ETV Bharat / bharat

ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ: ಆರೋಪಿ ಮೊಹಮ್ಮದ್ ಜಾವೇದ್ ಜೈಲಿನಿಂದ ಬಿಡುಗಡೆ - Kanhaiyalal Murder Case

author img

By ETV Bharat Karnataka Team

Published : Sep 7, 2024, 1:22 PM IST

Kanhaiyalal Murder Case: ಉದಯಪುರದ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್ ಜಾವೇದ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ. ಆರೋಪಿಗಳ ಜಾಮೀನು ಅರ್ಜಿ ಆಲಿಸಿದ ನ್ಯಾಯಮೂರ್ತಿ ಪಂಕಜ್ ಭಂಡಾರಿ ಮತ್ತು ನ್ಯಾಯಮೂರ್ತಿ ಪ್ರವೀರ್ ಭಟ್ನಾಗರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

KANHAIYALAL MURDER CASE
ಸಾಂದರ್ಭಿಕ ಚಿತ್ರ (File)

ರಾಜಸ್ಥಾನ: ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಜಾವೇದ್ ಎಂಬಾತನಿಗೆ ರಾಜಸ್ಥಾನ ಹೈಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಶನಿವಾರ ಅಜ್ಮೇರ್‌ ಜೈಲಿನಿಂದ ಹೊರ ಬಂದಿದ್ದಾನೆ. ಇಂದು ಬೆಳಗ್ಗೆ 8:15ಕ್ಕೆ ಜೈಲಿನಿಂದ ಹೊರಬಂದ ಜಾವೇದ್, ಮುಖ ಮರೆಸಿಕೊಂಡು ತನ್ನ ಸಹೋದರ ಮೊಹಮ್ಮದ್ ಶಂಶೇರ್ ಜತೆ ಕಾರಿನಲ್ಲಿ ತೆರಳಿದನು.

ಮೊಹಮ್ಮದ್ ಜಾವೇದ್‌ಗೆ 2 ಲಕ್ಷ ರೂಪಾಯಿ ಮತ್ತು 1 ಲಕ್ಷ ರೂಪಾಯಿಯ ಶ್ಯೂರಿಟಿ ಪಡೆದು, ಅನುಮತಿಯಿಲ್ಲದೆ ಭಾರತದ ಹೊರಗೆ ಪ್ರಯಾಣಿಸದಂತೆ ಮತ್ತು ತನಿಖೆಗೆ ಸಹಕರಿಸುವಂತೆ ಕೆಲವು ಶರತ್ತು ವಿಧಿಸಿ ರಾಜಸ್ಥಾನ ಹೈಕೋರ್ಟ್ ಗುರುವಾರ ಜಾಮೀನು ಆದೇಶ ನೀಡಿತ್ತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಭಂಡಾರಿ ಮತ್ತು ನ್ಯಾಯಮೂರ್ತಿ ಪ್ರವೀರ್ ಭಟ್ನಾಗರ್ ಅವರಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಪೂರಕ ಸಾಕ್ಷ್ಯಗಳಿಲ್ಲದ ಕಾರಣ ಕಸ್ಟಡಿಯಲ್ಲಿಡುವ ಅಗತ್ಯವಿಲ್ಲವೆಂದು ತಿಳಿಸಿ ಜಾಮೀನು ಮಂಜೂರು ಮಾಡಿದ್ದರು. ಆದರೆ, ಕೆಲವು ಕಾರಣಗಳಿಂದ ಜೈಲಿನಿಂದ ಬಿಡುಗಡೆಯಾಗಲಿಲಿಲ್ಲ. ಇಂದು ಬೆಳಗ್ಗೆ ಅಜ್ಮೇರ್‌ ಜೈಲಿನಿಂದ ಹೊರ ಬಂದಿದ್ದಾನೆ. ಕನ್ಹಯ್ಯಾ ಲಾಲ್ ಅವರ ಶಿರಚ್ಛೇದದ ಪ್ರಮುಖ ಶಂಕಿತರೊಂದಿಗೆ ಸಂಚು ರೂಪಿಸಿದ ಆರೋಪ ಜಾವೇದ್ ಮೇಲಿತ್ತು.

ವಾದ-ಪ್ರತಿವಾದ: ಮೊಬೈಲ್ ಲೊಕೇಶನ್ ಮತ್ತು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಕರೆ ವಿವರಗಳ ಆಧಾರದ ಮೇಲೆ ಎನ್‌ಐಎ ಆತನನ್ನು ಬಂಧಿಸಿದೆ ಎಂದು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಬಹಳ ದಿನಗಳಿಂದ ಜೈಲಿನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಜಾವೇದ್ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಇವರ ವಾದಕ್ಕೆ ವಿರೋಧಿಸಿದ ಸರ್ಕಾರಿ ವಕೀಲರು, ಆರೋಪಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಅಂಗಡಿಯಲ್ಲಿ ಕನ್ಹಯ್ಯಾಲಾಲ್ ಇರುವ ಬಗ್ಗೆ ಪ್ರಮುಖ ಆರೋಪಿಗೆ ಬಹಳ ಮಾಹಿತಿ ನೀಡಿದ್ದ. ಇಂತಹ ಪರಿಸ್ಥಿತಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗುವಂತಿಲ್ಲ ಎಂದು ವಾದಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು.

ಪ್ರಕರಣದ ಹಿನ್ನೆಲೆ: ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಜೂನ್ 28, 2022ರಲ್ಲಿ ಗ್ರಾಹಕರಂತೆ ನಟಿಸಿ ಕನ್ಹಯ್ಯಾ ಲಾಲ್ ಅಂಗಡಿಗೆ ತೆರಳಿ ಅವರನ್ನು ಹಾಡಹಗಲೇ ತಲೆ ಕಡಿದು ಬರ್ಬರವಾಗಿ ಕೊಂದಿದ್ದರು. ಅವರ ಬಂಧನಕ್ಕೆ ಕೆಲವೇ ಗಂಟೆಗಳ ಮೊದಲು ಆರೋಪಿಗಳು ವಿಡಿಯೋ ಮಾಡಿ ತಾವೇ ಈ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಕ್ರೂರ ಹತ್ಯೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ರಾಜಕೀಯ ಸ್ವರೂಪ ಕೂಡ ಪಡೆದಿತ್ತು.

ಪ್ರಕರಣದ ತನಿಖೆ ನಡೆಸಿದ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ರಿಯಾಜ್ ಅತ್ತಾರಿ, ಗೌಸ್ ಮೊಹಮ್ಮದ್ ಮತ್ತಿತರರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ಪಾಕ್ ನಿವಾಸಿ ಆರೋಪಿಗಳಾದ ಸಲ್ಮಾನ್ ಮತ್ತು ಅಬು ಇಬ್ರಾಹಿಂ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.

ತನಿಖಾ ಭಾಗವಾಗಿ ಕನ್ಹಯ್ಯಾ ಲಾಲ್ ಹತ್ಯೆಯಾದ 20 ದಿನಗಳ ನಂತರ ಎನ್‌ಐಎ ಜಾವೇದ್​ನನ್ನು ಬಂಧಿಸಿತ್ತು. ಜಾವೇದ್ ಘಟನೆಯ ಒಂದು ದಿನ ಮೊದಲು ಕೊಲೆ ಪ್ರಕರಣದ ಪ್ರಮುಖ ಆರೋಪಿ ರಿಯಾಜ್ ಅತ್ತಾರಿಯನ್ನು ಭೇಟಿಯಾದ ಆರೋಪ ಹೊತ್ತಿದ್ದ. ಆತನ ಮನೆಯಲ್ಲಿ ಶೋಧ ನಡೆಸಿದಾಗ ಮೊಂಡಾದ ಕತ್ತಿ ಪತ್ತೆಯಾಗಿತ್ತು. ಹೀಗಾಗಿ ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನೂ ದಾಖಲಿಸಲಾಗಿತ್ತು. ಇದೇ ಕೊಲೆ ಪ್ರಕರಣದಲ್ಲಿ ಫರ್ಹಾದ್ ಮೊಹಮ್ಮದ್ ಅಲಿಯಾಸ್ ಬಬ್ಲಾಗೆ ಎನ್‌ಐಎ ನ್ಯಾಯಾಲಯವು ಸೆಪ್ಟೆಂಬರ್ 1, 2023 ರಂದು ಜಾಮೀನು ನೀಡಿತ್ತು. ಇದೀಗ ಮತ್ತೊಬ್ಬ ಆರೋಪಿಯಾದ ಜಾವೇದ್​ಗೆ ಜಾಮೀನು ನೀಡಿದೆ.

ಇದನ್ನೂ ಓದಿ: ಕನ್ಹಯ್ಯ ಮರ್ಡರ್ ಕೇಸ್: ಪ್ರತ್ಯಕ್ಷ ಸಾಕ್ಷಿಯಾಗಿದ್ದ ವ್ಯಕ್ತಿಗೆ ಯಶಸ್ವಿ ಮೆದುಳು ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.