ETV Bharat / bharat

'ಮದ್ಯ ನಿಷೇಧ ಕಾನೂನು ಸೂಪರ್ ಫ್ಲಾಪ್': ಸಿಎಂ ನಿತೀಶ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ

ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಟೀಕಿಸಿದ್ದಾರೆ.

author img

By ANI

Published : 2 hours ago

ತೇಜಸ್ವಿ ಯಾದವ್
ತೇಜಸ್ವಿ ಯಾದವ್ (ANI)

ನವದೆಹಲಿ: ಬಿಹಾರದ ಮದ್ಯ ನಿಷೇಧ ಕಾನೂನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಾಂಸ್ಥಿಕ ಭ್ರಷ್ಟಾಚಾರಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ಕಲಬೆರಕೆ ಸಾರಾಯಿ ಸೇವನೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ 33 ಜನ ಸಾವಿಗೀಡಾದ ನಂತರ ತೇಜಸ್ವಿ ಯಾದವ್ ಸಿಎಂ ನಿತೀಶ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಯಾದವ್, "ಮದ್ಯ ನಿಷೇಧವು ನಿತೀಶ್ ಕುಮಾರ್ ಅವರ ಸಾಂಸ್ಥಿಕ ಭ್ರಷ್ಟಾಚಾರಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ. ಮದ್ಯ ನಿಷೇಧ ಕಾನೂನು ಮಾಡಿದರೆ ಅದನ್ನು ಸಂಪೂರ್ಣವಾಗಿ ಜಾರಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಮುಖ್ಯಮಂತ್ರಿಗಳ ಸೈದ್ಧಾಂತಿಕ ಮತ್ತು ನೀತಿಯಲ್ಲಿನ ಅಸ್ಪಷ್ಟತೆ, ದುರ್ಬಲ ಇಚ್ಛಾಶಕ್ತಿ ಮತ್ತು ಸಾರ್ವಜನಿಕ ಪ್ರತಿನಿಧಿಗಳ ಬದಲು ಆಯ್ದ ಅಧಿಕಾರಿಗಳ ಮೇಲಿನ ಅವಲಂಬನೆಯಿಂದಾಗಿ ಮದ್ಯ ನಿಷೇಧವು ಇಂದು ಬಿಹಾರದಲ್ಲಿ ಸೂಪರ್ ಫ್ಲಾಪ್ ಆಗಿದೆ. ಆಡಳಿತಾರೂಢ ರಾಜಕಾರಣಿಗಳು-ಪೊಲೀಸರು ಮತ್ತು ಮದ್ಯ ಮಾಫಿಯಾದ ಅಪವಿತ್ರ ಸಂಬಂಧದಿಂದಾಗಿ, ಬಿಹಾರದಲ್ಲಿ 30 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಮದ್ಯದ ಕಪ್ಪು ಮಾರುಕಟ್ಟೆ ಪ್ರವರ್ಧಮಾನಕ್ಕೆ ಬಂದಿದೆ." ಎಂದು ಹೇಳಿದ್ದಾರೆ.

ಇಷ್ಟೊಂದು ಪ್ರಮಾಣದ ಮದ್ಯ ವಶ: "ನಿಷೇಧದ ಹೊರತಾಗಿಯೂ ಬಿಹಾರದಲ್ಲಿ 3 ಕೋಟಿ 46 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ದಾಖಲೆಗಳಲ್ಲಿ ತೋರಿಸಲಾಗಿದೆ. (ಪ್ರಾಮಾಣಿಕ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಇದರಲ್ಲಿಯೂ ವಂಚನೆ ಇದೆ. ಏಕೆಂದರೆ ಅಕ್ರಮ ಮದ್ಯ ಕಳ್ಳಸಾಗಣೆಗಾಗಿ, ಪೊಲೀಸ್ ಅಧಿಕಾರಿಗಳು ಮದ್ಯವನ್ನು ವಶಪಡಿಸಿಕೊಂಡಂತೆ ನಟಿಸುತ್ತಾರೆ. ಉದಾಹರಣೆಗೆ, 20 ಟ್ರಕ್ ಅಕ್ರಮ ಮದ್ಯ ಬಿಹಾರದೊಳಗೆ ಬರುತ್ತಿರುವಾಗ ಯಾವುದೋ ಒಂದು ಹಳೆಯ ಟ್ರಕ್​ ಅನ್ನು ವಶಪಡಿಸಿಕೊಂಡಂತೆ ತೋರಿಸುತ್ತಾರೆ.)" ಎಂದು ಅವರು ಬರೆದಿದ್ದಾರೆ.

ಪ್ರತಿ ವರ್ಷ ಇಷ್ಟು ದೊಡ್ಡ ಪ್ರಮಾಣದ ಮದ್ಯವನ್ನು ವಶಪಡಿಸಿಕೊಳ್ಳಲಾಗುತ್ತಿದ್ದರೆ, ಅದಕ್ಕೆ ಯಾರು ಜವಾಬ್ದಾರರು ಎಂದು ತೇಜಸ್ವಿ ಯಾದವ್ ಮುಖ್ಯಮಂತ್ರಿಗೆ ಪ್ರಶ್ನಿಸಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ಸಮಾಜದ ಬಡ ಮತ್ತು ಕೆಳ ವರ್ಗಗಳಿಗೆ ಸೇರಿದವರೇ ಯಾಕಾಗಿರುತ್ತಾರೆ ಎಂಬುದನ್ನು ಕೂಡ ಸಿಎಂ ವಿವರಿಸಬೇಕು ಎಂದು ಯಾದವ್ ಹೇಳಿದರು.

ಏತನ್ಮಧ್ಯೆ, ರಾಜ್ಯದಲ್ಲಿ ಕಳ್ಳಬಟ್ಟಿ ಸೇವಿಸಿ ಸಾವಿಗೀಡಾದವರ ಸಂಖ್ಯೆ ಸಂಖ್ಯೆ ಈಗ 45 ಕ್ಕೆ ಏರಿದೆ. ಸರನ್​ ಜಿಲ್ಲೆಯ 11 ಮಂದಿ ಸಿವನ್​ ಜಿಲ್ಲೆಯ 32 ಮಂದಿ ಮೃತಪಟ್ಟಿದ್ದಾರೆ. ಗೋಪಾಲ್​ಗಂಜ್​ನಲ್ಲಿ 2 ಸಾವುಗಳು ಸಂಭವಿಸಿವೆ. ಒಟ್ಟು 79 ಜನರನ್ನು ಬಸಂತ್ ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿವಾನ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥರಾದ 13 ಜನರನ್ನು ಚಿಕಿತ್ಸೆಗಾಗಿ ಪಾಟ್ನಾದ ಪಿಎಂಸಿಎಚ್ ಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Watch.. ನಾಗರಹಾವು - ಮುಂಗುಸಿ ನಡುವೆ ರಣಭೀಕರ ಕಾಳಗ: ಕೊನೆಯಲ್ಲೊಂದು ಬಿಗ್​ ಟ್ವಿಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.