ಚಮೋಲಿ (ಉತ್ತರಾಖಂಡ): ಮಲಾರಿ ರಾಷ್ಟ್ರೀಯ ಹೆದ್ದಾರಿಯ ಮೇಲಿರುವ ಪರ್ವತ ಕುಸಿದು ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಮಲಾರಿ ರಾಷ್ಟ್ರೀಯ ಹೆದ್ದಾರಿಯು ಭಾರತ - ಚೀನಾ ಗಡಿಯನ್ನು ಸಂಪರ್ಕಿಸುತ್ತದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 20 ಕಿಲೋಮೀಟರ್ ಮುಂದೆ ಪರ್ವತದ ಸಣ್ಣ ಪ್ರಮಾಣದ ಭಾಗವು ರಸ್ತೆ ಮೇಲೆ ಬಿದ್ದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಅದೃಷ್ಟವಶಾತ್ ಆ ಸಂದರ್ಭ ಯಾವುದೇ ವಾಹನ ಸಂಚರಿಸದಿರುವುದರಿಂದ ಪ್ರಾಣಹಾನಿ ಉಂಟಾಗಿಲ್ಲ. ಘಟನೆಯ ದೃಶ್ಯವನ್ನು ಮೊಬೈಲ್ನಲ್ಲಿ ಸಾರ್ವಜನಿಕರು ಸೆರೆ ಹಿಡಿದಿದ್ದಾರೆ. ಮಳೆಯ ಬಳಿಕ ಪರ್ವತಗಳ ಮೇಲೆ ಬೀಳುವ ಪ್ರಕಾಶಮಾನವಾದ ಬಿಸಿಲು ಪರ್ವತ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಬಿಸಿಲಿನಿಂದ ಬಂಡೆಗಳು ಒಡೆಯಲು ಪ್ರಾರಂಭಿಸುತ್ತವೆ. ಇಲ್ಲಿ ಕೂಡ ಇದೇ ಘಟನೆ ಸಂಭವಿಸಿದೆ. ಹೀಗಾಗಿ ಪರ್ವತ ರಸ್ತೆಗಳಲ್ಲಿ ಪ್ರಯಾಣಿಸುವು ಮುನ್ನ ಜಾಗೃತವಹಿಸುವುದು ಉತ್ತಮ ಎಂದು ಹವಾಮಾನ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಚಮೋಲಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಖರ ಬಿಸಿಲು ಬೀಳುತ್ತಿದೆ. ಬಿಸಿಲಿನ ಝಳಕ್ಕೆ ಪರ್ವತ ಕುಸಿತ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದಾಗಿ ರಸ್ತೆಗಳು ಸಹ ಹಾನಿಯಾಗುತ್ತಿದೆ. ಸದ್ಯ ಮಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವಶೇಷಗಳನ್ನು ತೆಗೆಯುವ ಕಾರ್ಯವನ್ನು ಬಿಆರ್‌ಒ ಮೂಲಕ ಪ್ರಾರಂಭಿಸಲಾಗುತ್ತಿದೆ.
ಇದನ್ನೂ ಓದಿ: ಮುಂದುವರೆದ ರೈಲು ಹಳಿ ತಪ್ಪಿಸುವ ಸಂಚು; ಪಂಜಾಬ್ನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ಬಯಲು - ATTEMPT TO DERAIL A TRAIN