ಇಂದೋರ್ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮಲ ತಂದೆಗೆ ತ್ರಿವಳಿ ಜೀವಾವಧಿ ಶಿಕ್ಷೆ ವಿಧಿಸಿ ಇಂದೋರ್ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಜೊತೆಗೆ ಅಪರಾಧಿಗೆ 30,000 ದಂಡವನ್ನು ವಿಧಿಸಿದೆ.
ಏನಿದು ಘಟನೆ?: 2023ರ ಜನವರಿಯಲ್ಲಿ ಇಂದೋರ್ನ ಅಜಾದ್ ನಗರದಲ್ಲಿ ಈ ಪ್ರಕರಣ ಬೆಳಕಿದೆ ಬಂದಿದೆ. ಪರೀಕ್ಷಾ ಸಮಯದಲ್ಲಿ ಸಂತ್ರಸ್ತ ಬಾಲಕಿ ಶಾಲೆಯಲ್ಲಿ ಸಂಕಟ ಪಡುತ್ತಿದ್ದನ್ನು ಕಂಡ ಶಿಕ್ಷಕಿ ಆಕೆಯ ಆರೋಗ್ಯ ವಿಚಾರಿಸಲು ತೆರಳಿದಾಗ ಬಾಲಕಿ ಈ ಕುರಿತು ಶಿಕ್ಷಕಿಗೆ ತಿಳಿಸಿದ್ದಾಳೆ. ಬಾಲಕಿ ಮೇಲೆ ಮಲ ತಂದೆಯಿಂದ ಆಗುತ್ತಿದ್ದ ಭಯನಕ ದೌರ್ಜನ್ಯ ತಿಳಿದ ಶಿಕ್ಷಕಿ ಈ ಕುರಿತು ಸಂತ್ರಸ್ತ ತಾಯಿಗೆ ತಿಳಿಸಿದ್ದು, ಬಳಿಕ ಈ ಕುರಿತು ಇಂದೋರ್ ಪೊಲೀಸರಿಗೆ ಕೂಡ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ಐಪಿಸಿಯ ಹಲವು ಸೆಕ್ಷನ್ ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತ ತಾಯಿಯ ದೂರಿನ ಮೇರೆಗೆ ಮಲತಂದೆ ಬಂಧಿಸಿ, ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು.
ಪ್ರಕರಣದಲ್ಲಿ ಸಂತ್ರಸ್ತೆ ಆರೋಪಗಳಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ವಿಶೇಷ ಸರ್ಕಾರಿ ವಕೀಲರಾದ ಸುಶೀಲ ರಾಥೋಡ್ ಅವರು ಸಲ್ಲಿಸಿದರು . ಈ ಸಾಕ್ಷ್ಯಗಳ ವಿಚಾರಣೆ ನಡೆಸಿದ ನ್ಯಾಯಾಲಯ ಮಲತಂದೆಗೆ ತ್ರಿವಳಿ ಜೀವಾವಧಿ ಶಿಕ್ಷೆ ಜೊತೆಗೆ 30,000 ದಂಡ ವಿಧಿಸಿ ಆದೇಶ ನೀಡಿದೆ.
ಇದನ್ನೂ ಓದಿ: ಮಹಿಳೆಯರಿಗೆ 'ನಗದು' ಯೋಜನೆಯಿಂದ ರಾಜ್ಯಗಳ ಆರ್ಥಿಕತೆಗೆ ಪೆಟ್ಟು: ಎಸ್ಬಿಐ ವರದಿ
ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ: 24 ಗಂಟೆಯಲ್ಲಿ ಒಡಿಶಾದಲ್ಲಿ 42 ಕಾಳ್ಗಿಚ್ಚಿನ ಘಟನೆಗಳು ವರದಿ