ETV Bharat / bharat

ರಾಜೀನಾಮೆ ನಿರ್ಧಾರ ಪ್ರಕಟಿಸಿದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಗಂಗೋಪಾಧ್ಯಾಯ - ಕಲ್ಕತ್ತಾ ಹೈಕೋರ್ಟ್

ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಘೋಷಿಸಿದ್ದಾರೆ.

Calcutta HC judge Abhijit Gangopadhyay to resign

author img

By ETV Bharat Karnataka Team

Published : Mar 3, 2024, 5:18 PM IST

ಕೋಲ್ಕತಾ : ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಾಗೂ ನಂತರ ರಾಜಕೀಯಕ್ಕೆ ಸೇರುವುದಾಗಿ ಘೋಷಿಸಿದ್ದಾರೆ. ಹಣಕ್ಕೆ ಪ್ರತಿಯಾಗಿ ಶಾಲಾ ನೌಕರಿಗಳನ್ನು ನೀಡಿದ ಪ್ರಕರಣ ಸೇರಿದಂತೆ ರಾಜ್ಯದ ಇನ್ನೂ ಹಲವಾರು ಸೂಕ್ಷ್ಮ ಪ್ರಕರಣಗಳ ಬಗ್ಗೆ ಅವರು ವಿಚಾರಣೆ ನಡೆಸುತ್ತಿದ್ದಾರೆ.

ಭಾನುವಾರ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸುವುದಾಗಿ ಹೇಳಿದರು.

"ಒಬ್ಬ ಬಂಗಾಳಿಯಾಗಿ ನಾನು ಈಗ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಡಳಿತದಲ್ಲಿರುವವರು ತಮ್ಮ ಅಧಿಕಾರವನ್ನು ರಾಜ್ಯದ ಒಳಿತಿಗಾಗಿ ಉಪಯೋಗಿಸುತ್ತಿಲ್ಲ. ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ ಮತ್ತು ಮಂಗಳವಾರ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ಮುಂದೆ ಸಾಕಷ್ಟು ಪ್ರಕರಣಗಳ ವಿಚಾರಣೆ ಬಾಕಿ ಇರುವುದರಿಂದ ಸೋಮವಾರ ನಾನು ನ್ಯಾಯಾಲಯದಲ್ಲಿ ಕೆಲಸ ಮಾಡುತ್ತೇನೆ" ಎಂದು ಅವರು ಹೇಳಿದರು.

"ನನ್ನ ಮುಂದೆ ಹಲವಾರು ಅವಕಾಶಗಳಿವೆ. ಯಾವುದಾದರೂ ರಾಜಕೀಯ ಪಕ್ಷ ನನಗೆ ಅವಕಾಶ ನೀಡಿದರೆ ನಾನು ಖಂಡಿತವಾಗಿಯೂ ಆ ಅವಕಾಶವನ್ನು ಪರಿಗಣಿಸುತ್ತೇನೆ" ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಹೇಳಿದರು.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಆಗಸ್ಟ್ 2024 ರಲ್ಲಿ ತಮ್ಮ ನ್ಯಾಯಾಂಗ ಸೇವೆಗಳಿಂದ ನಿವೃತ್ತರಾಗಬೇಕಿತ್ತು. ಅವರು ಪ್ರಸ್ತುತ ಕಾರ್ಮಿಕ ವ್ಯವಹಾರಗಳು ಮತ್ತು ಕೈಗಾರಿಕಾ ಸಂಬಂಧಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ರಾಜ್ಯ ವಕ್ತಾರ ದೇಬಂಗ್​ಶು ಭಟ್ಟಾಚಾರ್ಯ, "ಅವರು ರಾಜಕೀಯ ಪಕ್ಷವೊಂದರ ಕಾರ್ಯಕರ್ತ ಎಂದು ನಾವು ಬಹಳ ಸಮಯದಿಂದ ಹೇಳುತ್ತಿದ್ದೇವೆ. ನಾವು ಹೇಳಿದ್ದನ್ನು ಸರಿ ಎಂದು ಸಾಬೀತುಪಡಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ." ಎಂದರು.

ಈ ಬಗ್ಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, ಗಂಗೋಪಾಧ್ಯಾಯ ಅವರ ರಾಜಕೀಯ ಪ್ರವೇಶದ ನಿರ್ಧಾರವನ್ನು ಸ್ವಾಗತಿಸಿದರು. "ಅಭಿಜಿತ್ ಗಂಗೋಪಾಧ್ಯಾಯ ಅವರಂಥವರು ರಾಜಕೀಯಕ್ಕೆ ಸೇರುವುದು ದೇಶಕ್ಕೆ ಒಳ್ಳೆಯದನ್ನು ಮಾಡಲಿದೆ. ಬಿಜೆಪಿಯು ಅವರ ಸಹಜ ಆಯ್ಕೆಯಾಗಿರಬಹುದು ಎಂದು ನಾನು ಊಹಿಸುತ್ತೇನೆ" ಎಂದು ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ತಮ್ಮ ಪಕ್ಷವು ಗಂಗೋಪಾಧ್ಯಾಯ ಅವರನ್ನು ಸ್ವಾಗತಿಸುತ್ತದೆ ಎಂದು ಹೇಳಿದರು. "ಅವರು ಭ್ರಷ್ಟಾಚಾರದ ವಿರುದ್ಧದ ಹೋರಾಟಗಾರ. ಅವರು ಕಾಂಗ್ರೆಸ್ ಸೇರಲು ಬಯಸಿದರೆ, ನಾವು ಅವರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಆದರೆ ಅವರು ಬಿಜೆಪಿಗೆ ಸೇರಿದರೆ ಸೈದ್ಧಾಂತಿಕವಾಗಿ ನಾವು ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು. ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೇನೆ ಎಂದು ಚೌಧರಿ ಒಂದೊಮ್ಮೆ ಹೇಳಿದ್ದರು.

ಇದನ್ನೂ ಓದಿ : ಮೊದಲ ಪಟ್ಟಿ: 'ದ್ವೇಷ ಭಾಷಣ' ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.