ತ್ರಿಸ್ಸೂರು: ಭೀಕರ ಭೂಕುಸಿತಕ್ಕೆ ತುತ್ತಾಗಿದ್ದ ವಯನಾಡು ಜನರ ಪುನರ್ವಸತಿಗೆ ಕೇಂದ್ರ ವಿಶೇಷ ನೆರವಿನ ಕೊರತೆ ಕುರಿತು ಮತ್ತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಸ್ತಾಪಿಸಿದ್ದಾರೆ. ಜುಲೈನಲ್ಲಿ ಸಂಭವಿಸಿದ ಭೂಕುಸಿತದ ನೆರವಿನ ಕುರಿತು ರಾಜ್ಯ ಸರ್ಕಾರ ಅನೇಕ ಬಾರಿ ಪ್ರಸ್ತಾಪಿಸಿದರೂ ಕೇಂದ್ರಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದಿದ್ದಾರೆ.
ಚೇಲಕ್ಕರ ಉಪ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಎಲ್ಡಿಎಫ್ ಅಭ್ಯರ್ಥಿ ಕುರಿತು ಮತ ಪ್ರಚಾರ ನಡೆಸಿದ ಅವರು, ದುರಂತ ಸಂಭವಿಸಿದ ತಿಂಗಳ ಬಳಿಕ 200 ಜನರು ಸಾವನ್ನಪ್ಪಿದ್ದು, ನೂರಾರು ಮನೆಗಳು ನೆಲಸಮಗೊಂಡವು. ಈ ಜನರ ಪುನರ್ವಸತಿಗೆ ಕೇಂದ್ರ ಸರ್ಕಾರದ ಬಳಿಕ ರಾಜ್ಯ ಸರ್ಕಾರ ಸಹಾಯ ಕೋರಿತು.
ವಿಧಾನಸಭೆ ಅಂಗೀಕರಿಸಿದ ಸರ್ವಾನುಮತದ ನಿರ್ಣಯ ಸೇರಿದಂತೆ ಹಲವು ಬಾರಿ ಕೇಂದ್ರಕ್ಕೆ ಈ ಕುರಿತು ಮನವಿ ಕಳುಹಿಸಲಾಗಿದೆ. ಆದರೂ ಯಾವುದೇ ಸಹಾಯ ಬಂದಿಲ್ಲ. ನಮ್ಮ ಮನವಿಗೂ ಅವರು ಇಲ್ಲ ಎಂದಿಲ್ಲ. ಇದು ಒಳ್ಳೆಯ ವಿಷಯ ಎಂದರು.
ಬೇರೆ ರಾಜ್ಯದಲ್ಲಿ ಉಂಟಾಗುವ ನೈಸರ್ಗಿಕ ವಿಪತ್ತಿಗೆ ಆರ್ಥಿಕ ಸಹಾಯವನ್ನು ನೀಡುವಾಗ ಕೇರಳವನ್ನು ಯಾಕೆ ನಿರ್ಲಕ್ಷ್ಯ ಮಾಡಲಾಯಿತು. ಯಾಕೆ ಕೇರಳವನ್ನು ಬಿಟ್ಟುಬಿಟ್ಟಿರಿ ಎಂದು ಪ್ರಶ್ನಿಸಿದರು.
ವಯನಾಡು ಭೂ ಕುಸಿತ ಸಂತ್ರಸ್ತರ ಪುನರ್ವಸತಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ಸಹಾಯದ ಕೊರತೆ ಕುರಿತು ಅಕ್ಟೋಬರ್ 31ರಂದು ಕೂಡ ವಿಜಯನ್ ವಾಗ್ದಾಳಿ ನಡೆಸಿದ್ದರು. ವಯನಾಡು ಭೀಕರ ಭೂಕುಸಿತ ಸಂಭವಿಸಿ 90 ದಿನಗಳು ಕಳೆದರೂ ಕೇಂದ್ರ ಸರ್ಕಾರವು ಅಲ್ಲಿನ ಪುನರ್ವಸತಿ ಕಾರ್ಯಕ್ಕೆ ಕೇಂದ್ರ ಸರ್ಕಾ ಒಂದು ಪೈಸೆ ಸಹಾಯವನ್ನು ನೀಡದಿರುವುದು ಕ್ರೂರ ನಿರ್ಲಕ್ಷ್ಯ ಎಂದಿದ್ದರು.
ಸಿಪಿಐ(ಎಂ) ನ ಕೆ ರಾಧಾಕೃಷ್ಣನ್ ಆಲತ್ತೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಿಂದ ತೆರವಾದ ಚೇಲಕ್ಕರ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಇದೇ ನವೆಂಬರ್ 13ರಂದು ಮತದಾನ ನಡೆಯಲಿದೆ.
ಇದನ್ನೂ ಓದಿ: ವಿಜಯ್ ಪಕ್ಷ ಸಕ್ರಿಯವಾಗುತ್ತಿದ್ದಂತೆ ತಮಿಳುನಾಡು ಬಿಜೆಪಿಯಲ್ಲಿ ಅಣ್ಣಾಮಲೈ ರಾಜೀನಾಮೆಗೆ ಹೆಚ್ಚಿದ ಒತ್ತಡ