ETV Bharat / state

ಬೆಂಗಳೂರಲ್ಲಿ ಡ್ರಂಕ್ ಅಂಡ್ ಡ್ರೈವ್: ಒಂದೇ ವಾರದಲ್ಲಿ 870 ಪ್ರಕರಣ ದಾಖಲು! - Drunk And Drive Case

author img

By ETV Bharat Karnataka Team

Published : Sep 16, 2024, 7:35 PM IST

ರಾಜಧಾನಿ ಬೆಂಗಳೂರಿನಲ್ಲಿ ಮದ್ಯದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿರುವ ಪ್ರಕರಣಗಳು ಮುಂದುವರೆದಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ಮಾಡುವವರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

drunk and drive case
ಚಾಲಕರ ತಪಾಸಣೆ ಮಾಡುತ್ತಿರುವ ಪೊಲೀಸರು (ETV Bharat)

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಲಾಯಿಸುವವರ ಮೇಲೆ ಸಮರ ಸಾರಿರುವ ನಗರ ಸಂಚಾರ ಪೊಲೀಸರು ಕಳೆದೊಂದು ವಾರದಲ್ಲಿ ಸಾವಿರಾರು ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ರಾಜಧಾನಿಯಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ.

ಅವಘಡಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವುಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಪ್ರಮಾಣ ಇಳಿಸಲು ಹಾಗೂ ಸಂಚಾರ ನಿಯಮ‌ ಉಲ್ಲಂಘನೆ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕಳೆದೊಂದು ವಾರದಲ್ಲಿ ರಸ್ತೆಗಿಳಿದು ಮದ್ಯ ಸೇವಿಸಿದವರ ವಿರುದ್ಧ ಟ್ರಾಫಿಕ್ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಸೆಪ್ಟೆಂಬರ್​ 9ರಿಂದ 15ರ ವರೆಗೆ ನಗರದಲ್ಲಿ 57,717 ವಾಹನಗಳನ್ನು ತಡೆಗಟ್ಟಿ 870 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಾದರೆ ವಾಹನ ಜಪ್ತಿ ಜೊತೆಗೆ ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಿದೆ. ಸುಮಾರು 10 ಸಾವಿರ ರೂ.ಗಳಿಂದ ಗರಿಷ್ಠ 25 ಸಾವಿರ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಮದ್ಯ ಸೇವಿಸಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ರಾತ್ರಿ ವೇಳೆ ಹೈವೇಯಲ್ಲಿ ಕುಡಿದು ಆಕ್ಸಿಡೆಂಟ್​​ಗಳಗಾಗುತ್ತಿವೆ.‌ ಇತ್ತೀಚೆಗೆ ವೀಸಾ ಪಡೆಯಲು‌ ನಗರಕ್ಕೆ ಬಂದಿದ್ದ ಯುವಕ ಸ್ನೇಹಿತರೊಂದಿಗೆ ಜಾಲಿ ರೈಡ್ ಮಾಡಿ, ಯಶವಂತಪುರ ಮೇಲ್ಸೇತುವೆ ಬಳಿ ಬೈಕ್​ಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ 48 ಗಂಟೆ ಕಾಲ ಮದ್ಯದಂಗಡಿ ಬಂದ್: ಡಿಸಿ ಆದೇಶ - Liquor Shops Close

ETV Bharat Logo

Copyright © 2024 Ushodaya Enterprises Pvt. Ltd., All Rights Reserved.