಿ : 7 ಹಂತಗಳಲ್ಲಿ ಲೋಕಸಭಾ ಚುನಾವಣೆ: ಜೂನ್​​ 4ಕ್ಕೆ ಫಲಿತಾಂಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.