ನವದೆಹಲಿ: ಏಡೆನ್ ಕೊಲ್ಲಿಯಲ್ಲಿ ಇರಾನ್ ಬೆಂಬಲಿತ ಹೌತಿ ಉಗ್ರರು ಮತ್ತೆ ವಾಣಿಜ್ಯ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ದಾಳಿಯ ನಂತರ ಹಡಗಿನಿಂದ ಬಂದ ತುರ್ತು ಕರೆಗೆ ತ್ವರಿತವಾಗಿ ಸ್ಪಂದಿಸಿದ ಭಾರತೀಯ ನೌಕಾಪಡೆಯು, ಹಡಗಿನಲ್ಲಿದ್ದ 22 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಿದೆ. ಜೊತೆಗೆ ತಗುಲಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಈ ಹಡಗು ಮಾರ್ಗದಲ್ಲಿ ಕಳೆದ ಕೆಲವು ವಾರಗಳಿಂದಲೂ ಇದೇ ರೀತಿಯ ದಾಳಿಗಳು ನಡೆಯುತ್ತಿವೆ.
-
#WATCH | Visuals of firefighting on board the merchant vessel by the Indian navy team and the vessel’s own crew https://t.co/KYCuK5v1Xr pic.twitter.com/iIyxAkg4JE
— ANI (@ANI) January 27, 2024 " class="align-text-top noRightClick twitterSection" data="
">#WATCH | Visuals of firefighting on board the merchant vessel by the Indian navy team and the vessel’s own crew https://t.co/KYCuK5v1Xr pic.twitter.com/iIyxAkg4JE
— ANI (@ANI) January 27, 2024#WATCH | Visuals of firefighting on board the merchant vessel by the Indian navy team and the vessel’s own crew https://t.co/KYCuK5v1Xr pic.twitter.com/iIyxAkg4JE
— ANI (@ANI) January 27, 2024
ಸ್ಥಳಕ್ಕೆ ಧಾವಿಸಿದ INS ವಿಶಾಖಪಟ್ಟಣಂ: ಶುಕ್ರವಾರ ರಾತ್ರಿ ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ನೌಕೆ MV ಮಾರ್ಲಿನ್ ಲುವಾಂಡಾ ಹಡಗಿನಿಂದ ಕರೆ ಬಂದ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ತನ್ನ ಕ್ಷಿಪಣಿ ವಿಧ್ವಂಸಕ INS ವಿಶಾಖಪಟ್ಟಣಂ ಅನ್ನು ದಾಳಿಗೊಳಗಾದ ನೌಕೆಗೆ ಸಹಾಯ ಮಾಡಲು ನಿಯೋಜಿಸಿತು. ಎಂವಿ ಮಾರ್ಲಿನ್ ಲುವಾಂಡಾ ಅವರ ಸಿಬ್ಬಂದಿಯೊಂದಿಗೆ ಆರು ಗಂಟೆಗಳ ಕಾಲ ಬೆಂಕಿ ನಂದಿಸುವ ಮೂಲಕ ನೌಕಾಪಡೆಯ ಅಗ್ನಿಶಾಮಕ ತಂಡವು ಯಶಸ್ವಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿತು ಎಂದು ನೌಕಾಪಡೆ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ನವದೆಹಲಿಯಲ್ಲಿ ಮಾಹಿತಿ ನೀಡಿದರು.
ಹೌತಿ ಉಗ್ರರ ಉಟ್ಟಹಾಸ: ಹೌತಿ ಉಗ್ರರು ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ಜಾಗತಿಕವಾಗಿ ಆತಂಕ ಹೆಚ್ಚುತ್ತಿದೆ. ಈ ನಡುವೆಯೇ ಘಟನೆ ಮರುಕಳಿಸಿದೆ. ಯುಕೆ ಮೂಲದ ಓಸಿಯೊನಿಕ್ಸ್ ಸರ್ವಿಸಸ್ ಈ ಹಡಗನ್ನು ನಿರ್ವಹಿಸುತ್ತಿದೆ.
''ಹೌತಿಗಳು ನವೆಂಬರ್‌ನಿಂದ ಕೆಂಪು ಸಮುದ್ರ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಎಂವಿ ಮಾರ್ಲಿನ್ ಲುವಾಂಡಾದ ಸಂಕಷ್ಟದ ಕರೆಗೆ ಪ್ರತಿಕ್ರಿಯಿಸಿದ ಐಎನ್‌ಎಸ್ ವಿಶಾಖಪಟ್ಟಣಂ ನೆರವು ನೀಡಲು ಮುಂದಾಯಿತು. ಯುಎಸ್ ಮತ್ತು ಫ್ರೆಂಚ್ ಯುದ್ಧನೌಕೆ ಕೂಡ ಸಂಕಷ್ಟದ ಕರೆಗೆ ಸ್ಪಂದಿಸಿವೆ'' ಎಂದು ಮಧ್ವಲ್ ತಿಳಿಸಿದರು.
''ಐಎನ್‌ಎಸ್ ವಿಶಾಖಪಟ್ಟಣಂನಿಂದ 10 ಭಾರತೀಯ ನೌಕಾ ಸಿಬ್ಬಂದಿಯನ್ನು ಒಳಗೊಂಡ ಅಗ್ನಿಶಾಮಕ ತಂಡವು ವಿಶೇಷ ಅಗ್ನಿಶಾಮಕ ಸಾಧನಗಳೊಂದಿಗೆ ಶನಿವಾರ ಬೆಳಿಗ್ಗೆ ಎಂವಿ ಮಾರ್ಲಿನ್ ಲುವಾಂಡಾ ತಲುಪಿದೆ ಎಂದು ಹೇಳಿದ ಅವರು, ಮಾರ್ಲಿನ್ ಲುವಾಂಡಾದ ಸಿಬ್ಬಂದಿಯೊಂದಿಗೆ ಆರು ಗಂಟೆಗಳ ಕಾಲ ಬೆಂಕಿಯನ್ನು ನಂದಿಸುವ ಕಾರ್ಯ ಕೈಗೊಳ್ಳಲಾಯಿತು. ಭಾರತೀಯ ನೌಕಾಪಡೆಯ ಅಗ್ನಿಶಾಮಕ ತಂಡವು ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿತು" ಎಂದು ವಿವೇಕ್ ಮಧ್ವಲ್ ಹೇಳಿದರು.
ಗಲ್ಫ್ ಆಫ್ ಏಡೆನ್‌ನಲ್ಲಿ ನಡೆದ ಈಚಿನ ದಾಳಿಗಳು: ಕಳೆದ ವಾರ, ಗಲ್ಫ್ ಆಫ್ ಏಡೆನ್‌ನಲ್ಲಿ ಒಂಬತ್ತು ಭಾರತೀಯರು ಸೇರಿದಂತೆ 22 ಸಿಬ್ಬಂದಿಯಿದ್ದ ಮಾರ್ಷಲ್ ದ್ವೀಪದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಯನ್ನು ಐಎನ್‌ಎಸ್ ವಿಶಾಖಪಟ್ಟಣಂ ತಡೆದಿತ್ತು. ನೌಕಾಪಡೆಯು ಜನವರಿ 5ರಂದು ಉತ್ತರ ಅರೇಬಿಯನ್ ಸಮುದ್ರದಲ್ಲಿ ಲೈಬೀರಿಯನ್ ಧ್ವಜದ ನೌಕೆ MV ಲೀಲಾ ನಾರ್ಫೋಕ್‌ನ ಅಪಹರಣದ ಪ್ರಯತ್ನ ವಿಫಲಗೊಳಿಸಿತ್ತು. ಅದರಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಿತ್ತು. 21 ಭಾರತೀಯ ಸಿಬ್ಬಂದಿಯಿದ್ದ ಲೈಬೀರಿಯನ್ ಧ್ವಜದ ನೌಕೆ MV ಕೆಮ್ ಪ್ಲುಟೊ ಡಿಸೆಂಬರ್ 23ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್ ದಾಳಿಗೊಳಾಗಿತ್ತು.
MV ಕೆಮ್ ಪ್ಲುಟೊ ಅಲ್ಲದೆ, ಭಾರತಕ್ಕೆ ತೆರಳುತ್ತಿದ್ದ ಮತ್ತೊಂದು ತೈಲ ಟ್ಯಾಂಕರ್ನ ವಾಣಿಜ್ಯ ಹಡಗಿನ ಮೇಲೆ ಅದೇ ದಿನ ದಕ್ಷಿಣ ಕೆಂಪು ಸಮುದ್ರದಲ್ಲಿ ಡ್ರೋನ್ ದಾಳಿ ಮಾಡಲಾಗಿತ್ತು. ಈ ನೌಕೆಯಲ್ಲಿ 25 ಭಾರತೀಯ ಸಿಬ್ಬಂದಿಯ ತಂಡವಿತ್ತು. ನೌಕಾಪಡೆಯು ಈಗಾಗಲೇ ತನ್ನ ಮುಂಚೂಣಿ ಹಡಗುಗಳು ಮತ್ತು ಕಣ್ಗಾವಲು ವಿಮಾನಗಳ ನಿಯೋಜನೆ ಮಾಡಿದ್ದು, ಉತ್ತರ ಮತ್ತು ಮಧ್ಯ ಅರೇಬಿಯನ್ ಸಮುದ್ರ ಸೇರಿದಂತೆ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಕಡಲ ಭದ್ರತಾ ಕಾರ್ಯಾಚರಣೆಗಳನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಹೌತಿ ಬಂಡುಕೋರರಿಂದ ಬ್ರಿಟಿಷ್ ಹಡಗಿನ ಮೇಲೆ ದಾಳಿ