ETV Bharat / bharat

ಭಾರತೀಯ ಕೋಸ್ಟ್ ಗಾರ್ಡ್ ಡಿಜಿ ರಾಕೇಶ್ ಪಾಲ್ ಹೃದಯಾಘಾತದಿಂದ ನಿಧನ - Indian Coast Guard DG Dies - INDIAN COAST GUARD DG DIES

ಭಾರತೀಯ ಕೋಸ್ಟ್ ಗಾರ್ಡ್ ಡಿಜಿ ರಾಕೇಶ್ ಪಾಲ್ ಅವರು ಹೃದಯಾಘಾತದಿಂದ ಇಂದು ಚೆನ್ನೈನಲ್ಲಿ ನಿಧನರಾದರು.

dg-rakesh-pal
ಭಾರತೀಯ ಕೋಸ್ಟ್ ಗಾರ್ಡ್ ಡಿಜಿ ರಾಕೇಶ್ ಪಾಲ್ ನಿಧನ (ETV Bharat)
author img

By ETV Bharat Karnataka Team

Published : Aug 18, 2024, 9:56 PM IST

ಚೆನ್ನೈ(ತಮಿಳುನಾಡು): ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಮಹಾನಿರ್ದೇಶಕ ರಾಕೇಶ್ ಪಾಲ್ ಅವರು ಹೃದಯಾಘಾತದಿಂದ ಭಾನುವಾರ ಚೆನ್ನೈನಲ್ಲಿ ನಿಧನರಾದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿನ್ನೆ ಪಾಲ್ ಬಂದಿದ್ದರು. ಈ ವೇಳೆ ಅವರು ಅಸ್ವಸ್ಥರಾಗಿದ್ದರು. ತಕ್ಷಣ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ರಾಕೇಶ್ ಪಾಲ್ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಸಮರ್ಥ ಮತ್ತು ಬದ್ಧ ಅಧಿಕಾರಿಯಾಗಿದ್ದು, ಅವರ ನಾಯಕತ್ವದಲ್ಲಿ ICG ಭಾರತದ ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ದೊಡ್ಡ ದಾಪುಗಾಲುಗಳನ್ನು ಇಡುತ್ತಿತ್ತು. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: "ಅವರ ತ್ಯಾಗ ಎಂದಿಗೂ ಮರೆಯಲಾಗುವುದಿಲ್ಲ": ಹುತಾತ್ಮ ಕ್ಯಾಪ್ಟನ್ ದೀಪಕ್ ಸಿಂಗ್‌ಗೆ ಸೇನೆಯಿಂದ ಗೌರವ ನಮನ - Army tribute to Deepak Singh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.