ETV Bharat / bharat

ಕೇರಳದಲ್ಲಿ ₹75 ಕೋಟಿ ಮೌಲ್ಯದ 104 ಕೆ.ಜಿ ಅಕ್ರಮ ಚಿನ್ನ ಜಪ್ತಿ

ಕೇರಳದ ತ್ರಿಶೂರ್​ನಲ್ಲಿ ಜಿಎಸ್​ಟಿ ಅಧಿಕಾರಿಗಳು ರಹಸ್ಯ ಕಾರ್ಯಾಚರಣೆ ನಡೆಸಿ 75 ಕೋಟಿ ರೂಪಾಯಿ ಮೌಲ್ಯದ 104 ಕೆ.ಜಿ ಅಕ್ರಮ ಚಿನ್ನ ಜಪ್ತಿ ಮಾಡಿದ್ದಾರೆ.

ಅಕ್ರಮ ಚಿನ್ನ ಜಪ್ತಿ
ಸಾಂದರ್ಭಿಕ ಚಿತ್ರ (ETV Bharat)
author img

By PTI

Published : 3 hours ago

ತ್ರಿಶೂರ್(ಕೇರಳ): ಚಿನ್ನದ ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ತ್ರಿಶೂರ್‌ನಲ್ಲಿ ಚಿನ್ನಾಭರಣ ತಯಾರಿಕಾ ಘಟಕಗಳಿಗೆ ಕೇರಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯ ಅಧಿಕಾರಿಗಳು ಬಿಗ್​ ಶಾಕ್​ ನೀಡಿದ್ದಾರೆ. ತೆರಿಗೆ ವಂಚನೆ ಆರೋಪದಡಿ ನಡೆದ ದಾಳಿಯಲ್ಲಿ ಲೆಕ್ಕವಿಲ್ಲದ 104 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

'ಟೊರ್ರೆ ಡೆಲ್ ಓರೊ' ಎಂಬ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಇಷ್ಟು ಪ್ರಮಾಣದಲ್ಲಿ ಅಕ್ರಮ ಚಿನ್ನ ಸಿಕ್ಕಿದ್ದು ಇದೇ ಮೊದಲು. ಸಿಕ್ಕ ಬಂಗಾರದ ಒಟ್ಟು ಮೊತ್ತ 75 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಕ್ರಮ ವಹಿವಾಟಿನ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

700 ಅಧಿಕಾರಿಗಳ ತಂಡದಿಂದ ದಾಳಿ: ಆಭರಣ ತಯಾರಕರು ಕಳೆದ ಆರು ತಿಂಗಳಿನಿಂದ ಜಿಎಸ್‌ಟಿ ವಂಚಿಸುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇದರ ವಿರುದ್ಧ ಕಾರ್ಯಾಚರಣೆ ನಡೆಸಲು ರಾಜ್ಯ ಜಿಎಸ್‌ಟಿ ಇಲಾಖೆಯ ಗುಪ್ತಚರ ವಿಭಾಗವು 700 ಅಧಿಕಾರಿಗಳ ತಂಡವನ್ನು ರಚಿಸಿತ್ತು. ಅದರಂತೆ ಬುಧವಾರ ಸಂಜೆ (ಅಕ್ಟೋಬರ್​ 23) ನಿಗದಿತ 78 ಸ್ಥಳಗಳ ಮೇಲೆ ದಾಳಿ ಮಾಡಿದೆ.

ತ್ರಿಶ್ಯೂರ್​​ ಜಿಲ್ಲೆಯಾದ್ಯಂತ ಇರುವ ಚಿನ್ನ ಉತ್ಪಾದನಾ ಘಟಕಗಳು ಮತ್ತು ಆಭರಣ ವ್ಯಾಪಾರಿಗಳ ಮನೆಗಳು ಸೇರಿದಂತೆ ಸುಮಾರು 78 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಗುರುವಾರ ಎರಡನೇ ದಿನವೂ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅಕ್ರಮ ಮತ್ತು ಲೆಕ್ಕವಿಲ್ಲದ 104 ಕೆ.ಜಿ ಚಿನ್ನ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಅಧಿಕಾರಿಗಳು ಜಪ್ತಿ ಮಾಡಿದ ಚಿನ್ನದ ಜೊತೆಗೆ ಬಿಲ್ಲಿಂಗ್ ಮತ್ತು ತೆರಿಗೆ ಪಾವತಿ ಪ್ರಕ್ರಿಯೆಯಲ್ಲೂ ದೊಡ್ಡ ಅಕ್ರಮ ನಡೆದಿರುವುದನ್ನು ಪತ್ತೆ ಮಾಡಲಾಗಿದೆ. ಇದಕ್ಕೂ ಮೊದಲು ಸಿಕ್ಕ ಮಾಹಿತಿಯಂತೆ ದಾಳಿಯಲ್ಲಿ 120 ಕೆ.ಜಿಯಷ್ಟು ಚಿನ್ನ ವಶವಾಗಿದೆ ಎಂದು ಮೂಲಗಳು ತಿಳಿಸಿದ್ದವು.

ಅಧ್ಯಯನ ಪ್ರವಾಸ ಹೆಸರಲ್ಲಿ ರೇಡ್​: ಅಕ್ರಮ ಚಿನ್ನ ವ್ಯವಹಾರದ ವಿರುದ್ಧ ದಾಳಿಗೆ ಜಿಎಸ್​ಟಿ ಇಲಾಖೆ ತರಬೇತಿ ಕಾರ್ಯಕ್ರಮದ ನಾಟಕವಾಡಿದ್ದಾರೆ. ದಾಳಿ ನಡೆಯುವ ಬಗ್ಗೆ ಯಾವುದೇ ಸುಳಿವು ಸಿಗದಿರಲು ಅಧಿಕಾರಿಗಳು ಇರುವ ವಾಹನಗಳಿಗೆ 'ಅಧ್ಯಯನ ಪ್ರವಾಸ' ಎಂದು ಬರೆಯಲಾದ ಬ್ಯಾನರ್​ಗಳನ್ನು ಅಳವಡಿಸಲಾಗಿದೆ. ಬಳಿಕ ಆ ಬಸ್‌ಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಲಾಯಿತು. ಜಿಎಸ್‌ಟಿ ವಿಶೇಷ ಆಯುಕ್ತ ಎಸ್.ಅಬ್ರಹಾಂ ರೆನ್ ನೇತೃತ್ವದಲ್ಲಿ ವ್ಯಾಪಕ ದಾಳಿ ಮುಂದುವರಿದಿದೆ ಎಂದು ರಾಜ್ಯ ಜಿಎಸ್‌ಟಿ ಗುಪ್ತಚರ ಉಪ ಆಯುಕ್ತ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಳ್ಳರ ಕಾಟಕ್ಕೆ ಅಕ್ಕಿ ಚೀಲದಲ್ಲಿ ₹15 ಲಕ್ಷ ಅಡಗಿಸಿಟ್ಟ ವರ್ತಕ: ತಿಳಿಯದೆ ಮೂಟೆ ಮಾರಿದ ಸಿಬ್ಬಂದಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.