ETV Bharat / bharat

ತಿರುಮಲ ಲಡ್ಡು ವಿಚಾರ: ದಿಂಡಿಗಲ್‌ನಲ್ಲಿ ಎಆರ್ ಡೈರಿ ಫುಡ್‌ಗಳ ವಿಚಾರಣೆಗೆ ಆಗಮಿಸಿದ ತಿರುಪತಿ ಪೊಲೀಸರು - TIRUPATI LADDU ISSUE

ತಿರುಪತಿ ದೇವಸ್ಥಾನಕ್ಕೆ ತುಪ್ಪ ರವಾನಿಸಿದ ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಗೆ ತಿರುಪತಿಯ ಪೊಲೀಸರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದೆ.

Laddu issue: Tirupati police arrive for investigation at AR dairy foods in Dindigul!
ತಿಮ್ಮಪ್ಪನ ಲಡ್ಡು ವಿಚಾರ: ದಿಂಡಿಗಲ್‌ನಲ್ಲಿ ಎಆರ್ ಡೈರಿ ಫುಡ್‌ಗಳ ವಿಚಾರಣೆಗೆ ಆಗಮಿಸಿದ ತಿರುಪತಿ ಪೊಲೀಸರು (ETV Bharat)
author img

By ETV Bharat Karnataka Team

Published : Nov 23, 2024, 10:14 PM IST

ದಿಂಡಿಗಲ್ (ತಮಿಳುನಾಡು): ತಿರುಪತಿ ಲಡ್ಡು ತಯಾರಿಕೆಗೆ ಕಳುಹಿಸಲಾಗಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವಿರುವುದನ್ನು ಮುಂಬೈ ಸಂಶೋಧನಾ ಸಂಸ್ಥೆ ಬಹಿರಂಗಪಡಿಸಿದೆ. ಈ ವಿಚಾರ ಈಗಾಗಲೇ ದೇಶಾದ್ಯಂತ ಸದ್ದು ಮಾಡುತ್ತಿದೆ. ತಿರುಪತಿ ದೇವಸ್ಥಾನಕ್ಕೆ ತುಪ್ಪ ರವಾನಿಸಿದ ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ತಿರುಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿರುಪತಿ ಲಡ್ಡು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೂಡಾ ಆದೇಶಿಸಿದೆ. ಇದರ ಬೆನ್ನಲ್ಲೇ ತುಪ್ಪ ಪೂರೈಸಿದ ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಪರವಾಗಿ ಮದ್ರಾಸ್ ಹೈಕೋರ್ಟ್​​​​ನ ಮಧುರೈ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಪ್ರಕರಣ ಕೋರ್ಟ್​ ಅಂಗಳದಲ್ಲಿ ಇರುವಾಗಲೇ ತಿರುಪತಿಯಿಂದ 11 ಪೊಲೀಸ್ ಅಧಿಕಾರಿಗಳು ಇಂದು ದಿಂಡಿಗಲ್ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ಗೆ ತನಿಖೆಗಾಗಿ ಆಗಮಿಸಿದ್ದಾರೆ. ಅವರು ಪ್ರಸ್ತುತ AR ಕಂಪನಿಯೊಳಗಿನ ಉದ್ಯೋಗಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ. ವಿಚಾರಣೆಯ ಬಗ್ಗೆ ಇನ್ನಷ್ಟೇ ಸಂಪೂರ್ಣ ಮಾಹಿತಿ ತಿಳಿದು ಬರಬೇಕಿದೆ.

ಇದನ್ನು ಓದಿ: ಒಂದೇ ಟೂರ್​ನಲ್ಲಿ ಅಜಂತಾ, ಎಲ್ಲೋರಾ, ಮಿನಿ ತಾಜ್ ಮಹಲ್: IRCTC ಸೂಪರ್ ಪ್ಯಾಕೇಜ್, ದರವೂ ಅಗ್ಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.