ಹೈದರಾಬಾದ್: ಜೀವವೈವಿಧ್ಯತೆಯ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ಅಗತ್ಯದ ಬಗ್ಗೆ ನಾಗರಿಕರುಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ.22 ರಂದು ಜಾಗತಿಕವಾಗಿ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವನ್ನಾಗಿ (ಐಡಿಬಿ) ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಮೇ 22ನ್ನು ಐಡಿಬಿಯಾಗಿ ಅಂಗೀಕರಿಸಿತು. 1992ರ ಮೇ 22ರಂದು ನೈರೋಬಿ ಅಂತಿಮ ಕಾಯಿದೆ ಮೂಲಕ ಜೀವವೈವಿಧ್ಯತೆಯ ಒಡಂಬಡಿಕೆಯ ಅಂಗೀಕರಿಸಿದ ಸ್ಮರಣಾರ್ಥವಾಗಿ ಈ ದಿನ ಆಚರಿಸಲಾಗುತ್ತದೆ.
ಜೈವಿಕ ವೈವಿಧ್ಯತೆಯನ್ನು ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಾಣುಜೀವಿಗಳ ವಿವಿಧ ಪ್ರಕಾರಗಳಲ್ಲಿ ಅರ್ಥೈಸಲಾಗುತ್ತದೆ, ಆದರೆ ಇದು ಪ್ರತಿ ಜಾತಿಯೊಳಗಿನ ಆನುವಂಶಿಕ ವ್ಯತ್ಯಾಸಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ವಿವಿಧ ಬೆಳೆಗಳು ಮತ್ತು ಜಾನುವಾರುಗಳ ತಳಿಗಳು ಮತ್ತು ವಿವಿಧ ಪರಿಸರ ವ್ಯವಸ್ಥೆಗಳು (ಸರೋವರಗಳು, ಕಾಡುಗಳು, ಮರುಭೂಮಿಗಳು, ಕೃಷಿ ಪ್ರದೇಶ ) ಹಾಗೂ ಮಾನವರು, ಸಸ್ಯಗಳು, ಪ್ರಾಣಿಗಳು.
ಜೈವಿಕ ವೈವಿಧ್ಯತೆ ಸಂಪನ್ಮೂಲಗಳು ನಾಗರಿಕತೆಗಳನ್ನು ನಿರ್ಮಿಸುವ ಆಧಾರಸ್ತಂಭಗಳಾಗಿವೆ. ಮೀನು ಸುಮಾರು ಮೂರು ಶತಕೋಟಿ ಜನರಿಗೆ ಶೇ. 20 ರಷ್ಟು ಪ್ರೋಟೀನ್ ಅನ್ನು ಒದಗಿಸುತ್ತದೆ. 80 ಪ್ರತಿಶತಕ್ಕೂ ಹೆಚ್ಚು ಸಸ್ಯಗಳು ಮನುಷ್ಯರಿಗೆ ಆಹಾರ ಒದಗಿಸುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಶೇಕಡಾ 80 ರಷ್ಟು ಜನರು ಮೂಲ ಆರೋಗ್ಯ ರಕ್ಷಣೆಗಾಗಿ ಸಾಂಪ್ರದಾಯಿಕ ಸಸ್ಯ ಆಧಾರಿತ ಔಷಧಗಳನ್ನು ಅವಲಂಬಿಸಿದ್ದಾರೆ.
ಆದರೆ, ಜೀವವೈವಿಧ್ಯದ ನಾಶ ನಮ್ಮ ಆರೋಗ್ಯ ಸೇರಿದಂತೆ ಎಲ್ಲರಿಗೂ ಅಪಾಯವನ್ನುಂಟುಮಾಡುತ್ತದೆ. ಜೈವಿಕ ವೈವಿಧ್ಯತೆಯ ನಾಶ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳನ್ನು ವಿಸ್ತರಿಸಬಹುದು ಎಂದು ಸಾಬೀತಾಗಿದೆ. ಮತ್ತೊಂದೆಡೆ, ನಾವು ಜೀವವೈವಿಧ್ಯವನ್ನು ಉತ್ತಮವಾಗಿ ಇಟ್ಟುಕೊಂಡರೆ, ಕರೋನ ವೈರಸ್ ನಂತಹ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ.
ಜೈವಿಕ ವೈವಿಧ್ಯತೆಯು ಭವಿಷ್ಯದ ಪೀಳಿಗೆಗೆ ಬೆಲೆ ಕಟ್ಟಲಾಗದ ಆಸ್ತಿಯಾಗಿದೆ. ಸದ್ಯ ಕೆಲವು ಮಾನವ ಚಟುವಟಿಕೆಗಳಿಂದ ಜೀವ ಪ್ರಭೇದಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಮತ್ತು ಈ ವಿಷಯದ ಬಗ್ಗೆ ಜಾಗೃತಿಯ ಮಹತ್ವವನ್ನು ಪರಿಗಣಿಸಿ, ಯುಎನ್ ಪ್ರತಿ ವರ್ಷ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವನ್ನು ಆಚರಿಸಲು ನಿರ್ಧರಿಸಿತು.
ಯುನೆಸ್ಕೋ ಏನು ಮಾಡುತ್ತದೆ?:
- ಜೀವವೈವಿಧ್ಯತೆಗಾಗಿ ಯುನೆಸ್ಕೋದ ಇಂಟರ್ಸೆಕ್ಟೋರಲ್ ಕಾರ್ಯತಂತ್ರವು ಮೂರು ಸ್ತಂಭಗಳನ್ನು ಆಧರಿಸಿದೆ. ಮಾನವರು ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಪುನಃಸ್ಥಾಪಿಸುವುದು ಮತ್ತು ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು, ನಮ್ಮ ಪರಿಸರ ವ್ಯವಸ್ಥೆಯ ಸಾಮರಸ್ಯವನ್ನು ಸಂರಕ್ಷಿಸುವುದು.
- ಯುನೆಸ್ಕೋ ಗೊತ್ತುಪಡಿಸಿದ ತಾಣಗಳು ಜೀವವೈವಿಧ್ಯತೆಗಾಗಿ ಸಂಸ್ಥೆಯ ಕ್ರಮಗಳಿಗೆ ಬೆನ್ನೆಲುಬಾಗಿವೆ. ವಿಶ್ವ ಪರಂಪರೆಯ ತಾಣಗಳು, ಮೀಸಲು ಪ್ರದೇಶಗಳು ಮತ್ತು ಯುನೆಸ್ಕೋ ಗ್ಲೋಬಲ್ ಜಿಯೋಪಾರ್ಕ್‌ಗಳು ಭೂಮಿಯ 6 ಪ್ರತಿಶತದಷ್ಟು ಭೂಪ್ರದೇಶವನ್ನು ಆವರಿಸಿವೆ.
ಜೀವವೈವಿಧ್ಯ ಸಂರಕ್ಷಣೆಗಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಗಳು:
- ವನ್ಯಜೀವಿ ಸಂರಕ್ಷಣೆಗಾಗಿ ಸಂರಕ್ಷಿತ ಪ್ರದೇಶಗಳನ್ನು ರಚಿಸಲು ಅನುಕೂಲ ಮಾಡಿಕೊಡುವ ಮತ್ತು ಪ್ರಾಣಿಗಳನ್ನು ಬೇಟೆಯಾಡಿದವರಿಗೆ ದಂಡ ವಿಧಿಸುವ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ರಲ್ಲಿ ಜಾರಿ
- ರಾಜ್ಯಗಳಲ್ಲಿ ಜೌಗು ಪ್ರದೇಶಗಳನ್ನು ಸಂರಕ್ಷಿಸಲು ವೆಟ್ಲ್ಯಾಂಡ್ (ಸಂರಕ್ಷಣೆ ಮತ್ತು ನಿರ್ವಹಣೆ) ನಿಯಮಗಳು 2010 ರ ರಚನೆ
- ಜಲ ಪರಿಸರ ವ್ಯವಸ್ಥೆಯ ಸಂರಕ್ಷಣೆಗಾಗಿ ರಾಷ್ಟ್ರೀಯ ಯೋಜನೆಯ ಕೇಂದ್ರ ಪ್ರಾಯೋಜಿತ ಯೋಜನೆಯ ಅನುಷ್ಠಾನ, ರಾಮ್ಸರ್ ತಾಣಗಳು ಸೇರಿದಂತೆ ಜೌಗು ಪ್ರದೇಶಗಳನ್ನು ನಿರ್ವಹಿಸಲು ರಾಜ್ಯಗಳಿಗೆ ಸಹಾಯ ಮಾಡುವುದು
- ಅಳಿವಿನಂಚಿನಲ್ಲಿರುವ ಪ್ರಭೇದಗಳ ಪುನರುಜ್ಜೀವನಕ್ಕಾಗಿ 16 ಗುರುತಿಸಲಾದ ಪ್ರಭೇದಗಳೊಂದಿಗೆ ಕೇಂದ್ರ ಪ್ರಾಯೋಜಿತ ಯೋಜನೆ 'ವನ್ಯಜೀವಿ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ'ಯ ಮಾರ್ಪಾಡು
- ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳಿಗೆ ಉತ್ತಮ ರಕ್ಷಣೆ ಒದಗಿಸಲು ದೇಶಾದ್ಯಂತ ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳು, ಸಂರಕ್ಷಣಾ ಮೀಸಲುಗಳು ಪ್ರದೇಶಗಳಂತಹ ಸಂರಕ್ಷಿತ ಪ್ರದೇಶಗಳ ರಚನೆ
- 'ಇಂಟಿಗ್ರೇಟೆಡ್' ಸೇರಿದಂತೆ ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ವಿಸ್ತರಣೆ. ವನ್ಯಜೀವಿ ಆವಾಸಸ್ಥಾನಗಳ ಅಭಿವೃದ್ಧಿ, 'ಹುಲಿ ಯೋಜನೆ', ಮತ್ತು 'ಆನೆ ಯೋಜನೆ'
- ವನ್ಯಜೀವಿ (ಸಂರಕ್ಷಣಾ) ಕಾಯ್ದೆಯಡಿ ವನ್ಯಜೀವಿ ಅಪರಾಧಿಗಳನ್ನು ಬಂಧಿಸಲು ಮತ್ತು ಕಾನೂನು ಕ್ರಮ ಜರುಗಿಸಲು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಅಧಿಕಾರ
- ಕ್ಷೇತ್ರ ರಚನೆಗಳನ್ನು ಬಲಪಡಿಸಲು ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಗಸ್ತು ತೀವ್ರಗೊಳಿಸಲು ರಾಜ್ಯ ಸರ್ಕಾರಗಳನ್ನು ಕೋರುವುದು
ಭಾರತದಲ್ಲಿ ರೂಪಿಸಲಾದ ಪರಿಸರ ಮತ್ತು ಜೀವವೈವಿಧ್ಯಕ್ಕೆ ಸಂಬಂಧಿಸಿದ ಪ್ರಮುಖ ನೀತಿಗಳು:
- ರಾಷ್ಟ್ರೀಯ ಅರಣ್ಯ ನೀತಿ
- ಜೀವವೈವಿಧ್ಯತೆಯ ರಾಷ್ಟ್ರೀಯ ನೀತಿ ಮತ್ತು ಸ್ಥೂಲ ಮಟ್ಟದ ಕ್ರಿಯಾ ಕಾರ್ಯತಂತ್ರ
- ಪರಿಸರ ಮತ್ತು ಅಭಿವೃದ್ಧಿ ಕುರಿತ ರಾಷ್ಟ್ರೀಯ ಸಂರಕ್ಷಣಾ ಕಾರ್ಯತಂತ್ರ ಮತ್ತು ನೀತಿ ಹೇಳಿಕೆ
- ರಾಷ್ಟ್ರೀಯ ಜೀವವೈವಿಧ್ಯ ಕ್ರಿಯಾ ಯೋಜನೆ (2009)
- ರಾಷ್ಟ್ರೀಯ ಕೃಷಿ ನೀತಿ
- ರಾಷ್ಟ್ರೀಯ ಜಲ ನೀತಿ
- ರಾಷ್ಟ್ರೀಯ ಪರಿಸರ ನೀತಿ (2006)
ಜೈವಿಕ ವೈವಿಧ್ಯತೆಗಾಗಿ ಅಂತಾರಾಷ್ಟ್ರೀಯ ದಿನವನ್ನು ಹೀಗೆ ಆಚರಿಸಿ: ನೆರೆಹೊರೆಯ ಪಾರ್ಕ್ ಕ್ಲೀನ್-ಅಪ್ ತಂಡದಲ್ಲಿ ಭಾಗವಹಿಸುವುದು ಮತ್ತು ನಿಮ್ಮ ಸುತ್ತಮುತ್ತಲಿನ ಆಕ್ರಮಣಕಾರಿ ಸಸ್ಯಗಳ ನಿರ್ಮೂಲನೆಗೆ ಸಹಾಯ ಮಾಡುವುದು ಜೀವವೈವಿಧ್ಯತೆಯನ್ನು ಆಚರಿಸುವ ಸುಲಭ ಮಾರ್ಗವಾಗಿದೆ. ನೈಸರ್ಗಿಕ ಬೆಳವಣಿಗೆಯ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಸ್ಥಳೀಯ ಪ್ರಾಣಿಗಳ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರುವ ಸಸ್ಯಗಳನ್ನು ತೆಗೆದುಹಾಕಲು ಕೆಲ ಸ್ವಯಂ ಸೇವಕ ತಂಡಗಳು ಶ್ರಮಿಸುತ್ತಿವೆ.
ಇದನ್ನೂ ಓದಿ: ಜಾಗತಿಕ ತಾಪಮಾನದಿಂದ ಪರಿಸರ ರಕ್ಷಣೆ: ಬಹುತೇಕ ಭಾರತೀಯರಿಗೆ ಈ ಬಗ್ಗೆ ಇದೆ ಅರಿವು: ವರದಿ - Global Warming is Real
ಇದನ್ನೂ ಓದಿ: ಜಾಗತಿಕ ತಾಪಮಾನದಿಂದ ಪರಿಸರ ರಕ್ಷಣೆ: ಬಹುತೇಕ ಭಾರತೀಯರಿಗೆ ಈ ಬಗ್ಗೆ ಇದೆ ಅರಿವು: ವರದಿ - Global Warming is Real