ETV Bharat / bharat

ಯುವಕನಿಂದ ಕೈಗೆಟುಕುವ ದರದಲ್ಲಿ ಮರದ ಟ್ರೆಡ್​ಮಿಲ್ ಆವಿಷ್ಕಾರ: ಅಷ್ಟಕ್ಕೂ ಏನಿದು ಯಂತ್ರ​, ಏನಿದರ ವಿಶೇಷತೆ? - HOW TO USE WOODEN TREADMILL

Inspiration story: ತೆಲಂಗಾಣದ ಯುವಕನೊಬ್ಬ ಕೇವಲ 15 ದಿನಗಳಲ್ಲಿ, ಮರ, ಬೆಲ್ಟ್, ಬೇರಿಂಗ್ ಮತ್ತು ರಿಂಗ್​ ಬಳಸಿಕೊಂಡು ಸೃಜನಾತ್ಮಕವಾಗಿ ಮರದ ಟ್ರೆಡ್‌ಮಿಲ್ ತಯಾರಿಸಿದ್ದಾರೆ.

ಯುವಕನಿಂದ ಕೈಗೆಟುಕುವ ದರದಲ್ಲಿ ಮರದ ಟ್ರೆಡ್​ಮಿಲ್ ಆವಿಷ್ಕಾರ
ಯುವಕನಿಂದ ಕೈಗೆಟುಕುವ ದರದಲ್ಲಿ ಮರದ ಟ್ರೆಡ್​ಮಿಲ್ ಆವಿಷ್ಕಾರ (ETV Bharat)
author img

By ETV Bharat Karnataka Team

Published : Jul 27, 2024, 8:37 PM IST

ವರಂಗಲ್(ತೆಲಂಗಾಣ): ಆರೋಗ್ಯವೇ ಭಾಗ್ಯ ಎಂದು ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ. ಪ್ರಸ್ತುತ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಹಲವರಿಗೆ ಹೊರಗೆ ಹೋಗಿ ವ್ಯಾಯಾಮ ಮಾಡಲು ಸಮಯದ ಕೊರತೆ ಇರುವುದು ಅಥವಾ ಮನೆಯಲ್ಲೇ ವ್ಯಾಯಾಮ ಮಾಡಲು ಟ್ರೆಡ್​ಮಿಲ್​ ನಂತಹ ಸಾಧನ ಖರೀದಿಸುವಷ್ಟು ಹಣ ಇಲ್ಲದಿರುವುದು ಸವಾಲಿನ ಸಂಗತಿಯಾಗಿದೆ. ಇಂತಹವರ ಸಮಸ್ಯೆಯನ್ನು ಮನಗಂಡ ವರಂಗಲ್​ನ ಹರೀಶ್ ಎಂಬ ಯುವ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ.

ಹೌದು, ಹರೀಶ್​ ಅವರು ಕೈಗೆಟುಕುವ ಬೆಲೆಯಲ್ಲಿ ಟ್ರೆಡ್​ಮಿಲ್​ಗಳನ್ನು ತಯಾರಿಸಲು ತಮ್ಮ ವೃತ್ತಿ ಕೌಶಲ್ಯವನ್ನು ಬಳಸುತ್ತಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ಮನೆಯಲ್ಲಿದ್ದುಕೊಂಡೇ ಫಿಟ್ ಆಗುವಂತೆ ಮಾಡಲು ಮುಂದಾಗಿದ್ದಾರೆ. ಹಾಗಾದರೆ ಹರೀಶ್ ಅವರ ಸ್ಪೂರ್ತಿದಾಯಕ ಪ್ರಯಾಣ ಮತ್ತು ಅವರ ನವೀನ ಆವಿಷ್ಕಾರದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ವರಂಗಲ್ ಜಿಲ್ಲೆಯ ಕತ್ರಪಲ್ಲಿ ಮೂಲದ ಅರಣ್ ಕುಮಾರ್ ಮತ್ತು ವಸಂತಾ ದಂಪತಿಗೆ ಜನಿಸಿದ ಹರೀಶ್ ಚಾರಿ ಆರ್ಥಿಕ ಸಂಕಷ್ಟಗಳು ಸೇರಿದಂತೆ ಹಲವಾರು ಕಷ್ಟಗಳನ್ನು ಎದುರಿಸಿದ್ದಾರೆ. ಈ ಸವಾಲುಗಳ ಹೊರತಾಗಿಯೂ, ಅವರು ಹಿಂಜರಿಯದೇ ತಮ್ಮ ಕುಟುಂಬವನ್ನು ಪೋಷಿಸಲು ಮರಗೆಲಸದ ಕಾಯಕ ಮಾಡಲು ಶುರು ಮಾಡಿದರು.

ದೃಢಸಂಕಲ್ಪದಿಂದ ಕಷ್ಟಗಳನ್ನು ಎದುರಿದ ಹರೀಶ್​: ತಂಗಿಯ ಮದುವೆಗೆ ಮಾಡಿದ ಸಾಲದಿಂದ ಹರೀಶ್, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆದರೂ, ತನ್ನ ವೃತ್ತಿಯಲ್ಲಿ ಹೊಸತನವನ್ನು ಕಂಡುಕೊಳ್ಳುವ ಬಯಕೆಯಿಂದ ಸ್ವಯಂ ಪ್ರೇರಿತರಾಗಿ ಮರಗೆಲಸದಲ್ಲಿ ತೊಡಗಿಸಿಕೊಂಡರು.

ಮರದಿಂದ ಟ್ರೆಡ್​ಮಿಲ್ ತಯಾರಿ!: ನಗರಗಳಲ್ಲಿ ಹೆಚ್ಚಾಗಿ ವ್ಯಾಯಾಮಕ್ಕಾಗಿ ಟ್ರೆಡ್‌ಮಿಲ್‌ಗಳನ್ನು ಖರೀದಿಸುವ ಪ್ರವೃತ್ತಿಯನ್ನು ಗಮನಿಸಿದ ಹರೀಶ್, ಮರದಿಂದ ಟ್ರೆಡ್‌ಮಿಲ್ ಅನ್ನು ತಯಾರಿಸಲು ನಿರ್ಧರಿಸಿದರು. ಕೇವಲ 15 ದಿನಗಳಲ್ಲಿ, ಅವರು ಮರ, ಬೆಲ್ಟ್, ಬೇರಿಂಗ್ ಮತ್ತು ರಿಂಗ್​ ಬಳಸಿಕೊಂಡು ಸೃಜನಾತ್ಮಕವಾಗಿ ಮರದ ಟ್ರೆಡ್‌ಮಿಲ್ ತಯಾರಿಸಿದರು. ಅವರು ತಯಾರಿಸಿದ ಮರದ ಟ್ರೆಡ್‌ಮಿಲ್ 100 ಕೆ.ಜಿ. ವರೆಗೆ ಭಾರವನ್ನು ತಡೆದುಕೊಳ್ಳುತ್ತದೆ. ಇದು ಸಾಂಪ್ರದಾಯಿಕ ಟ್ರೆಡ್‌ಮಿಲ್‌ಗಳಿಗೆ ಪರ್ಯಾಯ ಆಯ್ಕೆಯಾಗಿದೆ.

ಎಲ್ಲೆಡೆ ಮನ್ನಣೆ ಗಳಿಸುತ್ತಿರುವ ಮರದ ಟ್ರೆಡ್​ಮಿಲ್: ಹರೀಶ್ ಅವರ ವಿನೂತನ ಟ್ರೆಡ್ ಮಿಲ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅವರು, ಮರದ ಟ್ರೆಡ್​ಮಿಲ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ, ವರಂಗಲ್ ಮಾತ್ರವಲ್ಲದೇ ಹೈದರಾಬಾದ್ ಮತ್ತು ಇತರ ಪ್ರದೇಶಗಳ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ಅವರ ಈ ಮರದ ಟ್ರೆಡ್‌ಮಿಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ಹರೀಶ್​ ಅವರ ವಿನೂತನ ಪ್ರಯತ್ನದ ಯಶಸ್ಸನ್ನು ತೋರಿಸುತ್ತಿದೆ.

ವಿಭಿನ್ನ ಕರಕುಶಲತೆ: ಮರದ ಟ್ರೆಡ್‌ಮಿಲ್‌ಗಳ ಜೊತೆಗೆ, ಹರೀಶ್ ಅವರು ಹಾಸಿಗೆಗಳು, ಸೋಫಾಗಳು, ಪೋಡಿಯಂಗಳು ಮತ್ತು ಅಲಂಕಾರಿಕ ಹಾರುವ ಪಕ್ಷಿಗಳನ್ನು ತಯಾರಿಸಿದ್ದಾರೆ. ಅವರು ಪೋರ್ಟಬಲ್ ಫೋಲ್ಡಿಂಗ್ ಕುರ್ಚಿಯನ್ನು ಸಹ ವಿನ್ಯಾಸಗೊಳಿಸಿದ್ದಾರೆ. ಈ ಮೂಲಕ ಸ್ಥಳೀಯರಿಂದ ಮೆಚ್ಚುಗೆ ಪಾತ್ರರಾಗಿದ್ದಾರೆ.

ಕೊಳಲು ನುಡಿಸುವ ಹರೀಶ್​: ಹರೀಶ್ ಒಬ್ಬ ಬಹುಮುಖ ಪ್ರತಿಭೆಯಾಗಿದ್ದಾರೆ. ಅವರು ಸಂಗೀತ ಶಿಕ್ಷಕರಿಂದ ಮತ್ತು ಯೂಟ್ಯೂಬ್ ಟ್ಯುಟೋರಿಯಲ್​ಗಳಿಂದ ಕೊಳಲು ನುಡಿಸುವುದನ್ನು ಕಲಿತು ಚಲನಚಿತ್ರ ಮತ್ತು ಭಕ್ತಿಗೀತೆಗಳನ್ನು ನುಡಿಸುತ್ತಾರೆ. ಅವರು ಸುಮಧುರ ಕೊಳಲು ವಾದನದಿಂದ ಮಾನಸಿಕ ಶಾಂತಿ ಪಡೆಯುತ್ತಾರೆ.

ಹರೀಶ್ ಅವರ ಈ ಸಾಧನೆಯೂ, ಸಂಕಲ್ಪ ಮತ್ತು ಸೃಜನಶೀಲತೆಯಿಂದ ಕಷ್ಟಗಳನ್ನು ಮೆಟ್ಟಿನಿಂತು ಯಾರುಬೇಕಾದರೂ ಏನನ್ನು ಬೇಕಾದರೂ ಸಾಧಿಸಿ ತೋರಿಸಬಹುದು ಎಂಬುದನ್ನು ನಿರೂಪಿಸಿದೆ.

ಇದನ್ನೂ ಓದಿ: ಕಡಲಿಗಿಳಿಯುವ ಕೆಚ್ಚೆದೆಯ ಯುವತಿ; ಮೀನು ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಸಾಧಿಸಿದ ಛಲಗಾತಿ - From Fisher Girl To Entrepreneur

ETV Bharat Logo

Copyright © 2024 Ushodaya Enterprises Pvt. Ltd., All Rights Reserved.