ಮುಂಬೈ: ನೇಪಾಳದಲ್ಲಿ ನಡೆದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಮಹಾರಾಷ್ಟ್ರ ಯಾತ್ರಾರ್ಥಿಗಳ ಮೃತದೇಹವನ್ನು ಭಾರತೀಯ ವಾಯುಪಡೆಯ ವಿಮಾನಗಳಲ್ಲಿ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ನ 27 ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಪ್ರವಾಸಿ ಬಸ್ ನೇಪಾಳದಲ್ಲಿ ರಭಸವಾಗಿ ಹರಿಯುತ್ತಿದ್ದ ಮರ್ಸ್ಯಾಂಗ್ಡಿ ನದಿಗೆ ಉರುಳಿ ಬಿದ್ದ ಪರಿಣಾಮ ದುರಂತ ಸಂಭವಿಸಿತ್ತು. ಸಾವನ್ನಪ್ಪಿದ ಭಾರತೀಯರೆಲ್ಲರೂ ಜಲ್ಗಾಂವ್ ವರಂಗಾಂವ್, ದರ್ಯಾಪುರ, ತಲ್ವೆಲ್ ಮತ್ತು ಭೂಸಾವಲ್ನವರು ಮೂಲದವರು ಎಂದು ಗುರುತಿಸಲಾಗಿದೆ.
ಈ ದುರಂತದಲ್ಲಿ ಸಾವನ್ನಪ್ಪಿದ ರಾಜ್ಯದ ಜನರ ಮೃತದೇಹ ತರಿಸಿಕೊಳ್ಳುವ ಸಂಬಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದರು, ಈ ವೇಳೆ ಅಗತ್ಯ ಸಹಾಯದ ಭರವಸೆಯನ್ನು ನೀಡಲಾಗಿದೆ. ಶನಿವಾರ ಭಾರತೀಯ ವಾಯುಪಡೆಯಲ್ಲಿ ಮೃತದೇಹಗಳನ್ನು ನಾಸಿಕ್ಗೆ ಸಾಗಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ನೇಪಾಳದ ಚಿತವಾನ್ ಜಿಲ್ಲೆಯ ಅನ್ಬೂಖೈರೇನಿ ಪ್ರದೇಶದಲ್ಲಿ ಗೋರಖ್‌ಪುರದ ಗೋರಖ್‌ಪುರದ ಬಸ್ ಪೋಖರಾದಿಂದ ಕಠ್ಮಂಡು ಕಡೆಗೆ 43 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ವೊಂದು ನದಿಗೆ ಉರುಳಿ ಬಿದ್ದಿತ್ತು. ಬಸ್ ಚಾಲಕ ಸೇರಿದಂತೆ ಸಹಾಯಕರು ಕೂಡ ಅಪಘಾತಕ್ಕೆ ಒಳಗಾಗಿದ್ದಾರೆ.
ಘಟನೆಯಲ್ಲಿ ಸ್ಥಳದಲ್ಲಿಯೇ 16 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಪಿಎಫ್ನ ಉಪ ವಕ್ತಾರ ಶೈಲೇಂದ್ರ ಥಾಪಾ ಕಠ್ಮಂಡುವಿನಲ್ಲಿ ಪಿಟಿಐಗೆ ತಿಳಿಸಿದ್ದಾರೆ. ಗಾಯಗೊಂಡವನ್ನು ಏರ್ಲಿಫ್ಟ್ ಮೂಲಕ ಕಠ್ಮಂಡುವಿನ ತ್ರಿಭುವನ್ ಯುನಿವರ್ಸಿಟಿ ಟಿಚೀಂಗ್ ಹಾಸ್ಪಿಟಲ್ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರ ಪ್ರವಾಸಿಗರ ಸಾವಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನಿವೀಸ್ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಹಾರಾಷ್ಟ್ರ ಸಚಿವ ಅನಿಲ್ ಪಾಟೀಲ್, ಉತ್ತರ ಪ್ರದೇಶದ ಪರಿಹಾರ ಆಯುಕ್ತರು ಮತ್ತು ಕಠ್ಮಂಡುವಿನ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ರಾಜ್ಯ ಸರ್ಕಾರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದರು.
10 ದಿನಗಳ ಪ್ರವಾಸಕ್ಕೆ ಮುಂದಾಗಿದ್ದ ಈ ಗುಂಪು ನಾಲ್ಕು ದಿನಗಳ ಹಿಂದೆ ಅಯೋಧ್ಯೆಗೆ ಪ್ರಯಾಣ ನಡೆಸಿದ್ದರು ಎಂದು ಮಹಾರಾಷ್ಟ್ರ ಮಾಜಿ ಸಚಿವ ಏಕನಾಥ್ ಖಡ್ಸೆ ತಿಳಿಸಿದ್ದಾರೆ. ಜಲಗಾಂವ್ ಜಿಲ್ಲೆಯವರಾದ ಖಾಡ್ಸೆ, ದುರಂತದ ಬಗ್ಗೆ ತಿಳಿಯುತ್ತಿದ್ದಂತೆ ಇಲ್ಲಿನ ಕುಟುಂಬಸ್ಥರ ಸಂಬಂಧಿಕರನ್ನು ಭೇಟಿ ಮಾಡಿದ್ದಾರೆ. ಅವರ ಜೊತೆ ಪ್ರಯಾಣಿಸಿ, ಬದುಕುಳಿದವರನ್ನು ಸುರಕ್ಷಿತವಾಗಿ ಕರೆ ತರಲು ಅವರ ಸೊಸೆ ರಕ್ಷಾ ಖಾಡ್ಸೆ ಸಜ್ಜಾಗಿದ್ದು, ಈ ಸಂಬಂಧ ಪಿಎಂಒ ಅನುಮತಿ ಪಡೆದಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ನೇಪಾಳದಲ್ಲಿ ನದಿಗೆ ಬಿದ್ದ ಬಸ್: 14 ಭಾರತೀಯರ ಸಾವು ಶಂಕೆ