ETV Bharat / bharat

ಅಗ್ನಿಪಥ ಯೋಜನೆ ಮರುಪರಿಶೀಲಿಸಿ, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ: ಜೆಡಿಯು - JDU Demands

ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ಬೆಂಬಲ ಘೋಷಿಸಿರುವ ಜೆಡಿಯು ಕೆಲ ಬೇಡಿಕೆಗಳನ್ನು ಮುಂದಿಟ್ಟಿದೆ.

ಬಿಹಾರ ಸಿಎಂ ನಿತೀಶ್ ​ಕುಮಾರ್
ಬಿಹಾರ ಸಿಎಂ ನಿತೀಶ್ ​ಕುಮಾರ್ (ETV Bharat)
author img

By PTI

Published : Jun 6, 2024, 6:28 PM IST

ನವದೆಹಲಿ: ಬಿಜೆಪಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ರಚನೆ ಮಾಡಲು 'ಬೇಷರತ್​' ಬೆಂಬಲ ನೀಡುವುದಾಗಿ ಬಿಹಾರ ಸಿಎಂ ನಿತೀಶ್ ​ಕುಮಾರ್​ ಮುಂದಾಳತ್ವದ ಸಂಯುಕ್ತ ಜನತಾ ದಳ (ಜೆಡಿಯು​) ಘೋಷಿಸಿದ್ದರೂ, ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಅಗ್ನಿಪಥ್​ ಯೋಜನೆ ಮರುಪರಿಶೀಲನೆ, ಜಾತಿ ಗಣತಿ ಮುಂದುವರಿಕೆ, ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನದಂತಹ ಬೇಡಿಕೆಗಳನ್ನು ಸಲ್ಲಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜೆಡಿಯು ನಾಯಕ ಕೆ.ಸಿ. ತ್ಯಾಗಿ, ಅಗ್ನಿಪಥ ಯೋಜನೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ತಮ್ಮ ಪಕ್ಷವು ಒತ್ತಾಯಿಸಿದೆ. ಜಾತಿ ಗಣತಿಯನ್ನು ಮುಂದುವರಿಸಬೇಕು. ಅದರ ಹೊರತಾಗಿ ಬಿಜೆಪಿಗೆ ನಮ್ಮ ಪಕ್ಷವು ಬೇಷರತ್ ಬೆಂಬಲ ನೀಡಲಿದೆ ಎಂದು ಹೇಳಿದರು.

ಅಗ್ನಿವೀರ್​ ಬಗ್ಗೆ ಜನರಲ್ಲಿ ಅಸಮಾಧಾನ: ಸೇನೆಗೆ ಯುವಕರನ್ನು ಅಲ್ಪಾವಧಿಗೆ ಆಯ್ಕೆ ಮಾಡುವ ಅಗ್ನಿವೀರ್ ಯೋಜನೆಯ ಬಗ್ಗೆ ಮತದಾರರಲ್ಲಿ ಕೋಪವಿದೆ. ಈ ನ್ಯೂನತೆಯನ್ನು ತೆಗೆದುಹಾಕಲು ಜೆಡಿಯು ಬಯಸುತ್ತದೆ. ಜನರು ಹೆಚ್ಚಾಗಿ ಆಕ್ಷೇಪಣೆ ಹೊಂದಿರುವ ಯೋಜನೆಯನ್ನು ಮರು ವಿಮರ್ಶೆ ಮಾಡುವುದೇ ಉತ್ತಮ ಎಂದು ಸುದ್ದಿಗಾರರಿಗೆ ತಿಳಿಸಿದರು.

ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಈ ಬಗ್ಗೆ ಕೂಟದ ಎಲ್ಲ ಪಕ್ಷಗಳೊಂದಿಗೆ ಮಾತುಕತೆ ನಡೆಸಬೇಕು. ಯುಸಿಸಿ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ, ಯುಸಿಸಿ ವಿರುದ್ಧ ಅಲ್ಲ. ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳು ಮತ್ತು ವಿವಿಧ ಪಂಗಡಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಜಾತಿ ಗಣತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದ ಯಾವ ಪಕ್ಷವೂ ಜಾತಿ ಗಣತಿಯನ್ನು ನಿರಾಕರಿಸಿಲ್ಲ. ಬಿಹಾರದಲ್ಲಿ ಮೊದಲಿಗೆ ಗಣತಿ ನಡೆಸಲಾಯಿತು. ಪ್ರಧಾನಿ ಮೋದಿ ಅವರೂ ಇದನ್ನು ವಿರೋಧಿಸಲಿಲ್ಲ. ಇದು ಈಗಿನ ಬೇಡಿಕೆಯಾಗಿದೆ. ನಾವು ಅದನ್ನು ಮುಂದುವರಿಸಲು ಬಯಸುತ್ತೇವೆ ಎಂದು ತ್ಯಾಗಿ ಹೇಳಿದರು.

ಬಿಹಾರಕ್ಕೆ ವಿಶೇಷ ಸ್ಥಾನಮಾನ: ಇನ್ನು, ಬಿಹಾರ ರಾಜ್ಯವಾಗಿ ವಿಭಜನೆಯಾದ ನಂತರ ಹಲವು ಸಂಕಷ್ಟಗಳನ್ನು ಎದುರಿಸಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿರುವ ಆಸೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ನಮ್ಮ ಪಕ್ಷ ಎನ್​ಡಿಎ ಕೂಟದಲ್ಲಿ ಇರುವ ಕಾರಣ, ಯಾವುದೇ ಪೂರ್ವ ಷರತ್ತಿಲ್ಲದೇ, ಬೇಷರತ್​ ಬೆಂಬಲ ನೀಡಲಿದೆ ಎಂದರು.

18ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣ, ಜೆಡಿಯು, ಟಿಡಿಪಿಯಂತಹ ಮಿತ್ರಪಕ್ಷಗಳ ಬೆಂಬಲ ನಿರ್ಣಾಯಕವಾಗಿದೆ. ಸದ್ಯ ಬಿಜೆಪಿ 240 ಸ್ಥಾನಗಳನ್ನು ಗಳಿಸಿದ್ದು, ಪೂರ್ಣ ಬಹುಮತಕ್ಕೆ 32 ಸ್ಥಾನಗಳ ಕೊರತೆ ಹೊಂದಿದೆ. ಮಿತ್ರಪಕ್ಷಗಳಾದ ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) 16, ನಿತೀಶ್​ಕುಮಾರ್​ ಅವರ ಜೆಡಿಯು 12 ಸ್ಥಾನಗಳಲ್ಲಿ ಗೆದ್ದಿದ್ದು, ಇತರ ಮೈತ್ರಿ ಪಾಲುದಾರರು ಸೇರಿ ಎನ್​ಡಿಎ 293 ಸ್ಥಾನಗಳನ್ನು ಹೊಂದಿದೆ. ಇದೀಗ ಪಕ್ಷೇತರರೂ ಎನ್​ಡಿಎ ಬೆಂಬಲ ಘೋಷಿಸಿದ್ದು, ಕೂಟದ ಬಲ 303ಕ್ಕೆ ಏರಿದೆ.

ಇದನ್ನೂ ಓದಿ: ಜೂನ್ 9ರಂದು ಮೋದಿ ಪದಗ್ರಹಣ ಸಾಧ್ಯತೆ: ಪಾಕ್​ ಬಿಟ್ಟು ನೆರೆದೇಶಗಳಿಗೆ ಆಹ್ವಾನ - Modi Oath Taking Ceremony

ETV Bharat Logo

Copyright © 2024 Ushodaya Enterprises Pvt. Ltd., All Rights Reserved.