ETV Bharat / bharat

ಭಾರತದಲ್ಲಿ ಮೊದಲ ಬಾರಿಗೆ ಎಳನೀರಿನಲ್ಲಿ ವೈನ್​ ತಯಾರಿಸಿದ ಕೇರಳದ ರೈತ; ಶೀಘ್ರದಲ್ಲೇ ಮಾರುಕಟ್ಟೆಗೆ

ಕೇರಳದ ಭೀಮನಾಡಿನ ಸೆಬಾಸ್ಟಿಯನ್ ಪಿ.ಅಗಸ್ಟಿನ್ ಎಂಬವರು ಎಳನೀರಿನ ವೈನ್ ಅವಿಷ್ಕರಿಸಿದ ರೈತ. ಇವರು ಈ ವಿಶೇಷ ವೈನ್​ ಉತ್ಪಾದನೆಗೆ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದ್ದರು.

A farmer from Kerala has created tender coconut wine frist time in India
ಎಳನೀರಿನಲ್ಲಿ ವೈನ್​ ತಯಾರಿಸಿದ ಕೇರಳದ ರೈತ ಸೆಬಾಸ್ಟಿಯನ್ ಪಿ.ಅಗಸ್ಟಿನ್ (ETV Bharat)
author img

By ETV Bharat Karnataka Team

Published : Oct 29, 2024, 4:42 PM IST

ಕಾಸರಗೋಡು(ಕೇರಳ): ವೈನ್​ ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದು ದ್ರಾಕ್ಷಿ. ಆದರೆ, ಇದೀಗ ಮಾರುಕಟ್ಟೆಯಲ್ಲಿ ಕೇವಲ ದ್ರಾಕ್ಷಿಯಲ್ಲದೇ ಗೋಡಂಬಿ ಸೇರಿದಂತೆ ತರಹೇವಾರಿ ವೈನ್​ಗಳಿವೆ. ಈ ಸಾಲಿಗೆ ಹೊಸ ಸೇರ್ಪಡೆ ಎಳನೀರ ವೈನ್​.

ಇದು ಅಚ್ಚರಿಯಾದರೂ ಹೌದು. ಕಲ್ಪವೃಕ್ಷದಲ್ಲಿ ದೊರೆಯುವ ಎಳನೀರಿನಿಂದ ವೈನ್​ ತಯಾರಿಸಿ, ತಮ್ಮ 20 ವರ್ಷದ ಕನಸು ನನಸು ಮಾಡಿಕೊಂಡಿದ್ದಾರೆ ತಹಶೀಲ್ದಾರ್ ಆಗಿ ನಿವೃತ್ತಿ ಹೊಂದಿ ಇದೀಗ ಕೃಷಿಯಲ್ಲಿ ತೊಡಗಿರುವ ಕೇರಳದ ರೈತ ಸೆಬಾಸ್ಟಿಯನ್ ಪಿ.ಅಗಸ್ಟಿನ್​.

ಭೀಮನಾಡಿನ ಸೆಬಾಸ್ಟಿಯನ್ ಪಿ.ಅಗಸ್ಟಿನ್ ಈ ಅವಿಷ್ಕಾರ ಮಾಡಿದ ರೈತರಾಗಿದ್ದು, ಇವರು ತಮ್ಮ ವಿಶೇಷ ವೈನ್​ ಉತ್ಪಾದನೆಗೆ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದ್ದಾರೆ. ಇದರ ಫಲವಾಗಿ ವೈನ್‌ ತಯಾರಿಕೆಗಾಗಿ ಅಬಕಾರಿ ಇಲಾಖೆಯಿಂದ ಲೈಸನ್ಸ್​ ಪಡೆದಿದ್ದಾರೆ.

"ಎಳನೀರಿನಿಂದ ವೈನ್​ ಉತ್ಪಾದಿಸುವುದಕ್ಕೆ ಚೀನಾದ ಅಸ್ತಿತ್ವದಲ್ಲಿರುವ ಪರವಾನಗಿ ದೊಡ್ಡ ಅಡಚಣೆ ಉಂಟುಮಾಡಿತು. ನಾನು ಈ ವೈನ್​ ಅನ್ನು ಎಳನೀರಿನಿಂದ ತಯಾರಿಸುತ್ತಿದ್ದೇನೆ. ಇದನ್ನು ತಯಾರಿಸುವ ವಿಧಾನದ ಕುರಿತು ಸಾಕಷ್ಟು ಪ್ರದರ್ಶನ ನೀಡಿದ್ದೇನೆ. ಹೀಗಾಗಿ ಇಲಾಖೆಯಿಂದ ಅನುಮತಿ ಪಡೆದೆ" ಎಂದು ಸೆಬಾಸ್ಟಿಯನ್​ ತಿಳಿಸಿದರು. ಶೀಘ್ರದಲ್ಲೇ ಎಳನೀರಿನ ವೈನ್​ ಮಾರುಕಟ್ಟೆಗೆ ಬರಲಿದೆ ಎಂದು ಇದೇ ವೇಳೆ ಹೇಳಿದರು.

2004ರಲ್ಲಿ ಮೊದಲ ಬಾರಿಗೆ ಇವರಿಗೆ ಎಳನೀರಿನಿಂದ ವೈನ್​ ತಯಾರಿಸುವ ಆಲೋಚನೆ ಹುಟ್ಟಿಕೊಂಡಿತಂತೆ. ಇದರ ಪರವಾಗಿ ಶ್ರಮಿಸಿದ ಇವರಿಗೆ 20 ವರ್ಷಗಳ ಬಳಿಕ ಈ ಅನುಮತಿ ಸಿಕ್ಕಿದೆ.

ಸೆಬಾಸ್ಟಿಯನ್​ ಕೃಷಿಯಲ್ಲಿ ಮಾಡಿರುವ ಅನೇಕ ಸಾಧನೆಗಳಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಬಂದಿವೆ.

ಸೆಬಾಸ್ಟಿಯನ್ ತಾವು ತಯಾರಿಸುತ್ತಿರುವ​ ವೈನ್​ಗೆ ಎಳನೀರು, ಡ್ರ್ಯಾಗನ್ ಹಣ್ಣು, ಮಾವು, ಬಾಳೆಹಣ್ಣು, ಹಲಸು ಮತ್ತು ಪಪ್ಪಾಯಿ ಬಳಕೆ ಮಾಡುತ್ತಿದ್ದಾರೆ. 250 ಲೀಟರ್​ ವೈನ್​​ ತಯಾರಿಸಲು 1000 ಎಳನೀರು ಮತ್ತು 250 ಕೆ.ಜಿ. ಹಣ್ಣು ಬಳಸುತ್ತಿದ್ದಾರೆ.

ಇದನ್ನೂ ಓದಿ: ಮಾರುಕಟ್ಟೆಗೆ ಬಂತು ಮ್ಯಾಜಿಕ್​ ದೀಪ: ಎಣ್ಣೆ ಹಾಕದೇ ದಿನವಿಡಿ ಉರಿಯುತ್ತೇ ಈ ಹಣತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.