ETV Bharat / bharat

ದೆಹಲಿಯಲ್ಲಿ ಉದ್ಯಮಿಗೆ ಗುಂಡಿಕ್ಕಿ ಹತ್ಯೆ; ಬಿಜೆಪಿ ವಿರುದ್ಧ ಕೇಜ್ರಿವಾಲ್​ ವಾಗ್ದಾಳಿ - BIZMAN SHOT DEAD

ಶಾಹದಾರದ ವಿಶ್ವಾಸ್ ನಗರದಲ್ಲಿ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ವಾಕಿಂಗ್​ ಮಾಡುತ್ತಿದ್ದ ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

File photo
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Dec 7, 2024, 1:25 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಳಗ್ಗೆ ಗುಂಡಿನ ಸದ್ದು ಕೇಳಿದೆ. ಇಂದು ಮುಂಜಾನೆ ವಾಕಿಂಗ್​ಗೆ ಹೊರಟಿದ್ದ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಶಾಹದಾರದ ವಿಶ್ವಾಸ್ ನಗರದಲ್ಲಿ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ವಾಕಿಂಗ್​ ಮಾಡುತ್ತಿದ್ದ ಉದ್ಯಮಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಯಮುನಾ ಸ್ಪೋರ್ಟ್​ ಕಾಂಪ್ಲೆಕ್ಸ್​ ಬಳಿ ಈ ಘಟನೆ ನಡೆದಿದ್ದು, 52 ವರ್ಷದ ಸುನೀಲ್​ ಜೈನ್ ಸಾವನ್ನಪ್ಪಿದ್ದಾರೆ.

ವಾಕಿಂಗ್​ ಮುಗಿಸಿ ಮನೆಗೆ ಮರಳುತ್ತಿರುವಾಗ ಅವರ ಮೇಲೆ 9 ಸುತ್ತು ಗುಂಡು ಹಾರಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಸುನೀಲ್​ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಆದರೆ, ಅವರು ಆದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ದಾಳಿ ಸಂಬಂಧ ಶಾಹದಾರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನಾ ಸ್ಥಳದಲ್ಲಿ ಪರಿಶೀಲಿಸಿ, ತನಿಖೆ ಆರಂಭಿಸಿದ್ದಾರೆ. ಉದ್ಯಮಿ ಸುನೀಲ್​ ದೇಹದೊಳಗೆ ಮೂರರಿಂದ ನಾಲ್ಕು ಗುಂಡು ಹೊಕ್ಕಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ಫಾರೆನ್ಸಿಕ್​ ತಂಡ, ಐದರಿಂದ ಆರು ಬುಲೆಟ್​ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದರು.

ಪ್ರಕರಣದ ಕುರಿತು ಮಾಹಿತಿ ನೀಡಿದ ಶಾಹದಾರ ಡಿಸಿಪಿ ಪ್ರಶಾಂತ್​ ಗೌತಮ್​, ಬೆಳಗ್ಗೆ 8.36ಕ್ಕೆ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಈ ಕುರಿತು ಸುದ್ದಿ ತಿಳಿಯಿತು. ಪಾತ್ರೆ ಅಂಗಡಿಗಳ ಮಾಲೀಕ ಸುನೀಲ್​ ಜೈನ್​ ಅವರನ್ನು ಗುರಿಯಾಗಿಸಿ, ಮೋಟಾರ್​ಸೈಕಲ್​ನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದ್ದು, ಆರೋಪಿಗಳ ಪತ್ತೆ ಮಾಡಲಾಗುವುದು ಎಂದರು.

ಉದ್ಯಮಿ ಹತ್ಯೆ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ. ಆದರೆ, ಈ ಘಟನೆ ಪ್ರದೇಶದಲ್ಲಿ ಭಯ ಮತ್ತು ಅಭದ್ರತೆಯ ಆತಂಕ ಹೆಚ್ಚಿಸಿದೆ.

ಕೇಜ್ರಿವಾಲ್​ ವಾಗ್ದಾಳಿ: ದೆಹಲಿಯಲ್ಲಿ ನಡೆದ ಗುಂಡಿನ ದಾಳಿಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕ, ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಲು ಕಾರಣ ಕೇಂದ್ರ ಗೃಹ ಸಚಿವರು ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ಅವರು, ಅಮಿತ್​ ಶಾ ಜಿ ದೆಹಲಿಯನ್ನು ಹಾಳು ಮಾಡಿದರು. ದೆಹಲಿಯನ್ನು ಜಂಗಲ್​ ರಾಜ್​ ಮಾಡಲಾಗಿದೆ. ಜನರು ಎಲ್ಲೆಡೆ ಉಗ್ರ ಕೃತ್ಯದ ಭಯದಲ್ಲಿ ಬದುಕುತ್ತಿದ್ದಾರೆ. ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ಬಿಜೆಪಿ ವಿಫಲವಾಗಿದೆ. ದೆಹಲಿ ಜನರು ಒಟ್ಟುಗೂಡಿ ಈ ಬಗ್ಗೆ ಧ್ವನಿ ಎತ್ತಬೇಕು ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಲಕ್ನೋ-ಆಗ್ರಾ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 8 ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.