ETV Bharat / bharat

ಅಪ್ರಾಪ್ತ ಮಗಳ ಮೇಲಿನ ಅತ್ಯಾಚಾರ ಪ್ರಕರಣ: ತಂದೆಗೆ 123 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್ - ಕೇರಳ ಕೋರ್ಟ್

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಪ್ರಕರಣ ಹಾಗೂ ಮತ್ತೊಬ್ಬ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದ ತಂದೆಗೆ ಕೇರಳ ಕೋರ್ಟ್ 123 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ.

Kerala court  rape of minor daughter  ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಪ್ರಕರಣ  ಕೇರಳ ಕೋರ್ಟ್  ತಂದೆಗೆ 123 ವರ್ಷ ಶಿಕ್ಷೆ
ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಪ್ರಕರಣ: ತಂದೆಗೆ 123 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್
author img

By ETV Bharat Karnataka Team

Published : Feb 7, 2024, 7:55 AM IST

ಮಲಪ್ಪುರಂ (ಕೇರಳ): 2022ರಲ್ಲಿ ಅಪ್ರಾಪ್ತ ಮಗಳ ಮೇಲೆ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನಿಗೆ ಕೇರಳದ ನ್ಯಾಯಾಲಯವೊಂದು ಮಂಗಳವಾರ 123 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜೊತೆಗೆ ಕಿರಿಯ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಇದೇ ವ್ಯಕ್ತಿಗೆ, ಮಂಜೇರಿ ಫಾಸ್ಟ್ ಟ್ರ್ಯಾಕ್​ ವಿಶೇಷ ನ್ಯಾಯಾಧೀಶ ಅಶ್ರಫ್ ಎ.ಎಂ. ಅವರು ಮೂರು ವರ್ಷಗಳ ಶಿಕ್ಷೆ ವಿಧಿಸಿದರು.

ಐಪಿಸಿಯ ಸೆಕ್ಷನ್ 376(3) (16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರ) ಮತ್ತು ಸೆಕ್ಷನ್ 5(l) (ಪುನರಾವರ್ತಿತ ಲೈಂಗಿಕ ದೌರ್ಜನ್ಯ) ಮತ್ತು 5(m) ಅಪರಾಧಗಳಿಗಾಗಿ ನ್ಯಾಯಾಲಯವು ವ್ಯಕ್ತಿಗೆ ತಲಾ 40 ವರ್ಷಗಳ ಶಿಕ್ಷೆ ವಿಧಿಸಿದೆ. (12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ) ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಮತ್ತು ಲೈಂಗಿಕವಾಗಿ ಹಿರಿಯ ಮಗಳ ಮೇಲೆ ಹಲ್ಲೆ ನಡೆಸಿರುವ ಅಪರಾಧಕ್ಕಾಗಿ ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಗುವಿನ ಮೇಲಿನ ಕ್ರೌರ್ಯ) ಅಡಿ ಮೂರು ವರ್ಷಗಳು ಸೇರಿದಂತೆ ಒಟ್ಟು 123 ವರ್ಷಗಳವರೆಗೆ ಅಪರಾಧಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಅಲ್ಲದೇ ಆತನಿಗೆ ಒಟ್ಟು 7 ಲಕ್ಷ ರೂಪಾಯಿ ದಂಡವನ್ನು ಕೂಡಾ ಹಾಕಿದೆ.

ಪಬ್ಲಿಕ್​ ಪ್ರಾಸಿಕ್ಯೂಟರ್ ಮಾಹಿತಿ: ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿರುವುದರಿಂದ ಮತ್ತು ವ್ಯಕ್ತಿಗೆ ನೀಡಲಾದ ಜೈಲು ಶಿಕ್ಷೆಗಳಲ್ಲಿ ಗರಿಷ್ಠ 40 ವರ್ಷಗಳು, ಅವರು ಮೊದಲ ಪ್ರಕರಣದಲ್ಲಿ 40 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಾರೆ. ಕಿರಿಯ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಾಲಯವು ಆ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಒಟ್ಟು 1.85 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಈ ಪ್ರಕರಣದ ಶಿಕ್ಷೆ ಪ್ರಕಟವಾದ ನಂತರ, ಪಬ್ಲಿಕ್​ ಪ್ರಾಸಿಕ್ಯೂಟರ್ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು.

''ಆ ವ್ಯಕ್ತಿ ತನ್ನ ಇಬ್ಬರು ಹೆಣ್ಣುಮಕ್ಕಳ ಪೈಕಿ, ಹಿರಿಯ ಮಗಳ ಮೇಲೆ ಮನೆಯ ಒಳಗೆ ಮತ್ತು ಹೊರಗೆ ಪದೇ ಪದೆ ಅತ್ಯಾಚಾರ ಮಾಡಿದ್ದಾನೆ. ಆತ ತನ್ನ ಕಿರಿಯ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ, ಅಪರಾಧಿಯ ಕೃತ್ಯಗಳು ಬಹಿರಂಗವಾಗಿವೆ. ಕಿರಿಯ ಪುತ್ರಿ ಈ ಬಗ್ಗೆ ತನ್ನ ತಾಯಿಗೆ ತಿಳಿಸಿದ್ದಳು. ಇಬ್ಬರು ಸಂತ್ರಸ್ತರ ತಾಯಿ, ಅಂಗನವಾಡಿ ಶಿಕ್ಷಕಿಯಾಗಿದ್ದಾಳೆ. ಇವರು ತನ್ನ ಸಹೋದ್ಯೋಗಿಗಳಿಗೆ ಗಂಡನ ಕೃತ್ಯದ ಬಗ್ಗೆ ಹೇಳಿಕೊಂಡಿದ್ದರು. ಮತ್ತು ಅವರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಪಬ್ಲಿಕ್​ ಪ್ರಾಸಿಕ್ಯೂಟರ್ ಪ್ರಕರಣದ ಸಂಪೂರ್ಣ ವಿವರ ನೀಡಿದರು.

ಇದನ್ನೂ ಓದಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಅಪರಾಧಿಗಳಿಗೆ 90 ವರ್ಷ ಜೈಲು ಶಿಕ್ಷೆ ವಿಧಿಸಿದ ಫಾಸ್ಟ್ ಟ್ರ್ಯಾಕ್ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.