ETV Bharat / bharat

ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಿಸಲು 2ನೇ ಬಾರಿಗೆ ವಿಧಾನಸಭೆ ನಿರ್ಣಯ - Keralam Resolution - KERALAM RESOLUTION

ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವಂತೆ ಕೇರಳ ವಿಧಾನಸಭೆಯಲ್ಲಿ ಎರಡನೇ ಬಾರಿಗೆ ನಿರ್ಣಯ ಅಂಗೀಕರಿಸಲಾಗಿದೆ.

ಕೇರಳ ವಿಧಾನಸಭೆ ಕಟ್ಟಡ
ಕೇರಳ ವಿಧಾನಸಭೆ ಕಟ್ಟಡ (IANS)
author img

By ETV Bharat Karnataka Team

Published : Jun 24, 2024, 4:17 PM IST

ತಿರುವನಂತಪುರಂ: ಕೇರಳ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸುವಂತೆ ಕೇರಳ ವಿಧಾನಸಭೆ ಸೋಮವಾರ ನಿರ್ಣಯ ಅಂಗೀಕರಿಸಿತು. ಈಗ್ಗೆ ಒಂದು ವರ್ಷದ ಹಿಂದೆಯೇ ರಾಜ್ಯದ ಹೆಸರನ್ನು 'ಕೇರಳ'ದಿಂದ 'ಕೇರಳಂ' ಎಂದು ಬದಲಾಯಿಸಲು ಸಾಂವಿಧಾನಿಕ ತಿದ್ದುಪಡಿ ತರುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ ಆ ನಿರ್ಣಯಕ್ಕೆ ಕೆಲ ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಿ ಕೇಂದ್ರ ಸರ್ಕಾರ ವಾಪಸ್ ಕಳುಹಿಸಿತ್ತು. ಅದರಂತೆ ಈಗ ಮತ್ತೊಮ್ಮೆ ಸಣ್ಣ ತಿದ್ದುಪಡಿಗಳೊಂದಿಗೆ ಅದೇ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ. ಈ ನಿರ್ಣಯವನ್ನು ಈಗ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು.

ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿರ್ಣಯದಲ್ಲಿ, ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರನ್ನು ಅಧಿಕೃತವಾಗಿ 'ಕೇರಳಂ' ಎಂದು ಬದಲಾಯಿಸಲು ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ನಿರ್ಣಯಕ್ಕೆ ಹೆಚ್ಚಿನ ಸ್ಪಷ್ಟತೆಯನ್ನು ನೀಡಲು ಕೆಲ ಪದಗಳನ್ನು ಬದಲಾಯಿಸಬೇಕೆಂಬ ಸಲಹೆಯೊಂದಿಗೆ ಐಯುಎಂಎಲ್ ಶಾಸಕ ಎನ್.ಶಂಸುದ್ದೀನ್ ಈ ಸಂದರ್ಭದಲ್ಲಿ ಮತ್ತೊಂದು ತಿದ್ದುಪಡಿಯನ್ನು ಮಂಡಿಸಿದರು. ಆದರೆ ಈ ಬೇಡಿಕೆಯನ್ನು ಸದನದಲ್ಲಿ ತಿರಸ್ಕರಿಸಲಾಯಿತು.

ರಾಜ್ಯದ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ನಿರ್ಣಯವನ್ನು ಕಳೆದ ವರ್ಷ ಆಗಸ್ಟ್ 9ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸುವಂತೆ ನಿರ್ಣಯದ ಮೂಲಕ ಕೇಂದ್ರಕ್ಕೆ ಕೋರಲಾಗಿತ್ತು. ಹಾಗೆಯೇ 8ನೇ ಪರಿಚ್ಛೇದದ ಅಡಿಯಲ್ಲಿ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸಬೇಕೆಂದು ಕೂಡ ಕೋರಲಾಗಿತ್ತು.

ಆದಾಗ್ಯೂ, ಇಂಥ ತಿದ್ದುಪಡಿಯನ್ನು ಸಂವಿಧಾನದ ಮೊದಲ ಅನುಸೂಚಿಯಲ್ಲಿ ಮಾಡಿದರೆ ಸಾಕು ಎಂಬುದು ವಿವರವಾದ ಪರಿಶೀಲನೆಯ ನಂತರ ತಿಳಿದು ಬಂದಿತ್ತು. ಹೀಗಾಗಿ ಹೊಸ ನಿರ್ಣಯವನ್ನು ಮಂಡಿಸಲಾಯಿತು ಎಂದು ಸಿಎಂ ಪಿಣರಾಯಿ ವಿಜಯನ್ ನಂತರ ಸದನಕ್ಕೆ ವಿವರಿಸಿದರು.

'ಕೇರಳಂ' ಎಂಬ ಹೆಸರನ್ನು ಸಾಮಾನ್ಯವಾಗಿ ಮಲಯಾಳಂನಲ್ಲಿ ಬಳಸಲಾಗುತ್ತದೆ ಎಂದು ಸಿಎಂ ಪಿಣರಾಯಿ ತಮ್ಮ ನಿರ್ಣಯದಲ್ಲಿ ಗಮನಸೆಳೆದರು. ಆದಾಗ್ಯೂ ಅಧಿಕೃತ ದಾಖಲೆಗಳಲ್ಲಿ ರಾಜ್ಯವನ್ನು 'ಕೇರಳ' ಎಂದೇ ಕರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಬದಲಾಯಿಸುವ ನಿರ್ಣಯ ಮಂಡಿಸಲಾಯಿತು ಎಂದು ಅವರು ವಿವರಿಸಿದರು.

ಇದನ್ನೂ ಓದಿ: 18ನೇ ಲೋಕಸಭೆ ಅಧಿವೇಶನ: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜೋಶಿ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸೋಮಣ್ಣ! - 18th Lok Sabha Session

ETV Bharat Logo

Copyright © 2025 Ushodaya Enterprises Pvt. Ltd., All Rights Reserved.