ಜೈಪುರ್( ರಾಜಸ್ಥಾನ): ಅಯೋಧ್ಯೆ ರಾಮನಿಗೆ ಜೈಪುರದ ರಾಜ ಕುಟುಂಬ ಕಚ್ವಾಹ ರಾಜಮನೆತನವೂ ಅಯೋಧ್ಯೆಯ ರಾಮನೊಂದಿಗೆ ಆಳವಾದ ಭಕ್ತಿ ಭಾವ ಹೊಂದಿದೆ. 1717ರಲ್ಲಿ ಸವಾಯಿ ಜೈ ಸಿಂಗ್ ಔದ್ನ ನವಾಬ್ ಬರ್ಹನ್ ಉಲ್ ಮುಲ್ಕ್ ಶಹದತ್ ಖಾನ್ ಅವರಿಂದ 983 ಎಕರೆ ಭೂಮಿ ಖರೀದಿಸಿದ್ದರು. ಅಲ್ಲದೇ ಅವರ ಹೆಸರಿನಲ್ಲಿ ಒಂದು ನಗರವನ್ನೂ ಕೂಡಾ ಸ್ಥಾಪಿಸಿದ್ದರು. ರಾಮ ಜನ್ಮಭೂಮಿಯನ್ನು ಆಕ್ರಮಣಕಾರರಿಂದ ರಕ್ಷಿಸಲು, ಜೈಪುರದ ಬಾಲನಂದ ಮಠದ ನಿರ್ಮೋಹಿ ಯೋಧ ಸಂತರ ಮಿಲಿಟರಿ ಕಂಟೋನ್ಮೆಂಟ್ ಅನ್ನು ಅಯೋಧ್ಯೆಯಲ್ಲಿ ಸ್ಥಾಪಿಸಲಾಯಿತು. ಇದು ಮಾತ್ರವಲ್ಲ ಅಯೋಧ್ಯೆಯ ಅಪರೂಪದ ಚಿತ್ರಕತೆ, ರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿ ಇಂದಿಗೂ ಜೈಪುರ ನಗರದ ಕಪಡ್ಡವಾರ್ನಲ್ಲಿ ಕಾಣಬಹುದಾಗಿದೆ. ಇದು ಜೈಪುರದ ರಾಜ ಕುಟುಂಬ ಅಯೋಧ್ಯೆಯಲ್ಲಿ ಮಾಡಿದ ಕೆಲಸವನ್ನು ಹೇಳುತ್ತದೆ.
309ನೇ ಪೀಳಿಗೆ: ಇತಿಹಾಸಗಾರ ದೇವೇಂಧ್ರ ಕುಮಾರ್ ಭಗತ್, ಜೈಪುರದ ರಾಜಮನೆತನವೂ ಭಗವಾನ್ ರಾಮನ ಮಗ ಕುಶನ ವಂಶಸ್ಥರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಅವರ ಸಂಪೂರ್ಣ ವಂಶಾವಳಿಯನ್ನು ನಾಥವತ ಇತಿಹಾಸ ನೀಡಿದೆ. ಸದ್ಯ ಈ ಮನೆತನದ ಇತಿಹಾಸ ಹೀಗಿದೆ. ಪಂಚರಂಗ ಬಾವುಟದಲ್ಲಿ ಕಚ್ನಾರ್ ಮರದ ಸಂಕೇತ ರಾಜಮನೆತನದ ಬಾವುಟದಲ್ಲಿ ಕಾಣಬಹುದಾಗಿದೆ. ಜೈಪುರ ರಾಜಮನೆತನವೂ ಶಮಿ ಮರವನ್ನು ಪೂಜಿಸುತ್ತಿತ್ತು. ಇಲ್ಲಿ ದಸರಾವನ್ನು ಅತ್ಯುತ್ಸಾಹದಲ್ಲಿ ಆಚರಿಸಲಾಗುತ್ತಿತ್ತು. ವಾಲ್ಮೀಕಿ ರಾಮಯಣದಲ್ಲಿ ರಾಮ್ ದರ್ಬಾರ್ ರೀತಿ ಇಲ್ಲಿ ಕೂಡ ಅದ್ದೂರಿ ಆಚರಣೆ ಮಾಡಲಾಗುತ್ತದೆ.
ಅನೇಕ ಕಾಮಗಾರಿಗೆ ಮುನ್ನಡಿ ಬರೆದ ಜೈ ಸಿಂಗ್: ರಾಮಜನ್ಮಭೂಮಿ ಬೇರೆ ಧರ್ಮದ ಪೂಜಾ ಸ್ಥಳವೂ ಹೌದು ಎಂದಾಗ, ಜೈಪುರ ರಾಜಮನೆತನವೂ ಇದನ್ನು ಇಷ್ಟಪಡಲಿಲ್ಲ. ರಾಜನಮನೆತನ ಕುಟುಂಬದ ಸವಾಯಿ ಜೈ ಸಿಂಗ್ ಅವರು ಅನೇಕ ಕಾಮಗಾರಿಗಳನ್ನು ಅಯೋಧ್ಯೆಯಲ್ಲಿ ನಡೆಸಿದೆ. ಧರ್ಮಶಾಲಾ, ಘಾಟ್, ಊಟದ ಅಂಗಣ ಸೇರಿದಂತೆ ಅನೇಕ ಕಾಮಗಾರಿ ಆರಂಭಿಸಿದ್ದಾರೆ. ರಕ್ಷಣೆಯ ಕಾರಣದಿಂದ ನಾಗಾ ಸಾಧುಗಳು ಅಲ್ಲಿಯೇ ಶಾಶ್ವತವಾಗಿ ಉಳಿದರು. ಇದಲ್ಲದೇ ಭದ್ರತೆಯ ದೃಷ್ಟಿಯಿಂದ ನಾಗಾ ಸಾಧುಗಳನ್ನು ಅಲ್ಲಿಯೇ ಶಾಶ್ವತವಾಗಿ ನೆಲೆಸುವಂತೆ ಮಾಡಲಾಯಿತು.
ಫಾರೂಕ್ ಷಾ ಕಾಲದಲ್ಲಿ, ಅವಧ್ ನವಾಬರಿಂದ ಭೂಮಿಯನ್ನು ಖರೀದಿಸಲಾಗಿತ್ತು , ಅಲ್ಲಿ ಪ್ರಸ್ತುತ ಬಡೇ ರಘುನಾಥ್ ಜಿ ಅವರ ಕಂಟೋನ್ಮೆಂಟ್, ಮಣಿರಾಮ್ ದಾಸ್ ಜಿ ಅವರ ಕಂಟೋನ್ಮೆಂಟ್, ವಿದ್ಯಾಕುಂಡ್ ಅನ್ನು ನಿರ್ಮಿಸಲಾಗಿದೆ. ಆದಾಗ್ಯೂ ರಾಮ್ಕೋಟ್ನ ಯಾವುದೇ ಭಾಗವೂ ಇದೀಗ ಉಳಿದಿಲ್ಲ. ಈ ಎಲ್ಲ ವ್ಯವಸ್ಥೆಗಳಿಗಾಗಿ, ಜೈಪುರ ರಾಜಮನೆತನದಿಂದ ನಿಯಮಿತವಾಗಿ ಹಣವನ್ನು ಕೂಡಾ ನೀಡಲಾಗಿತ್ತು ಎಂಬ ಮಾಹಿತಿ ಇದೆ.
ರಾಮನವಮಿ ಇಲ್ಲಿನ ಪ್ರಮುಖ ಹಬ್ಬ: ಜೈಪುರದ ಕುಟುಂಬ ಗಲಾಟಾ ತೀರ್ಥದಲ್ಲಿ ಸೀತಾ ರಾಮ್ನ ಮೂರ್ತಿಯನ್ನು ಸ್ಥಾಪಿಸಿದೆ. ಇದು ಮಾತ್ರವಲ್ಲದೇ ಚಂದ್ಪೊಲ್ನಲ್ಲಿರುವ ರಾಮ ಮೂರ್ತಿ ವಿಶ್ವದ ಬೇರೆಡೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಇಲ್ಲಿ ಪ್ರತಿ ವರ್ಷ ರಾಮ ನವಮಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಜೊತೆಗೆ ರಾಮ ಸೂರ್ಯವಂಶಕ್ಕೆ ಸೇರಿದ ಹಿನ್ನೆಲೆ ಸೂರ್ಯ ಸಪ್ತಮಿ ಆಚರಿಸಲಾಗುತ್ತದೆ.
ಕುಶು ರಾಮಮನೆತನ ಕುಶ್ವಾಹ: ಒಎಸ್ಡಿ ರಾಮು ರಾಮ್ದೇವ್ ಮಾತನಾಡಿ, ಶ್ರೀರಾಮನ ಹಿರಿಯ ಮಗ ಕುಶ್ ಅವರ ವಂಶಸ್ಥರನ್ನು ಮಾತ್ರ ಕುಶ್ವಾಹ (ಕಚ್ವಾಹಾ) ಎಂದು ಕರೆಯಲಾಗುತ್ತಿತ್ತು. ಜೈಪುರ ರಾಜಮನೆತನವು ಶ್ರೀರಾಮನ ವಂಶಸ್ಥರ ಅತಿದೊಡ್ಡ ಸ್ಥಾನವಾಗಿದೆ. ಕಾರಣ ದೊಡ್ಡ ಮಗನೇ ರಾಜ್ಯವಾಳಬೇಕು ಎಂಬ ಸಂಪ್ರದಾಯ ಇರುವುದರಿಂದ. ಪ್ರಸ್ತುತ ಮಹಾರಾಜರ 309ನೇ ಪೀಳಿಗೆ ಇದೆ. ಭಗವಾನ್ ಶ್ರೀ ರಾಮ ರಥದ ಮೇಲೆ ಸಾಗುವ ಚಿತ್ರ ಇಂದಿಗೂ ರಾಮ್ದ್ವಾರದಲ್ಲಿದೆ. ಮಿರ್ಜಾ ರಾಜ ಮಾನ್ಸಿಂಗ್ 77 ಹೋರಾಟ ಮಾಡಿದನು ಎಂಬಂತಾಗಿದೆ. ಕಬೂಲ್ ಕಂದಾಹರ್ ಯುದ್ಧದಲ್ಲಿ ಶತ್ರುಗಳನ್ನು ಸೋಲಿಸಿದನು. ಎಲ್ಲೆಲ್ಲಿ ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆಯೋ ಅಲ್ಲೆಲ್ಲಾ ಅವುಗಳನ್ನು ದೇವಾಲಯಗಳಾಗಿ ಮರು ನಿರ್ಮಾಣ ಕೂಡಾ ಮಾಡಲಾಗಿದೆ. ಇದರಲ್ಲಿ ದ್ವಾರಕಾಧೀಶ ದೇವಾಲಯವೂ ಇದೆ. ಇಲ್ಲಿ 104 ವರ್ಷ ಕಾಲ ಮಸೀದಿ ಇತ್ತು. ಬಳಿಕ ಇಲ್ಲಿ ದೇಗುಲ ನಿರ್ಮಿಸಲಾಗಿದೆ. ಈ ಜಗನ್ನಾಥ ಪುರಿಯ ಬಗ್ಗೆ ಇದೇ ರೀತಿಯ ಪುರಾವೆಗಳು ಇವೆ.
ಇವರ ಅವಧಿಯಲ್ಲಿ ಕೇವಲ ರಾಮನ ವಿಗ್ರಹವನ್ನು ಮಾತ್ರ ವಿವಿಧ ಸ್ಥಳಗಳಲ್ಲಿ ನಿರ್ಮಾಣ ಮಾಡಲಿಲ್ಲ. ಜೈಘಾಟ್, ಮಾನ್ ಘಾಟ್ ಅನ್ನು ಕೂಡ ನಿರ್ಮಾಣ ಮಾಡಿ, ದೇವಸ್ಥಾನ ಸಂರಕ್ಷಣಾ ಕೆಲಸವನ್ನು ಮಾಡಲಾಗಿದೆ. ಬಲನಂದನ್ ಮಠ್ದ ಅಡಿ ಈ ಸಂರಕ್ಷಣಾ ಕಾರ್ಯವನ್ನು ಮಾಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ಧರ್ಮವನ್ನು ರಕ್ಷಿಸುವಲ್ಲಿ ಜೈಪುರ ರಾಜಮನೆತನ ಮುಂಚೂಣಿಯಲ್ಲಿದೆ ಎಂಬ ವಿಚಾರ ಇಲ್ಲಿನ ಇತಿಹಾಸದಿಂದ ತಿಳಿದು ಬರುತ್ತಿದೆ.
ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ