ETV Bharat / bharat

ಬಿಹಾರ ಮುಸ್ಲಿಂ ಸಮುದಾಯದಲ್ಲಿ 'ಜನ ಸುರಾಜ್' ಬಲವಾಗಿ ಬೇರೂರುತ್ತಿದೆ: ಪ್ರಶಾಂತ್ ಕಿಶೋರ್ - Jan Suraaj campaign - JAN SURAAJ CAMPAIGN

ಬಿಹಾರದ ಮುಸ್ಲಿಂ ಸಮುದಾಯದಲ್ಲಿ ಜನ ಸುರಾಜ್ ಅಭಿಯಾನವು ಜನಪ್ರಿಯತೆ ಗಳಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಹಾಗೂ ರಾಜಕಾರಣಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ (IANS)
author img

By PTI

Published : Jul 15, 2024, 4:26 PM IST

ಪಾಟ್ನಾ : ತಮ್ಮ 'ಜನ ಸುರಾಜ್' ಅಭಿಯಾನವು ಪ್ರಬಲ ರಾಜಕೀಯ ಪರ್ಯಾಯವಾಗಿ ಬೆಳೆಯುತ್ತಿದ್ದು, ವಿಶೇಷವಾಗಿ ಬಿಹಾರದ ಮುಸ್ಲಿಮರಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ರಾಜಕೀಯ ತಂತ್ರಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕಿಶೋರ್ ಪ್ರತಿಪಾದಿಸಿದ್ದಾರೆ. ಭಾನುವಾರ ಇಲ್ಲಿನ ಹಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪಿಎಸಿ) ಸ್ಥಾಪಕ ಕಿಶೋರ್, 2025 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ವಿಕಸನಗೊಳ್ಳುವ ಗುರಿಯನ್ನು ಹೊಂದಿರುವ ತಮ್ಮ ಅಭಿಯಾನವು ಮುಸ್ಲಿಂ ಸಮುದಾಯದಲ್ಲಿ ಬಲವಾಗಿ ಬೇರೂರುತ್ತಿದೆ ಎಂದು ಒತ್ತಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯ ಸಚಿವ ಮೊನಜೀರ್ ಹಸನ್ ಮತ್ತು ಜನ ಸುರಾಜ್ ಬೆಂಬಲಿತ ಎಂಎಲ್ ಸಿ (ವಿಧಾನ ಪರಿಷತ್ ಸದಸ್ಯ) ಅಫಾಕ್ ಅಹ್ಮದ್ ಸೇರಿದಂತೆ ಪ್ರಮುಖ ಮುಸ್ಲಿಂ ಬುದ್ಧಿಜೀವಿಗಳು ಭಾಗವಹಿಸಿದ್ದರು.

ರಾಜ್ಯದ ಮುಸ್ಲಿಮರ ಆದ್ಯತೆಯ ಪಕ್ಷವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಆರ್​ಜೆಡಿಯನ್ನು ನೇರವಾಗಿ ಹೆಸರಿಸದೆ ವಾಗ್ದಾಳಿ ನಡೆಸಿದ ಕಿಶೋರ್, "ಮುಸ್ಲಿಮರು ಲಾಟೀನ್​​ಗೆ (ಆರ್​ಜೆಡಿಯ ಚುನಾವಣಾ ಚಿಹ್ನೆ) ಉರಿಯುವ ಎಣ್ಣೆಯಾಗಿ ಮುಂದುವರಿಯಬಾರದು. ಅವರು ರಾಜಕೀಯ ಜೀತದಾಳುಗಳಾಗುವುದನ್ನು ನಿಲ್ಲಿಸಬೇಕು ಮತ್ತು ಬದಲಿಗೆ ಮಹಾತ್ಮ ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ನಂಬುವ ಹಿಂದೂಗಳೊಂದಿಗೆ ಕೈಜೋಡಿಸಬೇಕು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು" ಎಂದು ಹೇಳಿದರು.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸುವ ಯೋಜನೆಯನ್ನು ಕಿಶೋರ್ ಈ ಹಿಂದೆ ಘೋಷಿಸಿದ್ದರು. ತೀರಾ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ, ಜನ ಸುರಾಜ್ ವೇದಿಕೆಯಡಿ ಅತ್ಯಂತ ಹಿಂದುಳಿದ ವರ್ಗಗಳ (ಇಬಿಸಿ) ವರ್ಗದಿಂದ ಕನಿಷ್ಠ 75 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದ್ದರು.

ಕೋಟಿ ಜನ ಸೇರ್ಪಡೆ: ಜನ್ ಸುರಾಜ್ ಅಕ್ಟೋಬರ್ 2 ರಂದು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಲಿದ್ದು, ಆ ಹೊತ್ತಿಗೆ ಸುಮಾರು ಒಂದು ಕೋಟಿ ಜನರು ಜನ್ ಸುರಾಜ್ ಸೇರುತ್ತಾರೆ ಎಂದು ಪ್ರಶಾಂತ್ ಕಿಶೋರ್ ಭಾನುವಾರ ಹೇಳಿದ್ದಾರೆ. ಜನ ಸುರಾಜ್ ಪ್ರಚಾರ ಸಮಿತಿ ಸದಸ್ಯರೊಂದಿಗಿನ ಸಭೆಯಲ್ಲಿ ಕಿಶೋರ್ ಈ ಘೋಷಣೆ ಮಾಡಿದ್ದು, ಜಾತಿಗಳಿಂದ ವಿಭಜಿತವಾಗಿರುವ ಬಿಹಾರವನ್ನು ಒಗ್ಗೂಡಿಸುವಂತೆ ಕರೆ ನೀಡಿದರು. ತಮ್ಮ ಅಭಿಯಾನವು ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿದೆ ಮತ್ತು ವ್ಯವಸ್ಥೆಯನ್ನು ಬದಲಾಯಿಸಲು ಜನಸಾಮಾನ್ಯರಿಗೆ ಶಿಕ್ಷಣ ನೀಡುವಂತೆ ಸದಸ್ಯರಿಗೆ ಕರೆ ನೀಡಿದರು. ರಾಜ್ಯದ ರಾಜಕೀಯ ಕ್ಷೇತ್ರವನ್ನು ಸಂಪೂರ್ಣವಾಗಿ ಪರಿವರ್ತಿಸಲು ಬಿಹಾರದ ಎಲ್ಲಾ 243 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಯೋಜನೆಯನ್ನು ಕಿಶೋರ್ ಘೋಷಿಸಿದರು.

ಇದನ್ನೂ ಓದಿ : ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಚೀನಾ ವ್ಯವಹಾರಗಳ ತಜ್ಞ ವಿಕ್ರಮ ಮಿಸ್ರಿ ನೇಮಕ - new foreign secretary

ETV Bharat Logo

Copyright © 2025 Ushodaya Enterprises Pvt. Ltd., All Rights Reserved.