ಇಂದೋರ್: ದೆಹಲಿಯ ರೋಹಿಣಿ ನ್ಯಾಯಾಲಯದ ಆದೇಶದ ಮೇರೆಗೆ ರಾವು ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರೆಸ್ಟೋರೆಂಟ್ವೊಂದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯ ರೆಸ್ಟೋರೆಂಟ್ ನಿರ್ವಾಹಕರಾದ ಪುರುಷೋತ್ತಮ್ ಶರ್ಮಾ ಅವರು, ಇಂದೋರ್ ರೆಸ್ಟೋರೆಂಟ್ ವಿರುದ್ಧ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಇಂದೋರ್‌ನ ರಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ರೆಸ್ಟೋರೆಂಟ್ ನಿರ್ವಾಹಕರು ಗುರು ಕೃಪಾ ರೆಸ್ಟೋರೆಂಟ್‌ನ ಟ್ರೇಡ್‌ಮಾರ್ಕ್ ಅನ್ನು ಬಳಸುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಅಡ್ವೊಕೇಟ್ ಅಲೀನಾ ಸಿದ್ದಿಕಿ ಅವರನ್ನು ಸ್ಥಳೀಯ ಆಯುಕ್ತರನ್ನಾಗಿ ನೇಮಿಸಿ ಇಂದೋರ್‌ಗೆ ಕಳುಹಿಸಿಕೊಟ್ಟಿದ್ದರು. ರಾವು ಪೊಲೀಸರೊಂದಿಗೆ ಸಂಬಂಧಪಟ್ಟ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ, ರೆಸ್ಟೋರೆಂಟ್‌ನಿಂದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ
ಕಾರ್ಯಾಚರಣೆ ಸಮಯದಲ್ಲಿ ದೆಹಲಿ ರೆಸ್ಟೋರೆಂಟ್‌ನ ಟ್ರೇಡ್‌ಮಾರ್ಕ್ ಅನ್ನು ಇಂದೋರ್‌ನ ಹೋಟೆಲ್ ಆಪರೇಟರ್ ದ್ವಾರಿಕಾ ಸಿಂಗ್ ಠಾಕೂರ್ ಬಳಸುತ್ತಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ, ರೆಸ್ಟೋರೆಂಟ್‌ನ ಎಲ್ಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅವರನ್ನು ದೆಹಲಿಯ ರೋಹಿಣಿ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಛತ್ತೀಸ್‌ಗಢದಲ್ಲಿ ಮತ್ತೆ ಎನ್‌ಕೌಂಟರ್: 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ - Naxal Encounter